ಹೈದರಾಬಾದ್: ಮತ್ತೊಂದು ಅಮಾನವೀಯ ದುಷ್ಕೃತ್ಯ ನಡೆದಿದ್ದು, ಅಪ್ರಾಪ್ತ ಬಾಲಕರು 17 ವರ್ಷದ ಬಾಲಕಿ ಮೇಲೆ ಕಳೆದ ಶನಿವಾರ (ಮೇ 28) ನಡೆದಿದೆ. ಮರ್ಸಿಡಿಸ್ ಕಾರಿನಲ್ಲಿ ಕರೆದೊಯ್ದ ಆರೋಪಿಗಳು ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರಿಗಳಲ್ಲಿ ಒಬ್ಬ ಶಾಸಕರ ಮಗ ಎಂದು ಶಂಕಿಸಲಾಗಿದೆ. ಜುಬ್ಲಿ ಹಿಲ್ಸ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನ್ನ ಗೆಳೆಯನೊಂದಿಗೆ ಖಾಸಗೀ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಾಲಕಿಯು ತನ್ನ ಗೆಳೆಯನೊಂದಿಗೆ ಇತರ ಗೆಳೆಯರನ್ನು ಭೇಟಿಯಾಗಿದ್ದಳು. ಕಾರ್ಯಕ್ರಮ ಮುಗಿಸಿಕೊಂಡು ಹೊರಟ ಹುಡುಗಿಯನ್ನು ತನ್ನ ಆಪ್ತ ಗೆಳೆಯನ ಗೆಳೆಯರು ಮನೆಗೆ ಬಿಡುವ ಭರವಸೆ ನೀಡಿ ಆಕೆಯನ್ನು 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ಜುಬ್ಲಿ ಹಿಲ್ಸ್ ಬಳಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ.
ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ 354 ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. 17ರ ಹರೆಯದ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಇದೀಗ ಪ್ರಕರಣವನ್ನು ಐಪಿಸಿಯ ಸೆಕ್ಷನ್ 376 ಸಾಮೂಹಿಕ ಅತ್ಯಾಚಾರ ಎಂದು ಸೇರಿಸಲಾಗಿದೆ.
ಬಾಲಕಿಗೆ ಕತ್ತಿನ ಬಳಿ ಇದ್ದ ಗಾಯವನ್ನು ಗಮನಿಸಿದ ತಂದೆ ಮಗಳನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಾಲಕಿಯ ಹೇಳಿಕೆಯನ್ನು ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಯತ್ನಿಸುತ್ತಿದ್ದಾರೆ. ಪಬ್‌ನಲ್ಲಿ ಪಾರ್ಟಿಯಲ್ಲಿ ಭಾಗವಹಿಸಿದ್ದ ವ್ಯಕ್ತಿಗಳು ಮತ್ತು ಅಲ್ಲಿ ಕೆಲಸ ಮಾಡುವ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿದೆ.