ಗಾಂಧೀನಗರ: ಗುಜರಾತ್‌ನ ಛೋಟೌದೇಪುರ ಜಿಲ್ಲೆಯ ಪನೇಜ್ ಗ್ರಾಮದಲ್ಲಿ ಪಾಪಿಯೊಬ್ಬ ಐದು ವರ್ಷದ ಬಾಲಕಿಯ ಕತ್ತು ಸೀಳಿ ಕೊಲೆಗೈದು ಆಕೆಯ ರಕ್ತವನ್ನು ದೇವಾಲಯದ ಮೆಟ್ಟಿಲುಗಳ ಮೇಲೆ ಚೆಲ್ಲಿದ ಘಟನೆ ಇಂದು ಬೇಳಕಿಗೆ ಬಂದಿದೆ. ಗಾಂಧೀನಗರ
ನರಬಲಿ ಪ್ರಕರಣದಲ್ಲಿ ಐದು ವರ್ಷದ ಬಾಲಕಿಯ ಗಂಟಲು ಸೀಳಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಆರೋಪಿಯನ್ನು ಲಾಲಾ ತಡ್ವಿ ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ ಮಗುವಿನ ತಾಯಿಯ ಮುಂದೆಯೇ ಆರೋಪಿ ಆಕೆಯನ್ನು ಅಪಹರಿಸಿದ್ದಾನೆ. ಬಳಿಕ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಕೊಡಲಿಯಿಂದ ಆಕೆಯ ಕುತ್ತಿಗೆಗೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ಇದನ್ನೂ ಓದಿ: ಮಾಹಿತಿ ಹಕ್ಕು – ಈಗ ಮಾಹಿತಿ ನಿರಾಕರಣೆಯ ಹಕ್ಕು ಆಗಿದೆ: ಶೈಲೇಶ್ ಗಾಂಧಿ
ಬಳಿಕ ಆಕೆಯ ಕುತ್ತಿಗೆಯಿಂದ ಹೊರಬರುತ್ತಿದ್ದ ರಕ್ತವನ್ನು ಸಂಗ್ರಹಿಸಿ, ಅದರಲ್ಲಿ ಸ್ವಲ್ಪ ಭಾಗವನ್ನು ತನ್ನ ಮನೆಯಲ್ಲಿರುವ ಸಣ್ಣ ದೇವಾಲಯದ ಮೆಟ್ಟಿಲುಗಳ ಮೇಲೆ ಸುರಿಸಿದ್ದಾನೆ.
ಈ ಎಲ್ಲಾ ದೃಶ್ಯಗಳನ್ನು ಆಕೆಯ ತಾಯಿ ಮತ್ತು ಇತರ ಕೆಲವು ಗ್ರಾಮಸ್ಥರು ಆಘಾತದಿಂದಲೇ ನೋಡುತ್ತಿದ್ದರೇ ವಿನಃ ಆತನನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಯಾಕೆಂದರೆ ಆರೋಪಿ ತನ್ನ ಕೈಯಲ್ಲಿ ಕೊಡಲಿ ಹಿಡಿದಿದ್ದರಿಂದ ಭಯಗೊಂಡರು ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಅಗರ್ವಾಲ್ ತಿಳಿಸಿದ್ದಾರೆ.
ಆರೋಪಿಯು ಮಾಂತ್ರಿಕನಂತೆ ಕಾಣುತ್ತಿಲ್ಲ, ಮತ್ತು ಕೊಲೆಯ ಹಿಂದಿನ ನಿಖರವಾದ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಬಾಲಕಿಯ ಕುಟುಂಬಸ್ಥರ ದೂರಿನ ಮೇರೆಗೆ, ಕೊಲೆ ಮತ್ತು ಅಪಹರಣಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ಗಳ ಅಡಿಯಲ್ಲಿ ತಡ್ವಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತಿದೆ ಎಂದು ಅಗರ್ವಾಲ್ ಮಾಹಿತಿ ನೀಡಿದರು.
ಇದನ್ನೂ ನೋಡಿ: Karnataka Legislative Assembly Live Day 06 | ವಿಧಾನಸಭೆ ಬಜೆಟ್ ಅಧಿವೇಶನದ ನೇರ ಪ್ರಸಾರ