ನವದೆಹಲಿ: ದೇಶದ ವಿವಿದೆಡೆಗಳಲ್ಲಿ ವೈದ್ಯರ ಮೇಲಿನ ನಾನಾ ರೀತಿಯ ಹಲ್ಲೆ ನಡೆಯುತ್ತಿರುವುದನ್ನು ಖಂಡಿಸಿ ಜೂನ್ 18ರಂದು ದೇಶವ್ಯಾಪಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಪ್ರಕಟಣೆ ನೀಡಿದೆ.
ಸುದ್ದಿಗೋಷ್ಠಿಯನ್ನೂ ಉದ್ದೇಶಿಸಿದ ಮಾತನಾಡಿದ ಐಎಂಎ ಸಂಘದವರು ರಕ್ಷಕರನ್ನು ರಕ್ಷಿಸಿ ಎಂಬ ಘೋಷ ವಾಕ್ಯದ ಅಡಿಯಲ್ಲಿ ದೇಶವ್ಯಾಪಿ ಪ್ರತಿಭಟನೆ ನಡೆಯಲಿದೆ. ಅಸ್ಸಾಂ, ಬಿಹಾರ, ಪಶ್ಚಿಮ ಬಂಗಾಳ, ದೆಹಲಿ, ಉತ್ತರ ಪ್ರದೇಶ, ಕರ್ನಾಟಕ ಹಾಗೂ ಇತರ ಪ್ರದೇಶಗಳಲ್ಲಿ ಕಳೆದ 2 ವಾರಗಳಲ್ಲಿ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆದಿರುವುದು ಅತ್ಯಂತ ಆತಂಕಕಾರಿಯಾಗಿದೆ ಎಂದು ತಿಳಿಸಿದರು.
ಇದನ್ನು ಓದಿ: ಸುಳ್ಳು ಸುದ್ದಿ ಹಾಗೂ ವೈದ್ಯರ ಮೇಲೆ ಹಲ್ಲೆ: ಪ್ರಧಾನಿ ಮಧ್ಯ ಪ್ರವೇಶಿಸಬೇಕೆಂದು ಐಎಂಎ ಆಗ್ರಹ
ಕೊರೊನಾ ಸಂಕಷ್ಟ ಕಾಲದಲ್ಲೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವೈದರಿಗೆ ರಕ್ಷಣೆ ಒದಗಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು ಎಂದು ಐಎಂಎ ತಿಳಿಸಿದೆ
ಬಾಬಾ ರಾಮ್ ದೇವ್ ಆಧುನಿಕ ವೈದ್ಯ ಪದ್ದತಿಯ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು ನಂತರದಲ್ಲಿ ಹೇಳಿಕೆ ವಾಪಸ್ಸು ಪಡೆದಿದ್ದರು. ಈಗ ವೈದ್ಯರು ದೇವದೂತರೆಂದು ಬಣ್ಣಿಸಿ ಲಸಿಕೆ ಹಾಕಿಸಿಕೊಳ್ಳುವುದಾಗಿ ಪ್ರಕಟಿಸಿದ್ದಾರೆ. ಆದರೆ ಅವರು ತಮ್ಮ ಹೇಳಿಕೆ ಮೂಲಕ ನಮಗೆ ಮಾನಸಿಕವಾಗಿ ಕಿರುಕುಳ ನೀಡಿದ್ದನ್ನು ಮರೆಯಲು ಸಾಧ್ಯವಿಲ್ಲ ದೃಢಪಡಿಸಿದರು.
ಇದನ್ನು ಓದಿ: ವೈದ್ಯನ ಮೇಲೆ ಅಮಾನುಷ ಹಲ್ಲೆ: 24 ಆರೋಪಿಗಳ ಬಂಧನ
ಪ್ರತಿಭಟನೆಯ ಬಗ್ಗೆ ರಾಜ್ಯ, ಸ್ಥಳೀಯ ಮಟ್ಟದಲ್ಲಿ ತನ್ನ ಸಂಘಟನೆಗಳಿಗೆ ಸೂಚನೆ ನೀಡಿರುವ ಐಎಂಎ ಕಪ್ಪು ಬ್ಯಾಡ್ಜ್, ಮಾಸ್ಕ್, ರಿಬ್ಬನ್, ಶರ್ಟ್ ಧರಿಸಿ, ವೈದ್ಯಕೀಯ ಸಿಬ್ಬಂದಿಗಳ ಮೇಲಿನ ಹಲ್ಲೆಯ ಬಗ್ಗೆ ಅರಿವು ಅಭಿಯಾನ ಮೂಡಿಸುವ ಮೂಲಕ ವೈದ್ಯರು ಮುಂದಾಗಬೇಕೆಂದು ಕರೆ ನೀಡಿದ್ದಾರೆ.
ಬಾಬಾ ರಾಮ್ ದೇವ್ ಅವರ ಅಲೋಪತಿಗೆ ಸಂಬಂಧಿಸಿದಂತೆ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಐಎಂಎ ಅವರ ಹೇಳಿಕೆಗೆ ಸಂಬಂಧಿಸಿದಂತೆ ಈಗಾಗಲೇ ಕಾನೂನು ಸಮರ ಚಾಲ್ತಿಯಲ್ಲಿದೆ ಎಂದು ಹೇಳಿದೆ.