ಹೊಸದಿಲ್ಲಿ: ಬಿಎಚ್‌ಯು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದಲ್ಲಿ ಬಿಜೆಪಿಯ ಸ್ಥಳೀಯ ನಾಯಕರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಅದರ ವಿರುದ್ಧ ಕಾಂಗ್ರೆಸ್ ಸೋಮವಾರ ವಾಗ್ದಾಳಿ ನಡೆಸಿದ್ದು, ಆಡಳಿತ ಪಕ್ಷವು “ಬೇಟಿ ಬಚಾವೋ” ಘೋಷಣೆಯನ್ನು ನೀಡುತ್ತದೆ ಆದರೆ ಅದರ ಕ್ರಮಗಳು “ಬೇಟಿ ರೂಲಾವೋ (ಹೆಣ್ಣು ಮಗುವನ್ನು ಅಳುವಂತೆ ಮಾಡುವ)” ಎಂದು ಹೇಳಿದೆ.
ಒಂದು ಕಡೆ ಬಿಜೆಪಿಯವರು ‘ಬೇಟಿ ಬಚಾವೋ, ಬೇಟಿ ಪಢಾವೋ’ ಎನ್ನುತ್ತಿದ್ದರೆ, ಮತ್ತೊಂದೆಡೆ ಮಹಿಳೆಯರ ಪಾಲಿಗೆ ‘ಬಲಾತ್ಕಾರಿ (ಅತ್ಯಾಚಾರಿ) ಜನತಾ ಪಕ್ಷವಾಗಿ ಮಾರ್ಪಟ್ಟಿರುವುದು ಸತ್ಯ’ ಎಂದು ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ನೆಟ್ಟಾ ಡಿಸೋಜಾ ಹೇಳಿದ್ದಾರೆ.
ಇದನ್ನೂ ಓದಿ: ʼಪ್ರಧಾನಿ ನರೇಂದ್ರ ಮೋದಿʼಯೇ ಬಂದು ನಿಂತರೂ, ಮೈಸೂರು-ಕೊಡಗು ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ!
ಉತ್ತರ ಪ್ರದೇಶದ ಐಐಟಿ-ಬಿಎಚ್‌ಯು ಕ್ಯಾಂಪಸ್‌ನಲ್ಲಿ ಮಹಿಳಾ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಎರಡು ತಿಂಗಳ ನಂತರ, ಪೊಲೀಸರು ಭಾನುವಾರ ಮೂವರನ್ನು ಬಂಧಿಸಿದ್ದು, ಬಿಜೆಪಿ ಪದಾಧಿಕಾರಿಗಳು ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಮೂವರು ಆರೋಪಿಗಳೂ ತಾವು ಬಿಜೆಪಿಯ ಐಟಿ ಸೆಲ್ ಸದಸ್ಯರು ಎಂದು ತಮ್ಮ ಫೇಸ್‌ಬುಕ್ ಪುಟದಲ್ಲಿ ಹೇಳಿಕೊಂಡಿದ್ದಾರೆ.
ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೆಟ್ಟಾ ಡಿಸೋಜಾ, “ಈ ವಿಷಯದ ಬಗ್ಗೆ ಪ್ರಧಾನಿ ಮೌನ ಮುರಿಯಬೇಕು” ಎಂದು ಒತ್ತಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರೊಂದಿಗೆ ಬಂಧಿತ ಮೂವರ ಚಿತ್ರಗಳನ್ನು ಹಂಚಿಕೊಂಡ ಡಿಸೋಜಾ ಅವರು ಹಂಚಿಕೊಂಡಿದ್ದಾರೆ. ಬಿಎಚ್‌ಯು ವಿದ್ಯಾರ್ಥಿಗಳು ಈ ಘಟನೆಯನ್ನು ಪ್ರಸ್ತಾಪಿಸದಿದ್ದರೆ, ಇತರ ಅನೇಕ ಪ್ರಕರಣಗಳಂತೆ ಇದನ್ನು ಹತ್ತಿಕ್ಕಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
“ಎರಡು ತಿಂಗಳ ಹಿಂದೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಘಟನೆಯ ನಂತರ ಮೂವರೂ ಆರೋಪಿಗಳು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿ ಗೋಚರಿಸಿದ್ದರು. ಅವರ ಹೆಸರು ಕುನಾಲ್ ಪಾಂಡೆ, ಅಭಿಷೇಕ್ ಚೌಹಾಣ್ ಮತ್ತು ಸಕ್ಷಮ್ ಪಟೇಲ್, ಎಲ್ಲರೂ ಬಿಜೆಪಿ ಐಟಿ ಸೆಲ್‌ನ ಪದಾಧಿಕಾರಿಗಳು” ಎಂದು ನೆಟ್ಟಾ ಹೇಳಿದ್ದಾರೆ.
ಇದನ್ನೂ ಓದಿ: ಹೊಸ ಕ್ರಿಮಿನಲ್ ಕಾನೂನು ವಿರೋಧಿಸಿ ಟ್ರಕ್ ಚಾಲಕರ ದೇಶವ್ಯಾಪಿ ಪ್ರತಿಭಟನೆ
“ಒಂದೆಡೆ ಬಿಜೆಪಿ ‘ಬೇಟಿ ಬಚಾವೋ, ಬೇಟಿ ಪಢಾವೋ’ ಎನ್ನುತ್ತದೆ, ಮತ್ತೊಂದೆಡೆ ಸತ್ಯವೆಂದರೆ ಬಿಜೆಪಿ ಮಹಿಳೆಯರ ಪಾಲಿಗೆ ‘ಬಾಲತ್ಕಾರಿ (ಅತ್ಯಾಚಾರಿ) ಜನತಾ ಪಕ್ಷ’ ಆಗಿದೆ. ಬೇಟಿ ಬಚಾವೋ ಘೋಷಣೆ ಮತ್ತು ಕೆಲಸ ಹೆಣ್ಣುಮಗುವನ್ನು ಅಳಿಸುವುದು. ಪ್ರಧಾನಿ ಮೋದಿಯ ಸ್ವಂತ ಲೋಕಸಭಾ ಕ್ಷೇತ್ರದಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಆರೋಪಿಗಳು ಬಿಜೆಪಿ ಐಟಿ ಸೆಲ್ ಸದಸ್ಯರಾಗಿದ್ದಾರೆ. ಈ ಅತ್ಯಾಚಾರಿಗಳು ಮಧ್ಯಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದ ಕಾರಣ ಅವರನ್ನು ಬಂಧಿಸಲು 60 ದಿನಗಳು ಬೇಕಾಯಿತು” ಎಂದು ಡಿಸೋಜಾ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ ಡಾಲಿ ಶರ್ಮಾ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಉತ್ತರ ಪ್ರದೇಶದಲ್ಲಿ ದುರ್ಬೀನು ಹಿಡಿದು ಹುಡುಕಿದರೂ ಕ್ರಿಮಿನಲ್‌ಗಳು ಸಿಗುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳುತ್ತಿದ್ದರು, ಬೈನಾಕ್ಯುಲರ್‌ಗಳ ಅಗತ್ಯವಿಲ್ಲ, ಏಕೆಂದರೆ ನಿಮ್ಮ ಪಕ್ಕದಲ್ಲಿ ಅಪರಾಧಿಗಳು ಕುಳಿತಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ಕ್ರಿಮಿನಲ್‌ಗಳ ಮನೆಗಳಿಗೆ ಬುಲ್ಡೋಜರ್‌ಗಳು ಹೋಗುತ್ತಿರುವುದು ಕಂಡುಬಂದಿಲ್ಲ” ಎಂದು ಶರ್ಮಾ ಹೇಳಿದ್ದಾರೆ.
ವಿಡಿಯೊ ನೋಡಿ: ವೈದ್ಯನನ್ನು ನಂಬಿ, ಗೂಗಲ್ ಡಾಕ್ಟರನ್ನಲ್ಲ! Janashakthi Media