ಭೋವಿ ನಿಗಮದ ಅಕ್ರಮ ಕೇಸ್: ತನಿಖಾಧಿಕಾರಿ ಎ. ಡಿ ನಾಗರಾಜ್ ಸಸ್ಪೆಂಡ್

ಬೆಂಗಳೂರು: ಭೋವಿ ನಿಗಮದ ಅಕ್ರಮ ಕೇಸ್ ತನಿಖೆಯಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ತನಿಖಾಧಿಕಾರಿಯನ್ನ ಹಿರಿಯ ಅಧಿಕಾರಿಗಳು ಸಸ್ಪೆಂಡ್ ಮಾಡಿದ್ದಾರೆ.

ಆರೋಪಿಗಳಿಂದ ಹಣ ಪಡೆದಿದ್ದ ತನಿಖಾಧಿಕಾರಿ ಎ. ಡಿ ನಾಗರಾಜ್ ರನ್ನ ಸಸ್ಪೆಂಡ್ ಮಾಡಲಾಗಿದ್ದು, ಭೋವಿ ನಿಗಮದಲ್ಲಿ ಕೋಟಿ ಕೋಟಿ ಹಣ ಅಕ್ರಮ ನಡೆದಿರೋ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸಿಐಡಿ ತನಿಖೆಗೆ ಸರ್ಕಾರ‌ ಆದೇಶ ನೀಡಿದೆ.

ಇದನ್ನೂ ಓದಿ: ವೈರಲ್ ವಿಡಿಯೋ | ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿದ ರೈಲು!

ಈ ಸಂಬಂಧ ನಿಗಮದ ಎಮ್.ಡಿ ನಾಗರಾಜಪ್ಪ, ಹಾಗೂ ಲೀಲಾವತಿ ಸೇರಿದಂತೆ ಹಲವರು ಬಂಧನ ಮಾಡಲಾಗಿದ್ದು, ಆರೋಪಿಗಳನ್ನ ಬಂಧಿಸಿ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು ತನಿಖೆ ವೇಳೆ ತನಿಖಾಧಿಕಾರಿ ಎ.ಡಿ ನಾಗರಾಜ್ ಭ್ರಷ್ಟಾಚಾರ ಆರೋಪ ಸಾಬೀತು ಮಾಡಿದ್ದಾರೆ.

ಆರೋಪಿಗಳಿಂದ ಹಣ ಪಡೆದ ಆರೋಪ ಸಾಬೀತು ಆಗಿದ್ದು ಈ ಹಿನ್ನೆಲೆ‌ ತನಿಖಾಧಿಕಾರಿಯಾಗಿದ್ದ ಎ.ಡಿ ನಾಗರಾಜ್ ಸಸ್ಪೆಂಡ್ ಮಾಡಿ ಸಿಐಡಿ ಡಿಜಿ ಸಲೀಂ ಆದೇಶ ಹೊರಡಿಸಿದ್ದಾರೆ.

ಇದನ್ನೂ ನೋಡಿ: ಬಿಜೆಪಿ – ಜೆಡಿಎಸ್‌ ಸಂಚು, ಒಳಸಂಚು, ರಾಜಭವನ ದುರುಪಯೋಗ – ಇದ್ಯಾವುದಕ್ಕೂ ನಾನು ಹೆದರುವವನಲ್ಲ – ಸಿದ್ದರಾಮಯ್ಯ

Donate Janashakthi Media

Leave a Reply

Your email address will not be published. Required fields are marked *