ಬೆಂಗಳೂರು : ನ್ಯೂಸ್ ಕ್ಲಿಕ್ ಸಂಸ್ಥೆ ಮೇಲೆ ನಡೆದಿರುವ ಕಾನೂನು ಬಾಹಿರ ದಾಳಿಯನ್ನು ಖಂಡಿಸಿ, ಅ-05 ರಂದು ಹಲವಾರು ನಾಗರಿಕ ಸಂಘಟನೆಗಳು ಫ್ರೀಡಂಪಾರ್ಕ್ ಬಳಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ:ಸ್ವತಂತ್ರ ಹಾಗೂ ನಿರ್ಭೀತ ಧ್ವನಿಗಳನ್ನು ಅಡಗಿಸುವ ಪ್ರಯತ್ನ – ನ್ಯೂಸ್‌ಕ್ಲಿಕ್ ಆರೋಪ
ಪಿ.ಯು.ಸಿ.ಎಲ್ ರಾಜ್ಯಾಧ್ಯಕ್ಷರಾದ ಅರವಿಂದ್ ನಾರಾಯಣ್ ಮಾತನಾಡಿ, ಪ್ರಬೀರ್ ಪುರ್ಕಾಯಸ್ಥರ ಅವರನ್ನು ದಿಲ್ಲಿ ಪೊಲೀಸ್ ಬಂಧಿಸಿದ್ದಾರೆ. ಪ್ರಬೀರ್ ಅವರನ್ನು 70 ರ ದಶಕದಲ್ಲಿ ಎಮೆರ್ಜೆನ್ಸಿ ಸಮಯದಲ್ಲೂ ಸರ್ಕಾರ ಬಂಧಿಸಿತ್ತು, ಇಂದು ಆಘಿಸಿತ ಎಮೆರ್ಗೆನ್ಸಿ ಇರುವ ಸನ್ನಿವೇಶದಲ್ಲಿ ಸಹ ಬಂಧಿಸಲಾಗಿದೆ ಎಂದರು. ಇಂದು ನಡೆಯುತ್ತಿತುವ ಜನಚಳುವಳಿಗಳ ಬಗ್ಗೆ ಸರ್ಕಾರದ ವೈಫಲ್ಯದ ಬಗ್ಗೆ ಜನರು ತಿಳಿಯಬಾರದೆಂದು ಒಕ್ಕೂಟ ಸರ್ಕಾರ ಸ್ವಾತಂತ್ರ್ಯ ಮಾಧ್ಯಮಗಳ ಮೇಲೆ ದಾಳಿಗಳು ಮಾಡುತ್ತಿದೆ ಎಂದು ಆರೋಪಿಸಿದರು. ಪ್ರತಿಭಟನೆ
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಕಕ್ಷರು ತಾಹಿರ್ ಹುಸೇನ್ ಮಾತನಾಡಿ , ಪ್ರಧಾನಿಯಾದವರು ಅವರ ಸ್ವಂತ ಯೂಟ್ಯೂಬ್ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡುವಂತೆ ಕರೆ ಕೊಡುತ್ತಾರೇ , ದಿಲ್ಲಿ ಪೊಲೀಸ್ ಅವರನ್ನು ಉಪಯೋಗಿಸಿ ಜನಪರ ಮಾಧ್ಯಮಗಳನ್ನು ಹತ್ತಿಕ್ಕುತಿದ್ದಾರೆ ಎಂದರು.
ಇದನ್ನೂ ಓದಿ:ಸ್ವತಂತ್ರ ಸುದ್ದಿ ಮಾಧ್ಯಮ ನ್ಯೂಸ್ ಕ್ಲಿಕ್ ವಿರುದ್ಧ ‘ಯುಎಪಿಎ’ ದಾಖಲು; 2 ಪತ್ರಕರ್ತರು ವಶಕ್ಕೆ!
ವಕೀಲರಾದ ಅವನಿ ಚೋಕ್ಸಿ ಅವರು ಮಾತನಾಡಿ , ಬಂಧಿಸಿದ ಮಾಧ್ಯಮದವರಿಗೆ , ಎಫ್.ಐ.ಆರ್ ಪ್ರತಿ ಸಹ ನೀಡಲಾಗಿಲ್ಲ . ಅದನ್ನು ಕೇಳಿ ನ್ಯಾಯಾಲಯದ ಮೆಟ್ಟಲನ್ನು ಏರಿದಾಗ ಅಲ್ಲೂ ಸಹ ಅದನ್ನು ದಿಲ್ಲಿ ಪೊಲೀಸರು ವಿರೋಧಿಸಿದ್ದಾರೆ. ದಿಲ್ಲಿ ಪೊಲೀಸ್ ಅವರ ಮೇಲೆ ನ್ಯಾಯಾಲಯ ದಂಡ ವಿಧಿಸಬೇಕೆಂದರು. ಇದೆ ವಾರ ಆಂಧ್ರ ಪ್ರದೇಶದಲ್ಲೂ ಸಹ ರೇಡ್ ಗಳು ಆಗಿದೆ, ಅಲ್ಲಿ ವಕೀಲರ ಫೋನ್, ಲ್ಯಾಪ್ಟಾಪ್ ವಶಪಡೆದುಕೊಂಡಿದ್ದಾರೆ. ದಿಲ್ಲಿಯಲ್ಲಿ ಮೂವತ್ತುಕ್ಕೂ ಹೆಚ್ಚು ಪತ್ರಕರ್ತರ ಫೋನ್, ಲ್ಯಾಪ್ ಟಾಪ್ಗಳನ್ನು ವಶಪಡೆದುಕೊಂಡಿದ್ದಾರೆ. ಇದು ಘೋರ ಅಪರಾಧ. ವಕೀಲರ ಬಳಿ ಅವರ ಕಾಕ್ಸಿಗಾರ್ರ ಮಾಹಿತಿ ಇರುತ್ತದೆ, ವರದಿಗಾರರ ಬಳಿ ಅವರ ಮೂಲಗಳ ಮಾಹಿತಿ ಇರುತ್ತದೆ ಇದನ್ನು ಕಾನೂನು ಬಾಹಿರವಾಗಲಿ ಪಡೆಯುವುದರಿಂದ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದರು.
ಹಿರಿಯ ಪತ್ರಕರ್ತೆ ಸಿ.ಜಿ. ಮಂಜುಳಾ ಮಾತನಾಡಿ , ಮಾಧ್ಯಮಗಳ ಮೇಲೆ ಈ ರೀತಿಯ ದಾಳಿಗಳು ಆಗುತ್ತಿರುವುದು ಬಹಳ ಆತಂಕದ ವಿಷಯವಾಗಿದೆ. ಸ್ವಾತಂತ್ರ್ಯ ಮಾಧ್ಯಮಗಳ ಮೇಲೆ ದಾಳಿಗಳಾದಾಗ, ಪ್ರಜಾಪ್ರಭುತ್ವವೇ ಅಪಾಯಕ್ಕೆ ಬೀಳುತ್ತದೆ ಎಂದರು.
ಇದನ್ನೂ ಓದಿ:‘ನ್ಯೂಸ್‌ಕ್ಲಿಕ್’ ಪತ್ರಕರ್ತರ ನಿವಾಸಗಳ ಮೇಲೆ ದಿಲ್ಲಿ ಪೊಲಿಸ್ ದಾಳಿ:ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡನೆ
ಪ್ರೆಸ್ ಕ್ಲಬ್ ಆಫ್ ಇಂಡಿಯಾ ಮಾಜಿ ಅಧ್ಯಕ್ಷರಾದ ಆನಂದ್ ಸಹಾಯ್ ಅವರು ಮಾತನಾಡಿ , ಬ್ರಿಟಿಷ್ ಆಡಳಿತದಲ್ಲೂ ಮಾಧ್ಯಮಗಳ ಮೇಲೆ ಇಂತ ದಾಳಿಗಳಾಗಿರಲಿಲ್ಲ . ಪತ್ರಕರತರನ್ನು ಉಗ್ರವಾದಿಗಳಾಗಿ ಬಿಂಬಿಸುವುದೇ ‘ನ್ಯೂ ಇಂಡಿಯಾ’ ನಾ ಅಂತ ಪ್ರಶ್ನಿಸಿದರು . ಅದಾನಿಯಂತಹದವರ ಅವ್ಯವಹಾರಗಳ ಬಗ್ಗೆ ಮಾತನಾಡುತ್ತಿರುವ ಮಾಧ್ಯಮಗಳ ಮೇಲೆ ಇಂದು ದಾಳಿಯಾಗುತ್ತಿದೆ ಎಂದರು.
ಬಹುತ್ವ ಕರ್ನಾಟಕದ ವಿನಯ್ ಶ್ರೀನಿವಾಸ ರವರು ಮಾತನಾಡಿ , ನ್ಯೂಸ್ ಕ್ಲಿಕ್ ಸಂಸ್ಥೆಯು ಚೀನಾ ಪರ ಪ್ರೋಪಾಗಾಂಡಾ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ಆದರೆ ಇಲ್ಲಿಯ ತನಕ ನ್ಯೂಸ್ ಕ್ಲಿಕ್ ನ ಒಂದು ವರದಿಯಲ್ಲೂ ಆ ರೀತಿ ಚೀನಾ ಪರ ಪ್ರಾಪ್ಯಾಗಾಂಡಾ ಡಾ ಎವಿಡೆನ್ಸ್ ಒದಗಿಸಿಲ್ಲ, ಆ ರೀತಿ ಇದ್ದರೂ ಕಾನೂನು ಪರ ತನಿಖೆ ಆಗಬೇಕು ಬದಲಿಗೆ ಈ ರೀತಿ ಕಾನೂನು ಬಾಹಿರವಾಗಿ ಯಾವುದೇ ದಾಖಲಾತಿ ಇಲಲ್ದೆ ರೆಡ್ ಮಾಡೋದು, ಫೋನ್ ಲ್ಯಾಪ್ಟಾಪ್ ವಶಪಡಿಸಿಕೊಂಡು ಪಾಸ್ವರ್ಡ್ ಕೊಡುವಂತೆ ಒತ್ತಾಯ ಮಾಡೋದು ಸರಿಯಲ್ಲ ಎಂದರು. ಪ್ರತಿಭಟನೆ
ಸಭೆಯನ್ನು ಉದ್ದೇಶಿಸಿ ಹಿರಿಯ ಚಿಂತಕರಾದ ಜಿ.ರಾಮಕ್ರಷ್ಣ ನಗರಗೆರೆ ರಮೇಶ್ ಅವರು , ಹಿರಿಯ ವಕೀಲರಾದ ಬಿ.ಟಿ.ವೆಂಕಟೇಶ್ ಅವರು, ವಿದ್ಯಾರ್ಥಿ ಸಂಘಟನೆಯ ಅರತ್ರಿಕ ದೇ ಅವರು ಮಾತನಾಡಿದರು. ಆಲ್ ಇಂಡಿಯಾ ಸ್ಟುಡೆನ್ಸ್ಟ್ ಅಸೋಸಿಯೇಷನ್ (AISA), ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರಂ ಜಸ್ಟಿಸ್(AILAJ) , ಬಹುತ್ವ ಕರ್ನಾಟಕ , ನೆಟ್ವರ್ಕ್ ಆ ವುಮೆನ್ ಇನ್ ಮೀಡಿಯಾ (NWMI) ಹಾಗು ಡಿಜಿಪಬ್(DIGIPUB), ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ (PUCL) ಸಂಸ್ಥೆಗಳು ಕರೆ ಕೊಟ್ಟಿದ್ದರು.
ವಿಡಿಯೋ ನೋಡಿ:ಹೋರಾಟದ ಹಕ್ಕಿಗಾಗಿ ಆಂದೋಲನ – ಪ್ರತಿಭಟನೆಕಾರರ ಬಂಧನ Janashakthi Media