ಮುಂಬೈ: ಮಹಾದ್ ಎಂಐಡಿಸಿ ಯಿಂದ ಪುಣೆಗೆ ತೆರಳುತ್ತಿದ್ದ ಟ್ಯಾಂಕರ್ ಒಂದು ಮೇ 25 ಭಾನುವಾರ ಬೆಳಗಿನ ಜಾವ ಮಂಜಿನಿಂದ ಆವೃತವಾದ ತಮ್ಹಿನಿ ಘಾಟ್ ಪ್ರದೇಶದ ಡೊಂಗರ್ವಾಡಿ ಗ್ರಾಮದ ಬಳಿ ಮಗುಚಿ ಬಿದ್ದಿರುವಂತಹ ಆಘಾತಕಾರಿ ಘಟನೆ ನಡೆದಿದೆ. ಟ್ಯಾಂಕರ್‌ನಲ್ಲಿ ಸುಮಾರು 28,000 ಲೀಟರ್ ಹೈಡ್ರೋಕ್ಲೋರಿಕ್ ಆಮ್ಲವನ್ನು ಹೊತ್ತೊಯ್ಯಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಭಾನುವಾರ ಬೆಳಗ್ಗೆ 6:30 ರ ಸುಮಾರಿಗೆ ಭಾರೀ ಮಂಜಿನಿಂದಾಗಿ ಗೋಚರತೆ ಕಡಿಮೆಯಾದ ಕಾರಣ ಅಪಘಾತ ಸಂಭವಿಸಿದೆ. ರಸ್ತೆಯ ಸ್ಥಿತಿಯನ್ನು ನಿರ್ಣಯಿಸಲು ಸಾಧ್ಯವಾಗದೆ ಚಾಲಕನಿಗೆ ನಿಯಂತ್ರಣ ತಪ್ಪಿ ವಾಹನ ಉರುಳಿದೆ.
ಟ್ಯಾಂಕರ್ ಪಲ್ಟಿಯಾದ ಹಿನ್ನೆಲೆ ಅದರೊಳಗೆ ಚಾಲಕ ಸ್ವಲ್ಪ ಸಮಯದವರೆಗೆ ಸಿಲುಕಿಕೊಂಡಿದ್ದರು. ಸದ್ಯ ಅದೇ ದಾರಿಯಲ್ಲಿ ಹೋಗುತ್ತಿದ್ದ ಬಸ್ ಅಪಘಾತವನ್ನು ಗಮನಿಸಿ ತಕ್ಷಣ ಟ್ಯಂಕರ್ ಚಾಲಕನನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಇದನ್ನೂ ಓದಿ: ತುಮಕೂರು| ನವೆಂಬರ್ ನಲ್ಲಿ ಪಂಚಾಯಿತಿ ಚುನಾವಣೆ ನಡೆಯುವ ಸಾಧ್ಯತೆ: ಜಿ.ಎಸ್. ಸಂಗ್ರೇಶಿ
ಅಪಘಾತದಲ್ಲಿ ಚಾಲಕನ ಬೆರಳುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಟ್ಯಾಂಕರ್‌ನಲ್ಲಿದ್ದ ಅಪಾರ ಪ್ರಮಾಣದ ಹೈಡ್ರೋಕ್ಲೋರಿಕ್ ಆಮ್ಲವು ಆಳವಾದ ಕಣಿವೆಗೆ ಸೋರಿಕೆಯಾಗಿದೆ. ತಕ್ಷಣ ತುರ್ತು ತಂಡಗಳು ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ.
ಟ್ಯಾಂಕರ್‌ನಲ್ಲಿದ್ದ ಸುಮಾರು 90% ಹೈಡ್ರೋಕ್ಲೋರಿಕ್ ಆಮ್ಲ ಖಾಲಿಯಾಗಿದೆ ಎಂದು ವರದಿಯಾಗಿದೆ. ಆಸು ಪಾಸಿನ ಜನರಿಗೆ ಕೆಮ್ಮು, ಕಣ್ಣುರಿ, ಗಂಟಲು ಬೇನೆ ಶುರುವಾಗಿದ್ದು ಸಮೀಪದ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೆ ತಪಾಸಣೆಗೆ ಧಾವಿಸಿದ್ದಾರೆ.
ಪಿಎಂಆರ್‌ಡಿಎ ಅಗ್ನಿಶಾಮಕ ದಳ, ಮುಲ್ಶಿ ವಿಪತ್ತು ನಿರ್ವಹಣಾ ತಂಡ, ಎಲ್‌ಸಿಎಸ್ ಪ್ರತಿಕ್ರಿಯಾ ತಂಡ, ರಾಯಗಡ್ ರಕ್ಷಣಾ ತಂಡ ಮತ್ತು ಸ್ಥಳೀಯ ಪೊಲೀಸರು ಸೇರಿದಂತೆ ತುರ್ತು ಸೇವೆಗಳು ಕ್ಷಿಪ್ರವಾಗಿ ಸ್ಥಳಕ್ಕೆ ಆಗಮಿಸಿವೆ. ಕ್ರೇನ್ ಸಹಾಯದಿಂದ ಟ್ಯಾಂಕರ್ ಅನ್ನು ರಸ್ತೆಬದಿಯಿಗೆ ಸ್ಥಳಾಂತರಿಸಲಾಗಿದೆ.
ಸಂಜೆ 6 ಗಂಟೆಯ ಸುಮಾರಿಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ನಂತರವೇ ಘಾಟ್ ವಿಭಾಗದಿಂದ ವಾಹನ ಸಂಚಾರ ಮುಂದುವರೆದಿದೆ.
ಇದನ್ನೂ ನೋಡಿ: ಜಯಂತಿಗಳಿಗೆ ಜಾತಿಮಿತಿ ಬಂದಿರುವ ಕಾಲ ಇದು – ಬರಗೂರು ರಾಮಚಂದ್ರಪ್ಪ Janashakthi Media