ವೇದರಾಜ್ ಎನ್.ಕೆ
ಒಂದು ವರ್ಷದ ಹಿಂದೆ, ಕೊವಿಡ್-19ರ ವಿರುದ್ಧ 21 ದಿನಗಳ ಸಮರ ಸಾರಿ, ಆ ಮೇಲೆ ಚಪ್ಪಾಳೆ, ತಟ್ಟೆ, ಮೋಂಬತ್ತಿ/ಮೊಬೈಲ್ ಲೈಟ್ ಉತ್ಸವಗಳ ನಂತರ ಅದು ತೊಲಗಿಯೇ ಬಿಟ್ಟಿತು ಎಂದು ಭಾವಿಸುತ್ತಿದ್ದಂತೆಯೇ ಎರಡನೇ ಅಲೆಯಾಗಿ ಈ ಮಾರ್ಚ್ ನಲ್ಲಿ ಅದು ಮತ್ತೆ ವಕ್ಕರಿಸಿರುವಾಗ ಮಾನ್ಯ ಪ್ರಧಾನಿಗಳು, ಈ ಬಾರಿ, ‘ಟೀಕಾ ಉತ್ಸವ್’ಗೆ ಕರೆ ನೀಡಿದರು – ಎಪ್ರಿಲ್ 11 ರಿಂದ 14 ರ ವರೆಗೆ.
ಜನ ಕಳೆದ ಬಾರಿಯಂತೆ ಪ್ರಧಾನಿಗಳ ಕರೆಗೆ ಓಗೊಡಲು ಉತ್ಸಾಹದಿಂದ ಸಿದ್ಧರಾಗುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದವು!
(ಶೀರ್ಷಿಕೆಯ ವ್ಯಂಗ್ಯಚಿತ್ರ ಕೃಪೆ: ಸುಭಾನಿ, ಡೆಕ್ಕನ್ ಕ್ರಾನಿಕಲ್, 10 ಎಪ್ರಿಲ್ )
***
ಆದರೆ ‘ಉತ್ಸವ’ಕ್ಕೆ ಬಂದವರು ಕಂಡಿದ್ದೇನು? ಕೇಳಿದ್ದೇನು?
ಲಸಿಕೆಗಳ ಕೊರತೆ ಇದೆ ಎಂಬ ಸುದ್ದಿಗಳು- ಉತ್ಸವಗಳಲ್ಲೂ, ಮಾಧ್ಯಮಗಳಲ್ಲೂ.
(ಕೃಪೆ: ಮಂಜುಲ್, ಫಸ್ಟ್ ಪೋಸ್ಟ್, 12 ಎಪ್ರಿಲ್ )
***
ಆದರೂ ಉತ್ಸವಗಳಿಗೇನೂ ಕೊರತೆಯಿಲ್ಲ…
45+ ನವರಿಗೆ ಮಾತ್ರ ಲಸಿಕೆ ಉತ್ಸವ್-ಉಳಿದವರಿಗಿಲ್ಲ
ಮಾಸ್ಕ್ ಉತ್ಸವ, ಸ್ಯಾನಿಟೈಸರ್ ಉತ್ಸವ, ಲಾಕ್‍ಡೌನ್ ಉತ್ಸವ ಇತ್ಯಾದಿ!
(ಕೃಪೆ: ಕೀರ್ತಿಶ್, ಬಿಬಿಸಿ ನ್ಯೂಸ್, )
***
ಹಲವರಿಗೆ ನೀರಿಲ್ಲದ ಮಡಕೆ, ಕಾಗೆಗಳು ಮತ್ತು ಕಲ್ಲುಗಳ ಕತೆ ನೆನಪಿಗೆ ಬಂದಿದ್ದರೆ ಆಶ್ಚರ್ಯವಿಲ್ಲ.
(ಕೃಪೆ: ಸುರೇಂದ್ರನ್, ದಿ ಹಿಂದು)
***
ಈ ನಡುವೆ ಲಸಿಕೆಗಳ ಕೊರತೆ ಮಾತ್ರವಲ್ಲ ……
ಆಸ್ಪತ್ರೆಯಿಲ್ಲ, ಆಕ್ಸಿಜನ್ ಸಿಲಿಂಡರ್ ಇಲ್ಲ, ಬೆಡ್ ಇಲ್ಲ, ಐಸಿಯು ಇಲ್ಲ,
ಯಾಕಪ್ಪಾ ಯಮರಾಜ, ಒದ್ದಾಡ್ಸ್ ತ್ತೀಯಾ ! ಎತ್ತಿಕೊಂಡು ಹೋಗಬಾರದೇ!!
“ಸ್ಮಶಾನದಲ್ಲೂ ವೇಟಿಂಗ್ ಲಿಸ್ಟ್ ನಡೀತಿದೆ…”
( ಕೃಪೆ: ಕಪ್ತಾನ್)
***
ಇದು ಎದ್ದು ಕಂಡದ್ದು ಗುಜರಾತಿನಲ್ಲಿ , ಉತ್ತರಪ್ರದೇಶದಲ್ಲಿ…
ಗುಜರಾತ್ ಮಾದರಿ?
(ಕೃಪೆ: ಸತೀಶ ಆಚಾರ್ಯ, ಫೇಸ್‍ಬುಕ್)
***
ಆಕ್ಸಿಜನ್, ರೆಮ್ಡೆಸಿವಿರ್ ಪೂರೈಸಿ ಎಂದು ಉತ್ಸವಕ್ಕೆ ಕರೆ ಕೊಟ್ಟವರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ತುರ್ತು ಕರೆ ಮಾಡಿದರೆ, ಅವರು ಪಶ್ಚಿಮ ಬಂಗಾಲದಲ್ಲಿದ್ದಾರೆ, ನಂತರ ಹೇಳುತ್ತಾರೆ ಎಂದು ಉತ್ತರ ಬಂತಂತೆ(ಇಂಡಿಯ ಟುಡೆ, ಎಪ್ರಿಲ್ 17)
ಬೆಡ್!! ರೆಮ್ಡೆಸಿವಿರ್ !! ಆಕ್ಸಿಜನ್!! ….ಮತ್ತು ಮೈಕ್!!
(ಕೃಪೆ : ಅಲೋಕ್ ನಿರಂತರ್, ಫೇಸ್‍ಬುಕ್)
***
ಇದರ ಬೆನ್ನ ಹಿಂದೆಯೇ ಪಶ್ಚಿಮ ಬಂಗಾಲದ ಅಸನ್ ಸೋಲ್ ನಲ್ಲಿ”ಇಷ್ಟೊಂದು ಜನ ಸೇರಿದ್ದು ನೋಡಿರಲೇ ಇಲ್ಲ” ಎಂದು ಪ್ರಧಾನಿಗಳು ಹರ್ಷ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ( ಪ್ರಜಾವಾಣಿ, ಎಪ್ರಿಲ್ 19)
(ಕೃಪೆ: ಪಿ.ಮಹಮ್ಮದ್, ಆಂದೋಲನ, ಎಪ್ರಿಲ್ 19)