ಪ್ರಜಾಪ್ರಭುತ್ವ ನಾಶವಾದರೆ ಮೊದಲ ದಾಳಿ ನಡೆಯುವುದು ಶೋಷಿತರ ಮೇಲೆ – ಬಿ.ವಿ ರಾಘವಲು

ತುಮಕೂರು : ಪ್ರಜಾಪ್ರಭುತ್ವ ನಾಶವಾದರೆ ಮೊದಲ ದಾಳಿ ನಡೆಯುವುದು ಬಡವರು, ದಲಿತರು ಮತ್ತು ಕಾರ್ಮಿಕರ ಮೇಲೆ ಎಂದು ಪೊಲೀಟ್‌ ಬ್ಯೋರೋ ಸದಸ್ಯ ಬಿ.ವಿ ರಾಘವಲು ತಿಳಿಸಿದರು.

ಸಿಪಿಐ(ಎಂ) 24 ನೇ ರಾಜ್ಯ ಸಮ್ಮಳೇನದ ಪ್ರತಿನಿಧಿ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಸತ್ತಿನಲ್ಲಿ ಸಂವಿಧಾನದ 75 ವರ್ಷದ ಸಂದರ್ಭದಲ್ಲಿ ವಿಶೇ ಚರ್ಚೆ ನಡೆಯುತ್ತಿದೆ. ಸಂವಿಧಾನದ ಮಹತ್ವವನ್ನು ಅರಿಯದ ಕಾಂಗ್ರೆಸ್‌ ಮತ್ತು ಬಿಜೆಪಿ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದನ್ನು ದೇಶದ ಜನ ಗಮನಿಸಿದ್ದಾರೆ. ಸಂವಿಧಾನವನ್ನು ಅರ್ಥ ಮಾಡಿಕೊಂಡು, ಮೂಲಭೂತ ತತ್ವಗಳನ್ನು ಅರಿಯಬೇಕಿದೆ. ಆ ನಿಟ್ಟಿನಲ್ಲಿ ಡಾ. ಬಿ.ಆರ್.‌ ಅಂಬೇಡ್ಕರ್‌ ಮತ್ತು ಸಂವಿಧಾನದ ನಿರ್ಮಾತ್ರುಗಳು ಪ್ರತಿಪಾದಿಸಿದ ಆಧಾರದಲ್ಲಿ 5 ಮೂಲಭೂತ ತತ್ವಗಳನ್ನು ಸಂವಿಧಾನವು ನಿರೂಪಿಸಿದೆ. ಪ್ರಜಾಪ್ರಭುತ್ವ, ಜಾತ್ಯಾತೀತತೆ, ಸಾಮಾಜಿಕ ನ್ಯಾಯ, ಒಕ್ಕೂಟ ತತ್ವ ಮತ್ತು ಸಮಾಜವಾದ ಇವುಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ದಾಳಿಯನ್ನು ನಾವು ತಡೆಗಟ್ಟಬೇಕಿದೆ ಎಂದರು.

ಸಂಸದೀಯ ಪ್ರಜಾಪ್ರಭುತ್ವದ ಪ್ರತಿಪಾದನೆ ಆಂತರಿಕ ಸತ್ವ ಬಂಡವಾಳಷಾಹಿ ಪ್ರಜಾಪ್ರಬುತ್ವವಾಗಿದೆ. ಹಾಗಿದ್ದರೂ, ಈಗಿರುವ ಪ್ರಜಾಪ್ರಬುತ್ವ ಮೌಲ್ಯಗಳನ್ನು ಕಾಪಾಡಬೇಕಿದೆ. ಯಾಕೆಂದರೆ ಪ್ರಜಾಪ್ರಭುತ್ವ ನಾಶವಾದರೆ ಅದರ ಮೊದಲ ಬಡವರು, ದುರ್ಬಲರೂ, ಕಾರ್ಮಿಕರು, ದಲಿತರ ಮೇಲೆ ನಡೆಯುತ್ತದೆ. ಉದಾ ಕಾರ್ಮಿಕ ಸಂಹಿತೆಗಳನ್ನು ಬಿಜೆಪಿ ತಂದಿದೆ. ಈ ಹಿಂದೆ ಕಾಂಗ್ರೆಸ್‌ ಕೂಡಾ ಜಾರಿಗೆ ಪ್ರಯತ್ನಿಸಿತ್ತು. ಈ ಸಂಹಿತೆಗಳು ಸಂಘ ಕಟ್ಟುವ ಹಕ್ಕು, ಕೆಲಸದ ಅವಧಿ, ಗುತ್ತಿಗೆ ಪದ್ದತಿ, ಬೇಕೆಂದಾಗ ಕೆಲಸಕ್ಕೆ ತೆಗೆದುಕೊಳ್ಳುವುದು, ತೆಗೆದು ಹಾಕುವುದನ್ನು ಬೆಂಬಲಿಸುತ್ತದೆ. ಇಂತಹ ಕಾರ್ಮಿಕ ವಿರೋಧಿ ನೀತಿಗಳನ್ನು ಸಂಹಿತೆಗಳು ಹೇಳುತ್ತಿವೆ. ಇದ್ದಕ್ಕೆ ನಿಯಮಗಳನ್ನು ರೂಪಿಸಲು ಮುಂದಾಗಿದೆ. ಇವೆಲ್ಲವೂ ಪ್ರಜಾಪ್ರಬುತ್ಬದ ಮೌಲ್ಯಗಳಾಗಿವೆ, ಇವೆಲ್ಲ ನಾಶವಾದರೆ ಪ್ರಜಾಪ್ರಭುತ್ವದಕ್ಕೆ ದಕ್ಕೆಯಾಗುತ್ತದೆ ಎಂದರು.

ಪ್ರಜಾಪ್ರಭುತ್ವದ ಮತ್ತೊಂದು ದಾಳಿ ಒಂದು ದೇಶ ಒಂದು ಚುನಾವಣೆ. ಇದು ಪ್ರಜಾಪ್ರಭುತ್ವ ನಾಶಮಾಡಿ ಫ್ಯಾಸಿಸಿಂ ಜಾರಿ ಮಾಡುವ ಹುನ್ನಾರವಾಗಿದೆ. ಏಕ ವ್ಯಕ್ತಿಯ ಆಡಳಿತ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡಲಿದೆ. ಆರ್‌ಎಸ್‌ಎಸ್‌ ಫ್ಯಾಸಿಸಂನ್ನು ಬೆಂಬಲಿಸುತ್ತಿರುವ ಕಾರಣ ಈ ದಾಳಿ ನಡೆಸುತ್ತಿದೆ. ಇಂತಹ ದಾಳಿಗಳ ವಿರುದ್ದ ಹೋರಾಟಗಳನ್ನು ಸಂಘಟಿಸಿ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಿದೆ.
ಜಾತ್ಯಾತೀತತೆ ಮತ ಧರ್ಮಗಳನ್ನು ಆದರಿಸದೆ ಇರುವ ಒಂದು ಪ್ರಭುತ್ವ ಜಾತ್ಯಾತೀತತೆ ಎಂಬುದು ಸಂವುದಾನದ ನಿರ್ವಚನೆಯಾಗಿದೆ. ಸಂವಿಧಾನದ ಈ ತಿಳುವಳಿಕೆಗೆ ವಿರುದ್ಧವಾದ ತಿಳುವಳಿಕೆ ಆರ್‌ಎಸ್‌ಸ್‌ಎಸ್‌ನದ್ದಾಗಿದೆ. ಹಾಗಾಗಿ ಸಂವಿಧಾನದಲ್ಲಿರುವ ಜಾತ್ಯಾತೀತೆಯನ್ನು ಅವರು ವಿರೋಧಿಸುತ್ತಿದ್ದಾರೆ. ಅದರ ರಕ್ಷಣ ಅಗತ್ಯವಿದೆ. ಆರ್‌ಎಸ್‌ಎಸ್‌ ಸಾಂಸ್ಕೃತಿಕ ರಾಷ್ಟೀಯತೆಯನ್ನು ಪ್ರತಿಪಾದನೆ ಮಾಡುತ್ತಿದೆ. ಸಂವಿಧಾನ ಪೌರತ್ವನ್ನು ಆಧಾರಿಸಿದ ರಾಷ್ಟ್ರೀಯತೆಯನ್ನು ಪ್ರತಿಪಾದಿಸುತ್ತದೆ. ಹಾಗಾಗಿ ಆರೆಸ್‌ಎಸ್‌ ಸಂವಿಧಾನಕ್ಕೆ ವಿರುದ್ದವಾಗಿದೆ ಎಂದರು.

ಇದನ್ನೂ ಓದಿ : ಪ್ರಿಯಾಂಕ ಖರ್ಗೆ ರಾಜೀನಾಮೆ ಪಡೆದು ಸಿಬಿಐ ತನಿಖೆ ಮಾಡಿಸಲು ವಿಜಯೇಂದ್ರ ಒತ್ತಾಯ

ಜಾತ್ಯಾತೀತ ನಿರ್ಣಯಗಳನ್ನು ನಾಶ ಮಾಡುವುದಕ್ಕಾಗಿ ಬಿಜೆಪಿ ಮತೀಯ ಕೋಮುಗಲಭೆಗಳನ್ನು ಹೆಚಿಸುತ್ತದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್‌ 1991ರ ಪೂಜಾ ಸಂರಕ್ಷಣಾ ಕಾಯ್ದೆಯು ದೇಶದಲ್ಲಿರುವ ಎಲ್ಲಾ ಪೂಜಾ ಸ್ಥಳಗಳನ್ನು 1947ರ ಆಗಸ್ಟ್‌ 15ರ ಸ್ಥಿತಿಯಲ್ಲಿ ಕಾಪಾಡಬೇಕೆಂದುನ್ನು ಸುಪ್ರಿಂ ಎತ್ತಿ ಹಿಡಿದಿದೆ. ಆರ್‌ಎಸ್‌ಎಸ್‌ ಚಾರಿತ್ರಿಕ ತಪ್ಪುಗಳನ್ನು ಸರಿಪಡಿಸುವ ನೆಪದಲ್ಲಿ ಮಸೀದಿಗಳ ಕೆಳಗ ದೇವಸ್ಥಾನ ಇದೆ ಎಂದು ಗುಲ್ಲೆಬ್ಬಿಸಿ ಪೂಜಾಕಾಯ್ದೆಯನ್ನು ಉಲ್ಲಂಘಿಸುತ್ತದೆ. ಇದೇ ವಾದವನ್ನು ದಲಿತ ವಿಭಾಗಗಳು ಪ್ರತಿಪಾದಿಸಿದರೆ 3 ಸಾವಿರ ವರ್ಷಗಳಿಂದ ಅಸ್ಪೃಶ್ಯತೆ, ಜಾತಿ ತಾರತಮ್ಯವನ್ನು ಅನುಸರಿಸಿರುವ ಜಾತಿಗಳ ವಿರುದ್ಧ ಅಂತಹದ್ದೇ ದೌರ್ಜನ್ಯಗಳನ್ನು ನಡೆಸುವಂತಾಗಬಹುದು ಆದ್ದರಿಂದ ಚಾರಿತ್ರಿಕ ತಪ್ಪುಗಳನ್ನು ಸರಿಪಡಿಸುವ ಬದಲಿಗೆ ಅದರಿಂದ ಪಾಠಗಳನ್ನು ಕಲಿತು ಸಮಾನತೆಯ ಆಧಾರದಲ್ಲಿ ಜಾತ್ಯಾತೀತ ತತ್ವವನ್ನು ಅಳವಡಿಸಿಕೊಳ್ಳುವುದನ್ನು ಸಂವಿಧಾನ ಪ್ರತಿಪಾದಿಸುತ್ತದೆ. ಇದಕ್ಕಾಗಿ ನಾವು ಹೋರಾಟ ಮಾಡಬೇಕಿದೆ ಎಂದರು.

ಸಾಮಾಜಿಕ ನ್ಯಾಯವು ಕೂಡ ಈಗ ಅಪಾಯದ ಸ್ಥಿತಿಗೆ ತಲುಪಿದೆ. ಭಾರತವು ವೈವಿದ್ಯಮಯ ದೇಶ, ಕುಲ ಮತ ಭಾಷೆ ಜನಾಂಗಳ ಆಧಾರದ ಮೇಲೆ ತಾರತಮ್ಯ ಎಸಗಲಾಗಿದೆ. ಇವುಗಳನ್ನು ಸರಿಪಡಿಸುವ ದೃಷ್ಟಿಯಿಂದ ಸಂವಿಧಾನವು ಬಲಹೀನ ವರ್ಗ, ಜಾತಿಗಳನ್ನು ಬಲಪಡಿಸಲು ಸಂವಿಧಾನ ಮೀಸಲಾತಿ, ಉಪಯೋಜನೆ ಗಳನ್ನು ಜಾರಿಗೊಳಿಸಲಾಗಿದೆ. ಆದರೆ ಬಿಜೆಪಿ ಇದರ ವಿರುದ್ದ ದಾಳಿ ನಡೆಸುತ್ತಿದೆ. ಅಮಿತ್‌ ಶಾ ಸಂಸತ್ತಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್‌‌ ಅವರ ಕುರಿತು ಮಾಡಿದ ಅವಮಾನಕರ ದಾಳಿ ಉದಾಹರಣೆಯಾಗಿದೆ. ಡಾ,ಬಿಆರ್ ಅಂಬೇಡ್ಕರ್‌ ಜಾತಿ ವ್ಯವಸ್ಥೆ ನಾಶವಾಗಬೇಕೆಂದು ಸಮಾನತೆ ಜಾರಿಗಬೇಕು ಎಂದು ಪ್ರತಿಪಾದಿಸಿದರು.

ಹಾಗಾಗಿ ಈ ದೇಶದ ದುರ್ಬಲರು ಡಾ. ಬಿ.ಆರ್‌ ಅಂಬೇಡ್ಕರ್‌ ಅವರನ್ನು ದೇವರೆಂದು ಭಾವಿಸುವುದು ಸಹಜ. ಆರ್‌ಎಸ್‌ಎಸ್‌ – ಬಿಜೆಪಿಯವರು ಜಾತಿ ನಿರ್ಮೂಲನೆಯನ್ನು ಪ್ರತಿಪಾದನೆ ಮಾಡುವರೆ? ಮೋಹನ್‌ ಭಾಗವತ್‌ ಸನಾತನ ಧರ್ಮ ಕಾಪಾಡಬೇಕು ಎಂದೆನ್ನುತ್ತಾರೆ. ಆದರೆ ಜಾತಿ ನಾಶದ ಬಗ್ಗೆ ಮಾತನಾಡುವುದಿಲ್ಲ, ಮಹಿಳಾ ಸಮಾನತೆಯ ಬಗ್ಗೆ ಮಾತನಾಡುವುದಿಲ್ಲ. ಹೀಗಾಗಿ ಸಂವಿಧಾನವು ಅಸಮಾನತೆಯ ಸನಾತನ ಧರ್ಮವನ್ನು ಒಪ್ಪಿಲ್ಲ, ಬದಲಿಗೆ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದೆ. ನಾವು ಡಾ.ಬಿಆರ್‌ ಅಂಬೇಡ್ಕರ್‌ ಅವರು ಪ್ರತಿಪಾದಿಸಿದ ಸಾಮಾಜಿಕ ನ್ಯಾಯವನ್ನು ಉಳಿಸಲು ಹೋರಾಡಬೇಕಿದೆ ಎಂದರು.

ಒಕ್ಕೂಟವಾದ ಭಾರತವು ಹಲವು ರಾಷ್ಟ್ರೀಯತೆಗಳ ಒಂದು ರಾಷ್ಟ್ರೀಯತೆ . ಹಾಗಾಗಿ ಸಂವಿಧಾನದಲ್ಲಿ ಕೇಂದ್ರ ಮತ್ತು ರಾಜ್ಯಗಳಿಗೆ ಶಾಸನಗಳನ್ನು ಮಾಡುವ ಪ್ರತ್ಯೇಕ ಅಧಿಕಾರವನ್ನು ನೀಡಲಾಗಿದೆ. ಬಿಜೆಪಿ ಇದನ್ನು ನಾಶ ಮಾಡುತ್ತಿದ್ದೆ. ದೇಶದ ಐಕ್ಯತೆ ಕಾಪಾಡಲು ರಾಜ್ಯಗಳಿಗಿರುವ ಶಾಸನಾತ್ಮಕ ಹಕ್ಕುಗಳನ್ನು ಕಾಪಾಡುವ ಅಗತ್ಯವಿದೆ.

ಸಮಾಜವಾದ ಸಂವಿಧಾನದಲ್ಲಿ ಸಮಾಜವಾದದ ಆಶಯಗಳನ್ನು ಈಡೇರಿಸಿಕೊಳ್ಳಲು ಕೆಲವು ಅವಕಾಶಗಳನ್ನು ಕ್ಲಪಿಸಲಾಗಿದೆ. ಆದರೆ ಇವು ಮೂಲಭೂತ ಹಕ್ಕುಗಳಾಗಿಲ್ಲ. ಹೀಗಾಗಿ ಶಿಕ್ಷಣ ಆರೋಗ್ಯ ವಸತಿ, ಉದ್ಯೋಗ, ಮುಂತಾದ ಅಂಶಗಳನ್ನು ಮೂಲಭೂತ ಹಕ್ಕುಗಳಾಗಿ ಜಾರಿಗೊಳಿಸಬೇಕಾದ ಹೋರಾಟಗಳನ್ನು ನಡೆಸಲು ಸಿಪಿಎಂ ಪಕ್ಷವು ಮುಂದಾಗಬೇಕೆಂದು ಕರೆ ನೀಡಿದರು.

ಈ ವೇಳೆ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ್‌ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಮೀನಾಕ್ಷಿಸುಂದರಂ, ಕೆ.ನೀಲಾ, ಕೆ.ಎನ್.‌ ಉಮೇಶ್‌, ಗೋಪಾಲಕೃಷ್ಣ ಹರಳಹಳ್ಳಿ, ಕೆ. ಪ್ರಕಾಶ್‌, ಮುನೀರ್‌ ಕಾಟಿಪಳ್ಳ, ಸಯ್ಯದ್‌ ಮುಜೀಬ್‌, ಎನ್.ಕೆ.ಸುಬ್ರಮಣ್ಯ, ಮುನಿವೆಂಕಟಪ್ಪ ಹಾಜರಿದ್ದರು.

ಇದನ್ನೂ ನೋಡಿ : ಕುವೆಂಪು 120| ಕುವೆಂಪು ಓದು – ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ Janashakthi Media

Donate Janashakthi Media

Leave a Reply

Your email address will not be published. Required fields are marked *