ಐಎಂಎ ಪ್ರಕರಣ; ಸಿಬಿಐ ವಶಕ್ಕೆ ಮಾಜಿ ಸಚಿವ ರೋಷನ್ ಬೇಗ್

  •  14 ದಿನಗಳ ಕಾಲ ನ್ಯಾಯಾಂಗ ಬಂಧನ

ಬೆಂಗಳೂರು; ಐಎಂಎ ಪ್ರಕರಣ ಸಂಬಂಧ ಪ್ರಮುಖ ಆರೋಪಿಯಾಗಿರುವ ಮಾಜಿ ಶಾಸಕ ರೋಷನ್ ಬೇಗ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣ ಸಂಬಂಧ ಭಾನುವಾರ ಬೆಳಗ್ಗೆ ಸಿಬಿಐ ಬೇಗ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ವಿಚಾರಣೆ ಬಳಿಕ ರೋಷನ್​ ಬೇಗ್​ ಅವರನ್ನು ಬಂಧಿಸಲಾಯಿತು. ಬಳಿಕ ಕೋರಮಂಗಲದ ನ್ಯಾಯಾಧೀಶರ ನಿವಾಸಕ್ಕೆ ಬೇಗ್ ಅವರನ್ನು ಹಾಜರುಪಡಿಸಲಾಯಿತು. ನ್ಯಾಯಾಧೀಶರು ಬೇಗ್ ಅವರನ್ನು ಸಿಬಿಐ ನ್ಯಾಯಾಂಗ ವಶಕ್ಕೆ ಒಪ್ಪಿಸಿದರು.

ಸೋಮವಾರ ಕೋರ್ಟ್ ಗೆ ಹಾಜರು ಪಡಿಸಲು ಕಾಲಾವಕಾಶದ ಕೊರತೆ ಹಿನ್ನೆಲೆಯಲ್ಲಿ ಭಾನುವಾರ ನ್ಯಾಯಾಧೀಶರ ಮುಂದೆ ಬೇಗ್​ನನ್ನು ಸಿಬಿಐ ಹಾಜರುಪಡಿಸಿತು. ಬಳಿಕ ನ್ಯಾಯಾಂಗ  ಬಂಧನಕ್ಕೆ ಒಳಗಾದ ರೋಷನ್ ಬೇಗ್ ಗೆ ಅಧಿಕಾರಿಗಳು ಕ್ವಾರಂಟೈನ್ ಸಿಂಗಲ್ ಸೆಲ್ ನೀಡಿದ್ದಾರೆ. ಸದ್ಯಕ್ಕೆ ಭಾನುವಾರವಾಗಿರುವುದರಿಂದ ಸೋಮವಾರ ಯುಟಿಪಿ ನಂಬರ್ ನೀಡಲಿದ್ದರೆ.

 120B, r/w 420, 406, 405 ಮತ್ತು 128 ಸೆಕ್ಷನ್ ಅಡಿಯಲ್ಲಿ ರೋಷನ್ ಬೇಗ್ ಮೇಲೆ ಕೇಸ್ ದಾಖಲು ಮಾಡಲಾಗಿದೆ.  ರೋಷನ್ ಬೇಗ್​ನನ್ನು ಪೊಲೀಸ್ ಕಸ್ಟಡಿಗೆ ಪಡೆಯಲು ಸೋಮವಾರ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದೆ.

ಐಎಂಎ ಪ್ರಕರಣದಲ್ಲಿ ರೋಷನ್ ಬೇಗ್ ಪಾತ್ರದ ಬಗ್ಗೆ ಪ್ರಬಲ ಸಾಕ್ಷ್ಯಗಳನ್ನು ಸಿಬಿಐ ಸಂಗ್ರಹಿಸಿದೆ.  ಹೀಗಾಗಿ ಭಾನುವಾರ ವಿಚಾರಣೆಗಾಗಿ ರೋಷನ್ ಬೇಗ್ ಅವರಿಗೆ ಕರೆಯಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *