ಹಾವೇರಿ: ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದು 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವಂತ ಘಟನೆ ಹಾವೇರಿ ಜಿಲ್ಲೆಯ ನಾಗೇಂದ್ರ ಮಟ್ಟಿಯಲ್ಲಿ ನಡೆದಿದೆ. ಓರ್ವನಿಗೆ ಕಣ್ಣೇ ಕಿತ್ತುಬಂದು ಗಂಭೀರ ಗಾಯವಾಗಿದೆ.
ಭಾನುವಾರ ರಾಜ್ಯಮಟ್ಟದ ಹೋರಿ ಬೆದರಿಸುವಂತ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯನ್ನು ವೀಕ್ಷಿಸಲು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದಲೂ ಜನರು ಬಂದಿದ್ದರು. ಇದರಿಂದಾಗಿ ನಾಗೇಂದ್ರನಮಟ್ಟಿಯಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಹೋರಿ ಬೆದರಿಸುವ ಸ್ಪರ್ಧೆಯನ್ನು ವೀಕ್ಷಿಸುತ್ತಿದ್ದ ನೂರಾರು ಜನರಲ್ಲಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹೋರಿಯೊಂದು ಕೊಂಬಿನಲ್ಲಿ ವ್ಯಕ್ತಿಯೊಬ್ಬರಿಗೆ ತಿವಿದ ಪರಿಣಾಮ ಓರ್ವನ ಕಣ್ಣಿನ ಗುಡ್ಡೆಯೇ ಕಿತ್ತುಬಂದಿರುವುದಾಗಿ ಹೇಳಲಾಗುತ್ತಿದೆ. ಗಾಯಾಳುಗಳು ವಿವಿಧ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ಹೋರಿ ಹಬ್ಬಕ್ಕೆ ಅನುಮತಿ ಇರಲಿಲ್ಲ. ಹೋರಿ ಹಬ್ಬದಲ್ಲಿ ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಹೋಗಿದ್ದರು. ಅವರು ಯಾವುದೇ ದೂರು ನೀಡಿಲ್ಲ. ದೂರು ನೀಡಿದರೆ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಪ್ರಾಣ ಹಾನಿ ಮಾಡುವ ಇಂತಹ ಆಟಗಳನ್ನು ಸರ್ಕಾರ ನಿಷೇದಿಸಬೇಕು ಎಂಬ ಆಗ್ರಹಗಳು ಕೂಡ ಕೇಳಿ ಬಂದಿವೆ.
ಇದನ್ನೂ ನೋಡಿ: ಮರಕುಂಬಿ ದಲಿತ ದೌರ್ಜನ್ಯ ಪ್ರಕರಣ : ಆರೋಪಗಳಿಗೆ ಸಿಕ್ಕಿದ್ದು ತಾತ್ಕಾಲಿಕ ಜಾಮೀನು Janashakthi Media