ಅಂಬಾನಿ ₹7 ಲಕ್ಷ ಕೋಟಿ ಒಡೆಯ-2ನೇ ಸ್ಥಾನದಲ್ಲಿ ಅದಾನಿ ₹5 ಲಕ್ಷ ಕೋಟಿ ಒಡೆಯ

ಭಾರತದಲ್ಲಿರುವ ಶ್ರೀಮಂತ ವ್ಯಕ್ತಿಗಳು, ಕುಟುಂಬಗಳ ಸಂಪತ್ತಿನಲ್ಲಿ ಬಾರಿ ಏರಿಕೆಯಾಗಿದೆ. ಕಳೆದ ವರ್ಷಪೂರ್ತಿಯಾಗಿ ಕೊರೊನಾ ಸಾಂಕ್ರಾಮಿಕ ಕಾಲದ ನಡುವೆಯೂ ದೇಶದ ಶ್ರೀಮಂತರ ಸಂಪತ್ತಿನಲ್ಲಿ ಏರಿಕೆಯಾಗಿದೆ.

ಭಾರತದಲ್ಲಿ ಬಡವರು-ಶ್ರೀಮಂತರ ನಡುವೆ ಅಂತರ ಮೊದಲಿನಿಂದಲೂ ಇದ್ದೇ ಇದೆ. ಈಗ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದು, ಬಡವರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಈಡಾಗುತ್ತಿರುವುದು ತಿಳಿದ ವಿಷಯ. ಇವುಗಳ ನಡುವೆ ದೇಶದಲ್ಲಿ ಅತಿಹೆಚ್ಚಿನ ಶ್ರೀಮಂತರ ಸಂಪತ್ತು ಬಾರೀ ಪ್ರಮಾಣದಲ್ಲಿ ಏರಿಕೆಯಾಗಿರುವ ಬಗ್ಗೆ ಹಲವರು ಟೀಕೆಗಳನ್ನು ಮಾಡುತ್ತಿದ್ದಾರೆ.

ಏಷ್ಯಾದ ಎರಡನೇ ಅತಿ ದೊಡ್ಡ ಶ್ರೀಮಂತ ಉದ್ಯಮಿಯಾಗಿರುವ ಗೌತಮ್ ಅದಾನಿ ಮತ್ತಷ್ಟು ಶ್ರೀಮಂತರಾಗಿರುವುದು ಐಐಎಫ್ಎಲ್‌ ವೆಲ್ತ್-ಹೂರನ್ ಶ್ರೀಮಂತರ ಪಟ್ಟಿ 2021ರಿಂದ ಸ್ಪಷ್ಟವಾಗಿದೆ. ಅದಾನಿ ಪ್ರತಿನಿತ್ಯ ಸಾವಿರ ಕೋಟಿ ರೂಪಾಯಿ ಶ್ರೀಮಂತರಾಗಿದ್ದಾರೆ ಎನ್ನುವುದನ್ನು ಬಹಿರಂಗಗೊಂಡಿದೆ.

ಭಾರತದ 119 ನಗರಗಳ 1007 ವ್ಯಕ್ತಿಗಳ ಸಂಪತ್ತು ಒಂದು ಸಾವಿರ ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಾನದ್ದಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೇ, ಈ ವರ್ಷ 1007 ವ್ಯಕ್ತಿಗಳ ಸಂಪತ್ತಿನಲ್ಲಿ ಶೇ.51 ರಷ್ಟು ಹೆಚ್ಚಳವಾಗಿರುವುದು ಸ್ಪಷ್ಟವಾಗಿದೆ. ಭಾರತೀಯ ಷೇರು ಮಾರುಕಟ್ಟೆಯಲ್ಲಿ ಷೇರುಗಳ ಬೆಲೆ ಏರಿಕೆ, ಜಾಗತಿಕ ನಗದು ಪರಿಸ್ಥಿತಿ ಉತ್ತಮವಾಗಿರುವುದು ಸೇರಿದಂತೆ ಇನ್ನೂ ಕೆಲ ಕಾರಣಗಳಿಂದ 58 ಮಂದಿ ಹೊಸ ಬಿಲಿಯನೇರ್‌ಗಳು ಸೃಷ್ಟಿಯಾಗಿದ್ದಾರೆ. ಇದರಿಂದಾಗಿ ಭಾರತದಲ್ಲಿ 2020-21ರಲ್ಲಿ ಬಿಲಿಯನೇರ್‌ಗಳ ಸಂಖ್ಯೆ 258ಕ್ಕೆೇರಿಕೆಯಾಗಿದೆ.

ಐಐಎಫ್ಎಲ್ ವೆಲ್ತ್ ಹೂರನ್ ಭಾರತದ ಶ್ರೀಮಂತರ ಪಟ್ಟಿ 2021ರ ಪ್ರಕಾರ, ಭಾರತದಲ್ಲಿ ಕೆಮಿಕಲ್ ಮತ್ತು ಸಾಫ್ಟವೇರ್ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೊಸಬರು ಬಿಲಿಯನೇರುಗಳಾಗಿದ್ದಾರೆ. ಫಾರ್ಮಾಸೂಟಿಕಲ್ಸ್ ಕ್ಷೇತ್ರದಿಂದ 130 ಮಂದಿ ಪಟ್ಟಿಯಲ್ಲಿದ್ದಾರೆ.

ಹೂರನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅನಾಸ್ ರಹಮಾನ್ ಜುನೈದ್ ಹೇಳುವ ಪ್ರಕಾರ, ಹತ್ತು ವರ್ಷಗಳಲ್ಲಿ ಹತ್ತು ಪಟ್ಟು ಬಿಲಿಯನೇರ್‌ಗಳಾದವರ ಸಂಖ್ಯೆ ಹೆಚ್ಚಾಗಿದೆ. ಹತ್ತು ವರ್ಷಗಳ ಹಿಂದೆ ವೆಲ್ತ್ ಹೂರನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ 100 ಮಂದಿ ಮಾತ್ರ ಇದ್ದರು. ಆದರೇ, ಈಗ 1007 ಮಂದಿ ಇದ್ದಾರೆ. ಇದೇ ವೇಗದಲ್ಲಿ ಬೆಳವಣಿಗೆಯಾದರೇ, ಮುಂದಿನ ಐದು ವರ್ಷಗಳಲ್ಲಿ ಬಿಲಿಯನೇರ್ ಗಳ ಸಂಖ್ಯೆ 3000 ದಾಟಬಹುದು ಎಂದು ಸಂಸ್ಥೆ ಹೇಳುತ್ತಿದೆ.

ಭಾರತದಲ್ಲಿ ಶ್ರೀಮಂತರ ಆದಾಯದಲ್ಲಿ ಅತಿ ಹೆಚ್ಚಿನ ವೇಗವಾಗಿ ಸೃಷ್ಟಿಯಾಗುತ್ತಿದೆ. ಐಐಎಫ್ಎಲ್ ವೆಲ್ತ್ ಹೂರನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿರುವವರು ಕಳೆದ 10 ವರ್ಷಗಳಲ್ಲಿ ನಿತ್ಯ 2,020 ಕೋಟಿ ರೂಪಾಯಿಯನ್ನು ಗಳಿಸುತ್ತಿದ್ದಾರೆ.

2020-21ರಲ್ಲಿ ಭಾರತದ ಶ್ರೀಮಂತ ಕುಟುಂಬಗಳು

ಅದಾನಿ ಗ್ರೂಪ್​ನ ಗೌತಮ್ ಅದಾನಿ ಹಾಗೂ ಕುಟುಂಬದ ಸಂಪತ್ತು 5.06 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದರ ಹಿಂದಿನ ವರ್ಷ ಅದಾನಿ ಗ್ರೂಪ್ ಸಂಪತ್ತು 1.4 ಲಕ್ಷ ಕೋಟಿ ರೂಪಾಯಿ ಇತ್ತು. ಅದಾನಿ ಗ್ರೂಪ್ ಪ್ರತಿ ನಿತ್ಯದ ಆದಾಯವೇ ಬರೋಬ್ಬರಿ 1,002 ಕೋಟಿ ರೂಪಾಯಿ ಸಂಪತ್ತುನ್ನು ಗಳಿಸುತ್ತಿದ್ದಾರೆ. ಗೌತಮ್ ಅದಾನಿ ಸಂಪತ್ತಿನ ಖಾತೆಗೆ ಪ್ರತಿ ನಿತ್ಯ 1,002 ಕೋಟಿ ರೂಪಾಯಿ ಸೇರ್ಪಡೆಯಾಗುತ್ತಿದೆ. ಇದರಿಂದಾಗಿ ಅದಾನಿ ಕುಟುಂಬ ಭಾರತದಲ್ಲಿ ಎರಡನೇ ಅತಿ ದೊಡ್ಡ ಶ್ರೀಮಂತ ಕುಟುಂಬವಾಗಿದೆ.

ಗೌತಮ್ ಅದಾನಿ ಚೀನಾದ ಬಾಟಲ್ ವಾಟರ್ ಉತ್ಪಾದಿಸುವ ಜುವಾಂಗ್ ಶಾನಶಾನ್​ರನ್ನು ಹಿಂದಕ್ಕಿ ಏಷ್ಯಾದ ಎರಡನೇ ಅತಿ ದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಗೌತಮ್ ಅದಾನಿ ಜೊತೆಗೆ ದುಬೈನಲ್ಲಿರುವ ಅವರ ಸೋದರ ವಿನೋದ್ ಶಾಂತಿಲಾಲ್ ಅದಾನಿ ಕೂಡ ಐಎಎಫ್ಎಲ್ ಹೂರನ್ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಶ್ರೀಮಂತರ ಪಟ್ಟಿಯಲ್ಲಿ ಗೌತಮ ಅದಾನಿ ಎರಡು ಸ್ಥಾನ ಮೇಲೆಕ್ಕೇರಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ಸೋದರ ವಿನೋದ್ ಮತ್ತು ಕುಟುಂಬವು ಶ್ರೀಮಂತಿಕೆಯಲ್ಲಿ 12 ರ‍್ಯಾಂಕ್ ಜಿಗಿತವಾಗಿದ್ದು, 8ನೇ ರ‍್ಯಾಂಕ್ ನಲ್ಲಿದ್ದಾರೆ. ವಿನೋದ್ ಅದಾನಿ ಕುಟುಂಬದ ಸಂಪತ್ತು 1,31,600 ಕೋಟಿ ರೂಪಾಯಿಗೆ ಏರಿಕೆಯಾಗಿದೆ. 2020-21 ರಲ್ಲಿ ಶೇ.21 ರಷ್ಟು ಸಂಪತ್ತಿನಲ್ಲಿ ಏರಿಕೆಯಾಗಿದೆ.

ಇನ್ನೂ ಮುಖೇಶ್ ಅಂಬಾನಿಯ 2020-21 ರಲ್ಲಿ ಶೇಕಡ 9 ರಷ್ಟು ಏರಿಕೆಯಾಗಿದ್ದು, 7,18,000 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಮುಖೇಶ್ ಅಂಬಾನಿ ಪ್ರತಿನಿತ್ಯ 169 ಕೋಟಿ ರೂಪಾಯಿ ಗಳಿಸುತ್ತಿದ್ದಾರೆ. ಆದರೇ, ಮುಖೇಶ್ ಅಂಬಾನಿಗಿಂತ ಹೆಚ್ಚಿನ ಸಂಪತ್ತುನ್ನು ಪ್ರತಿ ನಿತ್ಯ ಗೌತಮ್ ಅದಾನಿಗಳಿಸುತ್ತಿದ್ದಾರೆ.

ಎಚ್‌ಸಿಎಲ್ ಕಂಪನಿಯ ಶಿವನಾಡರ್ ಸಂಪತ್ತು ಶೇ.67 ರಷ್ಟು ಏರಿಕೆಯಾಗಿದೆ. ಶಿವನಾಡರ್ 2,36,600 ಕೋಟಿ ರೂಪಾಯಿ ಸಂಪತ್ತು ಹೊಂದಿದ್ದಾರೆ. ಶಿವನಾಡರ್ ಱಂಕಿಂಗ್ ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಶಿವನಾಡರ್ 2020-21 ರಲ್ಲಿ ಪ್ರತಿ ನಿತ್ಯ 260 ಕೋಟಿ ರೂಪಾಯಿ ಗಳಿಸಿದ್ದಾರೆ.

ಅರ್ಸೇಲರ್ ಮಿತ್ತಲ್ ಕಂಪನಿಯ ಮಿತ್ತಲ್ ಗಳ ಸಂಪತ್ತು ಶೇ.187 ರಷ್ಟು ಏರಿಕೆಯಾಗಿದ್ದು, 1,74,400 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಲಕ್ಷ್ಮಿ ಎನ್ ಮಿತ್ತಲ್ ಕುಟುಂಬವು ಪ್ರತಿ ನಿತ್ಯ 312 ಕೋಟಿ ರೂಪಾಯಿಯನ್ನು 2020-21 ರಲ್ಲಿ ಗಳಿಸಿದ್ದಾರೆ. ಇನ್ನೂ ಪುಣೆಯ ಕೊರೊನಾ ಲಸಿಕೆಯನ್ನು ಉತ್ಪಾದಿಸುವ ಸೈರಸ್ ಪೂನಾವಾಲಾ ಕುಟುಂಬವು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯನ್ನು ಹೊಂದಿದೆ. ಈ ಕುಟುಂಬವು ಪ್ರತಿ ನಿತ್ಯ 190 ಕೋಟಿ ರೂಪಾಯಿ ಗಳಿಸಿದೆ. ಈ ಕುಟುಂಬದ ಸಂಪತ್ತು ಶೇ.74 ರಷ್ಟು ಏರಿಕೆಯಾಗಿದ್ದು, 1,63,700 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಇನ್ನೂ ಸೂಪರ್ ಮಾರ್ಟ್ ಬ್ಯುಸಿನೆಸ್ ಹೊಂದಿರುವ ರಾಧಾಕೃಷ್ಣನ್ ಧಾಮನಿ ಕುಟುಂಬವು ಭಾರತದ ಏಳನೇ ಅತಿ ದೊಡ್ಡ ಶ್ರೀಮಂತ ಕುಟುಂಬವಾಗಿದೆ. ಇವರ ಸಂಪತ್ತಿನ ಮೌಲ್ಯ 1,54,300 ಕೋಟಿ ರೂಪಾಯಿ ಆಗಿದೆ. ರಾಧಾಕೃಷ್ಣನ್ ಧಾಮನಿ ಕುಟುಂಬ ಪ್ರತಿ ನಿತ್ಯ 184 ಕೋಟಿ ರೂಪಾಯಿ ಗಳಿಸಿದೆ.

ಇನ್ನೂ ಕುಮಾರ ಮಂಗಳಂ ಬಿರ್ಲಾ ಮತ್ತು ಆದಿತ್ಯ ಬಿರ್ಲಾ ಗ್ರೂಪ್ ಐಐಎಫ್ಎಲ್ ಹೂರನ್ ಶ್ರೀಮಂತರ ಪಟ್ಟಿಯಲ್ಲಿ 10ನೇ ಱಂಕ್ ಪಡೆದಿದ್ದಾರೆ. ಇವರ ನಿವ್ವಳ ಸಂಪತ್ತು 1,22,200 ಕೋಟಿ ರೂಪಾಯಿ ಆಗಿದೆ. ಆದಿತ್ಯ ಬಿರ್ಲಾ ಗ್ರೂಪ್ ಸಂಪತ್ತು ಕಳೆದ ವರ್ಷ ಶೇ.84 ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಬಿರ್ಲಾ ಗ್ರೂಪ್ ಹೆಚ್ಚು ಸಂಪತ್ತಿನ ಕಂಪನಿಗಳ ಪಟ್ಟಿಯಲ್ಲಿ 9ನೇ ಱಂಕ್ ನಲ್ಲಿತ್ತು. ಬಿರ್ಲಾ ಗ್ರೂಪ್ ಸಂಪತ್ತುನಲ್ಲಿ ವರ್ಷದಿಂದ ವರ್ಷಕ್ಕೆ ಶೇ.230 ರಷ್ಟು ಏರಿಕೆಯಾಗಿದೆ. ಬಿರ್ಲಾ ಗ್ರೂಪ್ ಪ್ರತಿ ನಿತ್ಯ 230 ಕೋಟಿ ರೂಪಾಯಿ ಗಳಿಸಿದೆ.

ಇವರುಗಳ ಪೈಕಿ ಅತ್ಯಂತ ಕಿರಿಯ ಬಿಲಿಯನೇರ್ ಅಂದರೇ, 23ವರ್ಷದ ಭಾರತ್ ಪೇ ಸಂಸ್ಥಾಪಕ ಶಾಶ್ವಂತ್ ನಕರಾನಿ.

ಹೆಸರು ಕಂಪನಿ ಒಟ್ಟು ಸಂಪತ್ತು
1 ಮುಕೇಶ್‌ ಅಂಬಾನಿ (64) ರಿಯಲಯನ್ಸ್‌ ಇಂಡಸ್ಟ್ರೀಸ್‌ ₹ 7.18 ಲಕ್ಷ ಕೋಟಿ
2 ಗೌತಮ್‌ ಅದಾನಿ (59)  ಅದಾನಿ ₹ 5.05 ಲಕ್ಷ ಕೋಟಿ
3 ಶಿವ ನಾಡರ್‌ (76)  ಎಚ್‌ಸಿಎಲ್‌ ₹ 2.36 ಲಕ್ಷ ಕೋಟಿ
4 ಎಸ್‌.ಪಿ.ಹಿಂದುಜಾ (85)  ಹಿಂದುಜಾ ₹ 2.20 ಲಕ್ಷ ಕೋಟಿ
5 ಎಲ್‌.ಎನ್‌.ಮಿತ್ತಲ್‌ (71) ಆರ್ಸೆಲೋರ್‌ ಮಿತ್ತಲ್‌ ₹ 1.74 ಲಕ್ಷ ಕೋಟಿ
6 ಸೈರಸ್ ಎಸ್‌ ಪೊನ್ನಾವಾಲಾ (80) ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ₹ 1.63 ಲಕ್ಷ ಕೋಟಿ
7 ರಾಧಾಕಿಶನ್‌ ದಮಾನಿ (66) ಅವೆನ್ಯೂ ಸೂಪರ್‌ಮಾರ್ಟ್ಸ್‌ ₹ 1.54 ಲಕ್ಷ ಕೋಟಿ
8 ವಿನೋದ್‌ ಶಾಂತಿಲಾಲ್‌ ಅದಾನಿ ಅದಾನಿ ₹ 1.31 ಲಕ್ಷ ಕೋಟಿ
9 ಕುಮಾರ್‌ ಮಂಗಳಂ ಬಿರ್ಲಾ (54) ಆದಿತ್ಯಾ ಬಿರ್ಲಾ ₹ 1.22 ಲಕ್ಷ ಕೋಟಿ
10 ಜಯ್‌ ಚೌಧರಿ (62) ಜಿಸ್ಕೇಲರ್‌ ₹ 1.21 ಲಕ್ಷ ಕೋಟಿ

 

Donate Janashakthi Media

Leave a Reply

Your email address will not be published. Required fields are marked *