ಮುಂಬೈ: ಬೇಟೆಗೆ ಹೊರಟ ತಂಡವೊಂದರ ಸದಸ್ಯರು ತಮ್ಮದೇ ತಂಡದ ಸದಸ್ಯನೊಬ್ಬನನ್ನು ಕಾಡು ಹಂದಿ ಎಂಬುದಾಗಿ ತಪ್ಪಾಗಿ ಭಾವಿಸಿ ಗುಂಡು ಹಾರಿಸಿ ಕೊಂದ ಘಟನೆಯೊಂದು ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ವರದಿಯಾಗಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಒಂಭತ್ತು ಮಂದಿಯನ್ನು ಬಂಧಿಸಿದ್ದಾರೆ. ಮುಂಬೈ
ಜನವರಿ 29ರಂದು ನಡೆದ ಘಟನೆಗೆ ಸಂಬಂಧಿಸಿ ಪೊಲೀಸರು ಆರೋಪಿಗಳ ವಿರುದ್ಧ ‘ಕೊಲೆಗೆ ಸಮಾನವಲ್ಲದ ಮಾನವಹತ್ಯೆ’ ಮತ್ತು ಇತರ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದರು. ಗ್ರಾಮಸ್ಥರ ಗುಂಪೊಂದು ಕಾಡು ಹಂದಿಗಳ ಬೇಟೆಗಾಗಿ ಪಾಲ್ಘಾರ್ ಜಿಲ್ಲೆಯ ಮನೋರ್ ಪ್ರದೇಶದಲ್ಲಿರುವ ಬೋರ್ಶೆಟಿ ಅರಣ್ಯಕ್ಕೆ ಹೋಗಿತ್ತು. ಮುಂಬೈ
ಇದನ್ನೂ ಓದಿ: ದ. ಕನ್ನಡದ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಪರಿಹಾರಕ್ಕಾಗಿ ಸತೀಶ್ ಜಾರಕಿಹೊಳಿಯವರಿಗೆ ಪತ್ರ
”ಬೇಟೆಯ ವೇಳೆ, ಕೆಲವರು ಗುಂಪಿನಿಂದ ಬೇರೆಯಾದರು. ಸ್ವಲ್ಪ ಹೊತ್ತಿನ ಬಳಿಕ, ಅವರನ್ನು ಬೇಟೆಗಾರರ ಪೈಕಿ ಒಬ್ಬ ಕಾಡು ಹಂದಿ ಎಂಬುದಾಗಿ ತಪ್ಪಾಗಿ ಭಾವಿಸಿ ಅವರತ್ತ ಗುಂಡು ಹಾರಿಸಿದನು. ಅವನು ಹಾರಿಸಿದ ಗುಂಡು ಇಬ್ಬರಿಗೆ ಬಡಿಯಿತು. ಅವರ ಪೈಕಿ ಒಬ್ಬ ಸ್ಥಳದಲ್ಲೇ ಮೃತಪಟ್ಟನು” ಎಂದು ಪಾಲ್ಘಾರ್ ಉಪ ಪೊಲೀಸ್ ಸೂಪರಿಂಟೆಂಡೆಂಡ್ ಅಭಿಜಿತ್ ಧಾರಾಶಿವ್ಕರ್ ತಿಳಿಸಿದರು.
ಮೃತರನ್ನು 60 ವರ್ಷದ ರಮೇಶ್ ವರ್ತ ಎಂಬುದಾಗಿ ಗುರುತಿಸಲಾಗಿದೆ. ಹೆದರಿದ ತಂಡದ ಇತರ ಸದಸ್ಯರು, ಪೊಲೀಸರಿಗೆ ಮಾಹಿತಿ ನೀಡುವ ಬದಲು, ಮೃತದೇಹವನ್ನು ಪೊದೆಯೊಂದರಲ್ಲಿ ಅಡಗಿಸಿಟ್ಟರು. ಬಳಿಕ, ತನ್ನ ಗಂಡ ನಾಪತ್ತೆಯಾಗಿರುವ ಬಗ್ಗೆ ಮೃತರ ಪತ್ನಿ ಸೋಮವಾರ ಪೊಲೀಸರಿಗೆ ದೂರು ನೀಡಿದರು.
ತನಿಖೆಯ ವೇಳೆ, ಜನವರಿ 28ರಂದು ಗ್ರಾಮಸ್ಥರ ಗುಂಪೊಂದು ಮನೋರ್ನಲ್ಲಿರುವ ಆಲನ್ ಬೆಟ್ಟಕ್ಕೆ ಬೇಟೆಗೆ ಹೋಗಿರುವ ವಿಷಯ ತಿಳಿಯಿತು. ಮೃತ ರಮೇಶ್ ವರ್ತ ತಂಡವನ್ನು ಮಾರನೇ ದಿನ ಸೇರಿಕೊಂಡಿದ್ದರು. ಆಹಾರ ತಯಾರಿಸುತ್ತಿದ್ದ ಸ್ಥಳದತ್ತ ಅವರು ನಡೆದುಕೊಂಡು ಹೋಗುತ್ತಿದ್ದರು. ಅವರು ಒಣಗಿದ ಎಲೆಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಸದ್ದಾಗುತ್ತಿತ್ತು. ಅಲ್ಲೇ ಅಡಗಿಕೊಂಡಿದ್ದ ಸಾಗರ್ ನಾಗೇಶ್ ಹಡಲ್ (28), ರಮೇಶ್ ವರ್ತರನ್ನು ಕಾಡು ಹಂದಿ ಎಂಬುದಾಗಿ ತಪ್ಪಾಗಿ ಭಾವಿಸಿ ಗುಂಡು ಹಾರಿಸಿದನು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ರಮೇಶ್ ವರ್ತರ ಕೊಳೆತುಹೋಗಿರುವ ಶವವನ್ನು ಬುಧವಾರ ಪತ್ತೆಹಚ್ಚಲಾಯಿತು. ಪೊಲೀಸರು ಹಡಲ್ ಸೇರಿದಂತೆ ಒಂಭತ್ತು ಮಂದಿಯನ್ನು ಬಂಧಿಸಿದ್ದಾರೆ.
ಇದನ್ನೂ ನೋಡಿ: ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರಿಂದ ಪ್ರತಿಭಟನೆ Janashakthi Media