ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಡೀ ದೇಶದ ರೈತರ ಸಾಲ ಮನ್ನ: ಸಿ.ಎಂ

ಹಾಸನ : ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ದಾನಗಳ ಅಂತರದಿಂದ ಗೆಲ್ತಾರೆ ಎಂದು ಸಿ.ಎಂ.ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.

ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರವಾಗಿ ನಡೆದ ಪ್ರಜಾಧ್ವನಿ2 ಜನಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೀಧರ್ ಗೌಡ ಮತ್ತು ಕೃಷ್ಣೇಗೌಡರು ಇಬ್ಬರೂ ಒಟ್ಟಾಗಿ ಸಮಾನ ಮನಸ್ಕರಾಗಿ ಕೆಲಸ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಇವರಿಬ್ಬರೂ ಒಟ್ಟಾಗಿ ಅರಕಲಗೋಡು ಕ್ಷೇತ್ರದಲ್ಲಿ 30 ಸಾವಿರಕ್ಕೂ ಅಧಿಕ ಮತಗಳ ಲೀಡ್ ಕೊಡಿಸುತ್ತಾರೆ ಎನ್ನುವ ಭರವಸೆ ನನಗಿದೆ ಎಂದರು.

ಇದನ್ನೂ ಓದಿ: ದ್ವೇಷವನ್ನು ಸೋಲಿಸಿ, ಪ್ರೀತಿಯ ಅಂಗಡಿಯನ್ನು ತೆರೆಯುವ ಮೂಲಕ ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಿ; ರಾಹುಲ್ ಗಾಂಧಿ

ವಿಧಾನಸಭಾ ಚುನಾವಣೆ ವೇಳೆ ರಾಹುಲ್ ಗಾಂಧಿಯವರು ಜೆಡಿಎಸ್ ಪಕ್ಷವನ್ನು ಬಿಜೆಪಿಯ “ಬಿ” ಟೀಮ್ ಎಂದಿದ್ದರು. ಆಗ ದೇವೇಗೌಡರು ಈ ಮಾತನ್ನು ವಿರೋಧಿಸಿದ್ದರು. ಈಗ ಅದೇ ದೇವೇಗೌಡರು ಹೋಗಿ ಮೋದಿಯವರ ಜತೆ ಜಮೆಯಾಗಿದ್ದಾರೆ. ರಾಹುಲ್ ಗಾಂಧಿಯ ಮಾತನ್ನು ದೇವೇಗೌಡರು ಸಾಬೀತು ಮಾಡಿದ್ದಾರೆ ಎಂದರು.

ರಾಜ್ಯದ ಪರವಾಗಿ-ಹಾಸನ ಪರವಾಗಿ ಪ್ರಜ್ವಲ್ ರೇವಣ್ಣ ಬಾಯೇ ಬಿಡಲಿಲ್ಲ

ರಾಜ್ಯದ ಪರವಾಗಿ-ಹಾಸನ ಪರವಾಗಿ ಪ್ರಜ್ವಲ್ ರೇವಣ್ಣ ಪಾರ್ಲಿಮೆಂಟಿನಲ್ಲಿ ಬಾಯೇ ಬಿಡಲಿಲ್ಲ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಚಕಾರವನ್ನೇ ಎತ್ತಲಿಲ್ಲ. ಹೀಗಾಗಿ ಈ ಬಾರಿ ಇವರನ್ನು ಸೋಲಿಸಿ ರಾಜ್ಯದ ಪರವಾಗಿ ಧ್ವನಿ ಎತ್ತುವ ಸಾಮರ್ಥ್ಯ ಇರುವ ಪ್ರಜ್ವಲ್ ರೇವಣ್ಣರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.

ರಾಜ್ಯದ ಪಾಲಿನ ತೆರಿಗೆ ಪಾಲನ್ನೂ ಕೇಂದ್ರ ಸರ್ಕಾರ ಕೊಡಲಿಲ್ಲ. ಬರಗಾಲ ಬಂದಿದ್ದರೂ ನಮ್ಮ ಪಾಲನ್ನು ಕೊಟ್ಟಿಲ್ಲ. ಹೀಗಾಗಿ ನರೇಂದ್ರ ಮೋದಿಯವರು ಮತ್ತು ಬಿಜೆಪಿಯವರು ಯಾವ ಮುಖ ಹೊತ್ಕೊಂಡು ರಾಜ್ಯದ ಜನರಿಂದ ಮತ ಕೇಳುತ್ತಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು.

ಹಾಸನದಲ್ಲಿ ಬದಲಾವಣೆ ಆಗಬೇಕು. ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಕರೆ ನೀಡಿದರು.

ಇಡಿ ದೇಶದ ರೈತರ ಸಾಲ ಮನ್ನಾ

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಡೀ ದೇಶದ ರೈತರ ಸಾಲ ಮನ್ನಾ ಮಾಡಲಾಗುವುದು. ಮೋದಿಯವರು ಅತ್ಯಂತ ಶ್ರೀಮಂತರ ಸಾಲವನ್ನು ಮಾತ್ರ ಮನ್ನಾ ಮಾಡಿದರು. ಆದರೆ ಕಾಂಗ್ರೆಸ್ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದರು. ಈ ಬಾರಿ ಇದು ಮರುಕಳಿಸುತ್ತದೆ ಎಂದರು.

ಹಾಗೆಯೇ ಮಹಿಳೆಯರ ಖಾತೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ ಹಾಕುವುದೂ ಸೇರಿ 25 ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿದೆ. ಇವೆಲ್ಲವನ್ನೂ ಜಾರಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಶಾಸಕರಾದ ಶಿವಲಿಂಗೇಗೌಡರು, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಸೇರಿ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ನೋಡಿ: ‘ಮೋದಿ ಗ್ಯಾರಂಟಿಗಳ’ ಮರೆಮೋಸದ ವಿವರಗಳು ಗೊತ್ತೇ? Janashakthi Media

Donate Janashakthi Media

Leave a Reply

Your email address will not be published. Required fields are marked *