ಬೆಂಗಳೂರು : ಅಕ್ರಮವಾಗಿ ಮತದಾರರಿಂದ ವೋಟರ್ ಐಡಿ ಪ್ರತಿಗಳು ಹಾಗೂ ಡೇಟಾ ಸಂಗ್ರಹ ಮಾಡುತ್ತಿರುವ ಆರೋಪದಡಿಯಲ್ಲಿ ಗಾಂಧಿನಗರ ಜೆಡಿಎಸ್ ಅಭ್ಯರ್ಥಿ ವಿ ನಾರಾಯಣ ಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್, ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದೆ.
ಕೆಪಿಸಿಸಿ ಕಾನೂನು ವಿಭಾಗದಿಂದ ದೂರು ನೀಡಲಾಗಿದ್ದು, ವಿ ನಾರಾಯಣ ಸ್ವಾಮಿ ಅವರು ತಮ್ಮ ಕಾರ್ಯಕರ್ತರ ಮೂಲಕ ಮನೆ ಮನೆಗೆ ತೆರಳಿ ಕೆಲವು ಮತದಾರರ ವೋಟರ್ ಐಡಿಯ ಝೆರಾಕ್ಸ್ ಪ್ರತಿಗಳನ್ನು ಸಂಗ್ರಹ ಮಾಡುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಇದನ್ನೂ ಓದಿ : ಕಾಂಗ್ರೆಸ್ ನಾಯಕರ ವಿರುದ್ಧ ಲೋಕಾಯುಕ್ತಕ್ಕೆ 10 ದೂರು- ಸಿದ್ದರಾಮಯ್ಯ ವಿರುದ್ಧ 7 ದೂರು
ಈ ಹಿನ್ನೆಲೆಯಲ್ಲಿ ಕೂಡಲೇ ಫ್ಲೈಯಿಂಗ್ ಸ್ಕಾಡ್ ತಂಡವನ್ನು ಕಳಿಸಿ ಈ ಅಕ್ರಮವನ್ನು ತಡೆಗಟ್ಟುವಂತೆ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಈ ಸಂಬಂಧಿಸಿದಂತೆ ಕೆಲವೊಂದು ವಿಡಿಯೋ ದಾಖಲೆಗಳನ್ನು ಕುಡಾ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಜೆಡಿಎಸ್‌ಗೆ ವೋಟ್ ಹಾಕಬೇಕು ಎಂದು ಸ್ಥಳೀಯವಾಗಿ ವೋಟರ್ ಐಡಿಯನ್ನು ಸಂಗ್ರಹ ಮಾಡಿದ್ದಾರೆ. ಸ್ಥಳೀಯ ವ್ಯಕ್ತಿಯೊಬ್ಬರು ಬಂದು ಜೆಡಿಎಸ್‌ಗೆ ಮತ ಹಾಕಬೇಕು ಎಂದು ವೋಟರ್ ಐಡಿ ಸಂಗ್ರಹ ಮಾಡಿದ್ದಾರೆ ಎಂದು ವಿಡಿಯೋದಲ್ಲಿ ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ.
ವೋಟರ್ ಐಡಿ ಸಂಗ್ರಹ ಮಾಡುತ್ತಿದ್ದ ವ್ಯಕ್ತಿಗೆ ತರಾಟೆ :
ವೋಟರ್ ಐಡಿಯನ್ನು ಸಂಗ್ರಹ ಮಾಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾಕಾಗಿ ಗುರುತಿನ ಚೀಟಿಯನ್ನು ಸಂಗ್ರಹ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಗಾಂಧಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸರವಣ್, ಜೆಡಿಎಸ್ ಪಕ್ಷದಿಂದ ಸ್ಲಮ್ ಪ್ರದೇಶದಲ್ಲಿ ವೋಟರ್ ಐಡಿ ಝೆರಾಕ್ಸ್ ಪ್ರತಿ ಸಂಗ್ರಹ ಮಾಡುತ್ತಿದ್ದಾರೆ. ಜೊತೆಗೆ ಮತದಾರರ ಫೋನ್ ನಂಬರ್ ಸಂಗ್ರಹ ಮಾಡುತ್ತಿದ್ದಾರೆ. ಇದಕ್ಕಾಗಿ ಕಾಲೇಜು ವಿದ್ಯಾರ್ಥಿಗಳನ್ನು ಬಳಕೆ ಮಾಡುತ್ತಿದ್ದಾರೆ. ಹಣ ನೀಡುತ್ತೇವೆ ಎಂದು ಈವರೆಗೆ ಸುಮಾರು ಒಂದು ಲಕ್ಷ ಐಡಿ ಪ್ರತಿಗಳನ್ನು ಸಂಗ್ರಹ ಮಾಡಿದ್ದಾರೆ ಎದಿದ್ದಾರೆ.