ಹುಬ್ಬಳ್ಳಿ: ಬೆಣ್ಣೆ ಹಳ್ಳದಲ್ಲಿ ವ್ಯಾಪಕ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿ ನೂರಾರು ಕುರಿ ಹಾಗೂ ಮೂವರು ಕೊಚ್ಚಿ ಹೋಗಿರುವ ಅವಾಂತರ ಸೃಷ್ಟಿಯಾಗಿತ್ತು.
ಬೆಣ್ಣೆ ಹಳ್ಳದ ನೀರಿಗೆ ಸಿಲುಕಿ ಹಾಕಿಕೊಂಡಿದ್ದ ಮೂವರನ್ನು ಹಾಗೂ 150 ಕುರಿಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಈ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ದೇವನೂರು ಗ್ರಾಮದ ಹತ್ತಿರ ನಡೆದಿದೆ.
ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಪ್ರಕರಣ:ಯಾವುದೇ ತನಿಖಾ ಸಂಸ್ಥೆ ಆಗಿರಲಿ ಒಂದು ಪಕ್ಷದ ಪರ ಕೆಲಸ ಮಾಡಬಾರದು – ಸಿಎಂ
ಕುರಿಗಳನ್ನು ಮೇಯಿಸಲು ಹೋದ ಹನುಮಂತ ಬೆನಕನಹಳ್ಳಿ, ಮಂಜಪ್ಪ ಬೆನಕನಹಳ್ಳಿ ಮತ್ತು ಇನ್ನೋರ್ವ ವ್ಯಕ್ತಿ ಸೇರಿ 150 ಕುರಿಗಳು ನೀರಿನ ಪ್ರವಾಹಕ್ಕೆ ಸಿಲುಕಿದ್ದನ್ನು ಕಂಡು ಸ್ಥಳೀಯರು ತಾಲೂಕು ಆಡಳಿತಕ್ಕೆ ಕರೆ ಮಾಡಿದ್ದರು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯ ಪ್ರವೃತ್ತವಾಗಿ ರಭಸದಿಂದ ಹರಿಯುತ್ತಿರುವ ನೀರಿನ ಮಧ್ಯೆ ಹಗ್ಗ ಕಟ್ಟಿ ಮೂವರು ವ್ಯಕ್ತಿಗಳು ಮತ್ತು ಕುರಿಗಳ ರಕ್ಷಣೆ ಮಾಡಿದ್ದಾರೆ.
ಇದನ್ನೂ ನೋಡಿ: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಸನ್ಮಾನ – ಸರ್ಕಾರ ಅವರ ಜಾಮೀನು ರದ್ದು ಪಡಿಸಲಿ – ಬಿಟಿ ವೆಂಕಟೇಶ್