ಜಿ.ಎನ್. ನಾಗರಾಜ್
ಕಾಶ್ಮೀರ ಭಯೋತ್ಪಾದನೆಯ ಸಮಸ್ಯೆ ಪರಿಹಾರಕ್ಕೆ ಪಂಜಾಬಿನ ಪಾಠಗಳು. ಪಂಜಾಬಿನಲ್ಲಿ ನಿತ್ಯ ಭಯೋತ್ಪಾದನೆಯ ದಾಳಿಗಳು ನಡೆಯುತ್ತಿದ್ದ ಸಮಯ. ಪಾಕ್ ಗಡಿ ಭಾಗದಲ್ಲಿ 230 ಭಯೋತ್ಪಾದಕರ ತರಬೇತಿ ಕೇಂದ್ರಗಳನ್ನು ಸಿಐಎ ತನ್ನ ಹಣ, ಶಸ್ತ್ರಾಸ್ತ್ರಗಳಿಂದ ನಡೆಸುತ್ತಿದ್ದರು. ಪಾಕ್ ತನ್ನ ನೆಲವನ್ನು ಭಾರತದ ಗಡಿಯಲ್ಲಿ, ಅಫ್ಘಾನಿಸ್ತಾನದ ಗಡಿಯಲ್ಲಿ ದಶಕಗಳ ಕಾಲ ಸಿಐಎಗೆ ಬಾಡಿಗೆಗೆ ಕೊಟ್ಟು ಅಮೆರಿಕದಿಂದ ಬಹು ದೊಡ್ಡ ಪ್ರಮಾಣದ ಧನ ಸಹಾಯ ಪಡೆಯುತ್ತಿತ್ತು. ಒಳಗೆ
ಇದಕ್ಕೆ ಹಿನ್ನೆಲೆಯೆಂದರೆ ಅಮೆರಿಕ ನೆಟೊ ರೀತಿಯಲ್ಲಿ ಸೀಟೋ, ಸೆಂಟೋ ಎಂಬ ಮಿಲಿಟರಿ ಕೂಟಗಳನ್ನು ರಚಿಸಿ ಅದಕ್ಕೆ ಪಾಕ್ ಅನ್ನು ಸೇರಿಸಿಕೊಂಡಿತ್ತು.
ಪಂಜಾಬಿನಲ್ಲಿ ಭಯೋತ್ಪಾದನೆಯಿಂದ ಸಾವಿರಾರು ಸಾಮಾನ್ಯ ಜನರು ಸಾವನ್ನು ಅಪ್ಪಿದ್ದರು. ಈ ಭಯೋತ್ಪಾದನೆಯನ್ನು, ಪಂಜಾಬ್ ಪ್ರತ್ಯೇಕ ದೇಶವಾಗುವ ಒತ್ತಾಯವನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಸಿಪಿಐಎಂ ನ 200 ಕ್ಕೂ ಹೆಚ್ಚು ಯುವಕರು, ರೈತರು ಭಯೋತ್ಪಾದಕರನ್ನು ಎದುರಿಸಿ ಪ್ರಾಣ ತೆತ್ತಿದ್ದಾರೆ.
ಭೀಂದ್ರನವಾಲೇ ಹತ್ಯೆ, ಇಂದಿರಾಗಾಂಧಿಯವರ ಬಲಿ ತೆಗೆದುಕೊಂಡ ದೊಡ್ಡ ಭಯೋತ್ಪಾದನೆ ಅದು. ಈಗ್ಯಾಕೆ ಈ ಕಥೆ ಎಂದರೆ , ಅಷ್ಟೊಂದು ತೀವ್ರವಾಗಿದ್ದ ಈ ಭಯೋತ್ಪಾದನೆ ನಂತರ ತಣ್ಣಗಾಯಿತು. ಏಕೆ ಹೇಗೆ ? ಎಂದರೆ ಸರ್ಕಾರದ ಮಿಲಿಟರಿ ಕ್ರಮಗಳಿಂದಲ್ಲ.
ಇದನ್ನೂ ಓದಿ: ರಫೇಲ್ ಹಾರಿಸಿದ ಮೊದಲ ಭಾರತೀಯ ಹಿಲಾಲ್ ಅಹ್ಮದ್: ಆಪರೇಷನ್ ಸಿಂಧೂರ್‌ನಲ್ಲಿ ಪ್ರಮುಖ ಪಾತ್ರ ಒಳಗೆ
ಪಂಜಾಬಿನ ಜನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಿದ್ದರಿಂದ. ಪಂಜಾಬಿನ ಜನತೆ ತಮ್ಮ ಭವಿಷ್ಯ ಭಾರತದ ಒಳಗೇ ಎಂದು ಮನಗಾಣುವ ಪರಿಸ್ಥಿತಿಯನ್ನು ಉಂಟು ಮಾಡಿದ್ದರಿಂದ.
ಈಗ ಕಾಶ್ಮೀರದಲ್ಲಿ ಚುನಾವಣೆ ನಡೆದು ಜನರು ಬಯಸಿದ ಸರ್ಕಾರ ಅಸ್ಥಿತ್ವಕ್ಕೆ ಬಂದಿರುವ ಸಂದರ್ಭದಲ್ಲಿ, ತಮ್ಮ ಬದುಕಿಗೆ ಶಾಂತಿ ಅವಶ್ಯ ಎಂದು ಜನ ಭಾವಿಸಿದ ಕಾರಣ ಜನ ಪಹಲ್ಗಾಮ್ ಭಯೋತ್ಪಾದನೆಯ ವಿರುದ್ಧ ದೊಡ್ಡ ಪ್ರಮಾಣದ ವಿರೋಧ ವ್ಯಕ್ತ ಪಡಿಸಿದ್ದಾರೆ.
ಅದನ್ನು ಅಡಿಪಾಯವಾಗಿಟ್ಟುಕೊಂಡು ಕೇಂದ್ರ ಸರ್ಕಾರ ಮುಂದುವರೆಯಬೇಕು. ಕಾಶ್ಮೀರದ ಜನ ಭಯೋತ್ಪಾದನೆಗೆ ಬೆಂಬಲ ನೀಡುವುದು ನಿಲ್ಲುವಂತೆ ಇವರ ನೀತಿ, ತಕ್ಷಣದ ಕ್ರಮಗಳು ಇರಬೇಕು.
ಇಂದೂ ಕೂಡ ಸಿಪಿಐಎಂ ಸಂಗಾತಿಗಳು ಭಯೋತ್ಪಾದನೆ ವಿರೋಧಿಸಿ ಅದರ ವಿರುದ್ಧ ಜನರ ನಡುವೆ ಅರಿವು ಮೂಡಿಸಲು ಶ್ರಮಿಸುತ್ತಿದ್ದಾರೆ. ಭಯೋತ್ಪಾದಕರ ಹಿಟ್ ಲಿಸ್ಟ್ ನಲ್ಲಿ ಅತ್ಯಂತ ಮೇಲಿನ ಸ್ಥಾನದಲ್ಲಿದ್ದಾರೆ.
ಅವರೆಲ್ಲರ ಅಭಿಪ್ರಾಯವೆಂದರೆ ಕೇಂದ್ರ ಸರ್ಕಾರದ ಕ್ರಮಗಳು , 370 , ರಾಜ್ಯ ಸ್ಥಾನ, ಸ್ವಾಯತ್ತ ಬೆಳವಣಿಗೆ, ಜನರ ಮೇಲೆ ಸೈನ್ಯದ ದೌರ್ಜನ್ಯ ಇವುಗಳ ಪರಿಹಾರ. ಇದು ಕಾಶ್ಮೀರದಲ್ಲಿ ಭಯೋತ್ಪಾದನೆಯ ಉತ್ಪಾದನೆ ಕುಗ್ಗಿಸುತ್ತದೆ. ಹೊರಗಿನ ದಾಳಿಗಳಿಗೆ ಸ್ಥಳೀಯ ಬೆಂಬಲ ಇಲ್ಲವಾಗುವಂತೆ ಮಾಡುತ್ತದೆ. ಕಾಶ್ಮೀರದ ಜನತೆಯನ್ನು ಒಲಿಸಿಕೊಳ್ಳುವುದೇ ಎಲ್ಲಕ್ಕಿಂತ ಮುಖ್ಯವಾಗಬೇಕು . ಒಳಗೆ ಒಗ್ಗಟ್ಟಿದ್ದರೆ ಹೊರಗಿನವರು ಕಡ್ಡಿ ಆಡಿಸುವುದಕ್ಕೆ ಅವಕಾಶವಾಗುವುದಿಲ್ಲ.
ಇದನ್ನೂ ನೋಡಿ: ಒಳ ಮೀಸಲಾತಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪತ್ರಿಕಾಗೋಷ್ಠಿ Janashakthi Media