ಮುಂಬೈ: ಮಲಾಡ್ ಮೂಲದ ವೈದ್ಯರೊಬ್ಬರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಐಸ್‌ಕ್ರೀಂನಲ್ಲಿ ಮನುಷ್ಯನ ಬೆರಳಿನ ಭಾಗವನ್ನು ಪತ್ತೆ ಮಾಡಿರುವುದು ವರದಿಯಾಗಿದ್ದು,ಮಲಾಡ್ ಪೊಲೀಸರು ಬೆರಳನ್ನು ಫೋರೆನ್ಸಿಕ್ ಪರೀಕ್ಷೆಗೆ ಕಳುಹಿಸಿದ್ದಾರೆ ಮತ್ತು ಐಸ್ ಕ್ರೀಮ್ ಬ್ರ್ಯಾಂಡ್ ಯಮ್ಮೋ ವ್ಯವಸ್ಥಾಪಕ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆಂದು ತಿಳಿದುಬಂದಿದೆ.
ಬೆಳಿಗ್ಗೆ 10.10 ರ ಸುಮಾರಿಗೆ ಅವರ ಮನೆಗೆ ಆರ್ಡರ್ ಒಂದು ಬಂದಿದೆ. ಆದರೆ ಮೂರು ಮಾವಿನ ಐಸ್ ಕ್ರೀಂ ಬದಲು ಡೆಲಿವರಿ ಮ್ಯಾನ್ ಎರಡು ಮಾವು ಮತ್ತು ಒಂದು ಬಟರ್ ಸ್ಕಾಚ್ ಐಸ್ ಕ್ರೀಂ ತಂದಿದ್ದು, ಅದು ಆರ್ಡರ್ ನಂತೆ ಇರಲಿಲ್ಲ.
ಊಟದ ನಂತರಬಟರ್‌ಸ್ಕಾಚ್ ಐಸ್ ಕ್ರೀಮ್ ಕೋನ್ ಅನ್ನು ತೆಗೆದು ತಿನ್ನಲು ಹೋದಾಗ ಅವನ ಬಾಯಲ್ಲಿ ಏನೋ ವಿಚಿತ್ರ ಅನ್ನಿಸಿದೆ. ಏನು ಅಂತ ಅದನ್ನು ಉಗುಳಿದಾಗ, ಅದು ಮನುಷ್ಯನ ಉಗುರನ್ನು ಹೊಂದಿರೋ ಬೆರಳಿನ ಭಾಗ ಎನ್ನುವುದನ್ನು ತಿಳಿದು,ಆಘಾತಕ್ಕೊಳಗಾದೆ.ಅದನ್ನು ದೂರ ಎಸೆಯಬೇಕು ಎಂದು ಅನಿಸಿತ್ತು ಎಂದು ಫೆರಾವೊ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದ್ದಾರೆ. Instagram ಮೂಲಕ Yummo ಐಸ್ ಕ್ರೀಮ್ ಕಂಪೆನಿಗೆ ದೂರು ನೀಡಿದಾಗ ಕಸ್ಟಮರ್ ಕೇರ್ ಕಾರ್ಯನಿರ್ವಾಹಕರು ಶೀಘ್ರದಲ್ಲೇ ಅವರನ್ನು ಫೆರಾವೋ ಮನೆಗೆ ಬಂದಿದ್ದಾರೆ. ಐಸ್ ಕ್ರೀಂನಲ್ಲಿ ಮನುಷ್ಯನ ಬೆರಳು ಇತ್ತು ಎನ್ನುವುದನ್ನು ಫೆರಾವೊ ಆ ಕಾರ್ಯನಿರ್ವಾಹರಿಗೆ ಹೇಳಿದಾಗ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್, ಆರ್ಡರ್ ವಿವರಗಳನ್ನು ಮತ್ತು ಐಸ್ ಕ್ರೀಮ್ ಪ್ಯಾಕ್‌ನಲ್ಲಿರುವ ಮಾಹಿತಿಯ ಚಿತ್ರವನ್ನು ಕಳುಹಿಸಲು ಹೇಳಿದ್ದಾರೆ.
ಯುಮ್ಮೋದ ಈ ಬೇಜವಾಬ್ದಾರರಾಗಿರುವ ಜನರ ವಿರುದ್ಧ ಐಪಿಸಿಯ ಸೆಕ್ಷನ್ 272 (ಮಾರಾಟಕ್ಕೆ ಉದ್ದೇಶಿಸಲಾದ ಆಹಾರದ ಕಲಬೆರಕೆ), 273 (ಹಾನಿಕಾರಕ ಆಹಾರದ ಮಾರಾಟ) ಮತ್ತು 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ” ಎಂದು ಡಿಸಿಪಿ ಆನಂದ್ ಭೋಯಿಟ್ ಹೇಳಿದ್ದಾರೆ. ಬೆರಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ, ಐಸ್ ಕ್ರೀಮ್ ತಯಾರಿಸಿದ ಕಾರ್ಖಾನೆ ಮತ್ತು ಕಂಪನಿಯ ಅಧಿಕಾರಿಗಳೊಂದಿಗೆ ನಾವು ವಿಚಾರಣೆ ನಡೆಸುತ್ತೇವೆ ಎಂದು ಹಿರಿಯ ಇನ್ಸ್‌ಪೆಕ್ಟರ್ ರವಿ ಅದಾನೆ ತಿಳಿಸಿದ್ದಾರೆ.
ಇದು ಮನುಷ್ಯರ ಬೆರಳಾಗಿದ್ದರೆ, ಕೆಲವು ಮೂಳೆಗಳು ಮತ್ತು ಅಸ್ಥಿರಜ್ಜುಗಳಿದ್ದರೆ ತಜ್ಞರು ವ್ಯಕ್ತಿಯ ವಯಸ್ಸನ್ನು ಪತ್ತೆಹಚ್ಚಲು ಹಾಗೂ ಲಿಂಗವನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ” ಎಂದು ಸಿವಿಕ್-ರನ್ ಕೂಪರ್ ಆಸ್ಪತ್ರೆಯ ಡೀನ್ ವಿಧಿವಿಜ್ಞಾನ ತಜ್ಞ ಡಾ.ಡಾ.ಶೈಲೇಶ್ ಮೋಹಿತೆ, ತಿಳಿಸಿದ್ದಾರೆ.