ಶೇರ್‌ ಷಾ ಅತ್ಯುತ್ತಮ ಚಿತ್ರ ಎಂದು ಘೋಷಿಸಿದ ಐಐಎಫ್ಎ

22 ನೇ ವರ್ಷದ  ಇಂಟರ್ ನ್ಯಾಷನಲ್ ಇಂಡಿಯನ್  ಫಿಲ್ಮ್ ಅಕಾಡೆಮಿ ಅವಾರ್ಡ್ಸ್ 2022 ಅಬುಧಾಬಿಯಲ್ಲಿ ಜೂನ್ 3 ಮತ್ತು 4ರಂದು ನಡೆದ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಘೋಷಿಸಿದೆ.

ಕೊವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸಮಾರಂಭ ಆಯೋಜನೆಗೊಂಡಿರಲಿಲ್ಲ. ಈ ವರ್ಷ ಮೇ 19-21ರೊಳಗೆ ಸಮಾರಂಭ ನಡೆಯಬೇಕಿತ್ತು. ಆದರೆ ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್​ ಜಯೇದ್ ಅಲ್​ ನ್ಹ್ಯಾನ್​ ನಿಧನದಿಂದಾಗಿ ಕಾರ್ಯಕ್ರಮ ಮುಂದೂಡಲಾಗಿತ್ತು.

ಪ್ರಸ್ತುತ ನಡೆದ ಸಮಾರಂಭದಲ್ಲಿ ಸಲ್ಮಾನ್ ಖಾನ್, ವಿಕ್ಕಿ ಕೌಶಲ್, ಶಾಹಿದ್ ಕಪೂರ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್, ಕೃತಿ ಸನೋನ್, ಅನನ್ಯಾ ಪಾಂಡೆ, ಎಆರ್ ರೆಹಮಾನ್, ಸಾರಾ ಅಲಿ ಖಾನ್, ಟೈಗರ್ ಶ್ರಾಫ್​, ಯೋ ಯೋ ಹನಿ ಸಿಂಗ್ ಮೊದಲಾದವರು ಭಾಗವಹಿಸಿದ್ದರು. ಸಲ್ಮಾನ್ ಖಾನ್, ಮನೀಷ್ ಪೌಲ್ ಹಾಗೂ ರಿತೇಶ್ ದೇಶ್​ಮುಖ್​ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕ್ಯಾಪ್ಟನ್ ವಿಕ್ರಮ್​ ಬಾತ್ರಾರ ಜೀವನ ಆಧರಿಸಿದ ‘ಶೇರ್​ಷಾ’ ಚಿತ್ರ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ಗೆದ್ದುಕೊಂಡಿತು. ಈ ಚಿತ್ರಕ್ಕಾಗಿ ವಿಷ್ಣು ವರ್ಧನ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗೆದ್ದರು. ವಿಕ್ಕಿ ಕೌಶಲ್ ‘ಸರ್ದಾರ್ ಉಧಮ್ ಸಿಂಗ್’ ಚಿತ್ರಕ್ಕಾಗಿ ಪ್ರಶಸ್ತಿ ಗೆದ್ದರೆ, ‘ಮಿಮಿ’ ಚಿತ್ರಕ್ಕಾಗಿ ಕೃತಿ ಸನೋನ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದು ಸಂತಸ ವ್ಯಕ್ತ ಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *