ಬೆಳಗ್ಗೆ ಜೀವ ಇದ್ರೆ ಇಡ್ಲಿಗೂ ಸೈ; ಸತ್ತಿದ್ರೆ ವಡೆಗೂ ಸೈ!

ಸೋಷಿಯಲ್ ಮೀಡಿಯಾದ ಭಕ್ತ ಕುಳುವಾರಿಗಳಲ್ಲಿ ಎರಡು ವಿಧ. ಒಂದು ಮಾಸ್ ಭಕ್ತರು ಇನ್ನೊಂದು ಕ್ಲಾಸ್ ಭಕ್ತರು. ಈ “ಮಾಸ್ ಭಕ್ತರು” ವಾಟ್ಸಾಪ್ ಗಿರಾಕಿಗಳಾಗಿದ್ದು, ಏನೇ ವಿಷಯ ಇದ್ದರೂ ಎಲ್ಲೆಂದರಲ್ಲಿ ಕೆಟ್ಟಾಕೊಳಕ ಕಾಮೆಂಟ್‌ಗಳೊಂದಿಗೆ ಬಂದಿಳಿಯುತ್ತಾರೆ. ಅವರನ್ನು ಬ್ಲಾಕ್ ಮಾಡಿಟ್ಟರೆ ಮುಗಿಯಿತು. ಆದರೆ ಈ “ಕ್ಲಾಸ್ ಭಕ್ತರು” ಅಪಾಯಕಾರಿ. ಅವರು ತಮ್ಮ ಇಚ್ಛೆಯ ಸರ್ಕಾರದ ಯಾವುದೇ ಬ್ಲಂಡರ್ ಅನ್ನು ಶತಾಯಗತಾಯ ಸಮರ್ಥಿಸಿಕೊಳ್ಳಬಲ್ಲರು. ಒಮ್ಮೆ ರುಬ್ಬಿ ಸಿದ್ಧಗೊಂಡ ಬಳಿಕ ಅವರಿಗೆ ಇಡ್ಲಿಯೂ ನಡೆಯುತ್ತದೆ, ವಡೆಯೂ ನಡೆಯುತ್ತದೆ! ಎರಡನ್ನೂ ಬಹಳ ರುಚಿ ಎಂದು ಹೊಗಳುವವರು ಅವರು. ಜೀವ

-ರಾಜಾರಾಂ ತಲ್ಲೂರು

ಇಷ್ಟು ಮುನ್ನುಡಿಯೊಂದಿಗೆ ನಾನು ಹೇಳಹೊರಟಿರುವುದು ಹಾಲೀ ಚರ್ಚೆಯಲ್ಲಿರುವ E20 ಇಂಧನದ ಬಗ್ಗೆ. ಅರ್ಥಾತ್ ಎಥನಾಲ್ ಅನ್ನು ವಾಹನಗಳ ಇಂಧನದಲ್ಲಿ ಮಿಶ್ರಣಮಾಡಿ ಬಳಸುವ ಸರ್ಕಾರದ ತೀರ್ಮಾನ ಮತ್ತು ಅದರ ಸಮರ್ಥನೆಗಳ ಬಗ್ಗೆ. ಜೀವ

ನನ್ನ ಅನ್ನಿಸಿಕೆಯಂತೆ, ಈ ಪ್ರಕರಣ ನಾನು ಆಗಾಗ ಹೇಳುತ್ತಾಬಂದಿರುವಂತೆ ನೀರಿಗೆ ಧುಮುಕಿದ ಬಳಿಕ ಈಜು ಕಲಿಯುವ ಪುಸ್ತಕ ಅರಸುವ ಹಾಲೀ ಸರ್ಕಾರದ “ಹಾಲ್‌ಮಾರ್ಕ್” ವ್ಯವಸ್ಥೆಗೆ ಮಗದೊಂದು ಉದಾಹರಣೆ. ಜೀವ

ಸಾರ್ವಜನಿಕ ನೆನಪು ತೀರಾ ಸಣ್ಣದು ಎಂಬುದನ್ನೇ ಲಾಭ ಮಾಡಿಕೊಂಡು ತನ್ನ ಪ್ರಮಾದಗಳನ್ನೆಲ್ಲವನ್ನೂ “ಕ್ರಾಂತಿಕಾರಕ” ಪರಿವರ್ತನೆ ಎಂದು ನಂಬಿಸುವ “ಎಕೊಸಿಸ್ಟಮ್” ಒಂದನ್ನು ಕಟ್ಟಿಕೊಂಡಿರುವುದು ಹಾಲೀ ಆಳುವವರ ದೊಡ್ಡ ಶಕ್ತಿ. ಜೀವ

ಇದನ್ನೂ ಓದಿ: ಬಂಜಾರ, ಭೋವಿ ಸಮುದಾಯಗಳಿಗೆ ಅನ್ಯಾಯ: ಸೆಪ್ಟೆಂಬರ್‌ 8ರಂದು ಪ್ರತಿಭಟನೆ

ಈ ಎಥನಾಲ್ ಮಿಶ್ರಣದ ಇಷ್ಯೂವನ್ನೇ ತೆಗೆದುಕೊಳ್ಳಿ. 2019ಕ್ಕೆ ಮುನ್ನ ಭಾರತದಲ್ಲಿ ಇದ್ದುದು ಕೇವಲ 59 ಸ್ಯಾನಿಟೈಸರ್ ಉತ್ಪಾದನಾ ಘಟಕಗಳು. ಈ ಸ್ಯಾನಿಟೈಸರ್ ನಲ್ಲಿ 96% ಎಥನಾಲ್ ಇದೆ. ಕೋವಿಡ್ ಹೆಸರಲ್ಲಿ ವರ್ಷಕ್ಕೆ 10 ಲಕ್ಷ ಲೀ. ಇದ್ದ ಎಥನಾಲ್ ಉತ್ಪಾದನೆ 2020 ಆಗಸ್ಟ್ ಹೊತ್ತಿಗೆ ದಿನಕ್ಕೆ 30ಲಕ್ಷ ಲೀ. ಆಯಿತು. ಉತ್ಪಾದನೆಯಲ್ಲಿ 1000%ಗೂ ಹೆಚ್ಚು ಏರಿಕೆ. 2021ರ ಹೊತ್ತಿಗೆ ದೇಶದಲ್ಲಿ ಬಳಕೆ ಆಗದೇ ದಾಸ್ತಾನು ಉಳಿದ ಎಥನಾಲ್ ಪ್ರಮಾಣ 3.9ಕೋಟಿ ಲೀಟರ್. (ಈ ಎಲ್ಲ ವಿವರಗಳು ಬೇಕಾಗಿದ್ದರೆ ನನ್ನ “ಕರಿಡಬ್ಬಿ” ಓದಬಹುದು)

ಹೀಗೆ ದೇಶಕ್ಕಲ್ಲದ ಗಾತ್ರದಲ್ಲಿ ಸ್ಯಾನಿಟೈಸರ್ ಹೆಸರಲ್ಲಿ ಉತ್ಪಾದನೆ ಆದ ಎಥನಾಲ್‌ಗೆ ಒಂದು ವಿಲೇವಾರಿ ಹಾದಿ ಬೇಕಲ್ಲ- ಅದು ಈ ಬ್ಲೆಂಡಿಂಗ್ ಎಂಬ ಮಾಸ್ಟರ್ ಸ್ಟ್ರೋಕ್. ಈ ವಿವರಗಳನ್ನೆಲ್ಲ ಮರೆಮಾಚಿ, ಈಗ ಕೇವಲ ಇತ್ತೀಚಿನ ಸಂಗತಿಗಳೊಂದಿಗೆ ಕ್ಲಾಸ್ ಭಕ್ತರು ಸಮರ್ಥನೆ ಶುರುಹಚ್ಚಿಕೊಂಡಿದ್ದಾರೆ.

ಭಾರತದಲ್ಲಿ ಪರ್ಯಾಯ ಇಂಧನಗಳಿಗೆ ಹುಡೂಕಾಟದ ಹೆಸರಿನಲ್ಲಿ ಎಥನಾಲ್ ಬ್ಲೆಂಡಿಂಗ್ ಚಿಂತನೆ ಶುರು ಆದದ್ದು 2001ರಲ್ಲೇ. ಆದರೆ, ಈ ಪೈಲಟ್ ಯೋಜನೆ ಕಾರ್ಯಸಾಧು ಅಲ್ಲ ಎಂಬ ಕಾರಣಕ್ಕೆ ವೇಗದಿಂದ ಮುಂದುವರಿದಿರಲಿಲ್ಲ. ಅದು ವೇಗ ಪಡೆದುಕೊಂಡದ್ದು 2019ರ ಕೋವಿಡ್ ಕಾಟದ ಬಳಿಕವೇ. ಅಧಿಕಾರಸ್ಥರು (ಸ್ವತಃ ಹಿರಿಯ ಸಚಿವ ಗಡ್ಕರಿ ಅವರ ಕುಟುಂಬ) , ಹಲವು ಆನಿಗಳು – ಎಲ್ಲರೂ ಕೋವಿಡ್ ಕಾಲದ ಲಾಭಕ್ಕೆಂದು ಎಥನಾಲ್ ಉತ್ಪಾದನೆಯಲ್ಲಿ ತೊಡಗಿಕೊಂಡದ್ದರಿಂದ, ಅವರ ಹೂಡಿಕೆಗಳು ನೆಲಕಚ್ಚದಂತೆ ಕಾಪಾಡುವುದಕ್ಕೆ ಸರ್ಕಾರ ಕಂಡುಕೊಂಡ ಸುಲಭ ಮಾರ್ಗವೇ ಈ “ಬ್ಲೆಂಡಿಂಗ್” ಎಂದು ಮೇಲುನೋಟಕ್ಕೆ ಅನ್ನಿಸುತ್ತದೆ.

ಇದನ್ನೂ ನೋಡಿ: ಸರ್‌ (SIR) ಅಂದ್ರೆ ಮತದಾರರನ್ನು ಹೊರದಬ್ಬುವುದೆ? ವಿಶ್ಲೇಷಣೆ – ಗುರುರಾಜ ದೇಸಾಯಿ Janashakthi Media

ಇದಕ್ಕೆ ಬ್ರೆಜಿಲ್‌ನ ಯಶಸ್ಸು ಮತ್ತಿತರ ಉದಾಹರಣೆಗಳನ್ನೀಗ ಬೊಟ್ಟುಮಾಡಲಾಗುತ್ತಿದೆ. ಆದರೆ ನಮ್ಮಲ್ಲಿ ಬ್ರೆಜಿಲ್‌ನಲ್ಲಾದಷ್ಟು ಪೂರ್ವಸಿದ್ಧತೆಗಳೆಲ್ಲ ನಡೆದಿವೆಯೇ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಈ ಇಡಿಯ ಪ್ರಕರಣಕ್ಕೆ ಆಹಾರ ಉತ್ಪಾದನೆ-ಪೂರೈಕೆ ಅಸಮತೋಲನದ ಇನ್ನೊಂದು ಮಗ್ಗುಲು ಕೂಡ ಇದೆ.

ಈಗ ಇಲ್ಲಿ ಮೈಲೇಜ್, ವಾಹನ ವಿಮೆ ನಿರಾಕರಣೆ ಮತ್ತಿತರ ಸಂಗತಿಗಳು ಚರ್ಚೆ ಆಗತೊಡಗಿವೆ. ಸರ್ಕಾರ ಸ್ಪಷ್ಟೀಕರಣಗಳಲ್ಲಿ ನಿರತವಾಗಿದೆ. ಇದು ಸರ್ಕಾರಕ್ಕೆ ಸಮಗ್ರ ದೃಷ್ಟಿಕೋನವಾಗಲೀ, ದೂರದೃಷ್ಟಿಯಾಗಲೀ ಇಲ್ಲದಿರುವುದನ್ನಷ್ಟೇ ತೋರಿಸುತ್ತದೆ. ಈ ಬಗ್ಗೆ ರೀಮುಗಟ್ಟಲೆ ಬರೆಯಬಹುದು ಆದರೆ ಸಮಯ ಇಲ್ಲ. ಆಸಕ್ತರು ವಿವರಗಳಿಗೆ ಕೆಳಗೆ ನೀಡಲಾದ ಲಿಂಕ್‌ಗಳನ್ನೆಲ್ಲ ಗಮನಿಸಿದರೆ ವಾಸ್ತವ ನಿಮಗೆ ಅರಿವಾಗಬಹುದು. ನಾನಿಲ್ಲಿ ಹೇಳಿರುವುದು ಟ್ರೇಲರ್ ಮಾತ್ರ.
ಲಿಂಕ್‌ಗಳು:

ಸರ್ಕಾರ ಈಗ ನೀಡಿರುವ ಸ್ಪಷ್ಟೀಕರಣ: https://www.pib.gov.in/PressReleasePage.aspx?PRID=2155558&fbclid=IwY2xjawMl5RRleHRuA2FlbQIxMQABHiHsLqlpgfpMxeZ5HwQu6p1zLovfBjcHXXCd2BySPhgSufK_r-vApQ5_oVgU_aem_ks_24QqhtWbsm5T5jFe4kg

ನೀತಿ ಆಯೋಗದ ಎಥನಾಲ್ ಬ್ಲೆಂಡಿಂಗ್ ರೋಡ್ ಮ್ಯಾಪ್: https://www.niti.gov.in/sites/default/files/2021-06/EthanolBlendingInIndia_compressed.pdf

ಸಚಿವ ಸಂಪುಟ ಎಥೆನಾಲ್‌ಅನ್ನು 2019ರಲ್ಲಿ ತೈಲ ಕಂಪನಿಗಳಿಗೆ ತೆರೆದದ್ದು: https://www.pib.gov.in/PressReleasePage.aspx?PRID=1583946

Donate Janashakthi Media

Leave a Reply

Your email address will not be published. Required fields are marked *