-ಪವಿತ್ರ ಎಸ್, ಸಹಾಯಕ ಪ್ರಾಧ್ಯಾಪಕರು
ನಿನ್ನ ಕಣ್ಣಲಿ
ಹುಡುಕುತ್ತಿರುವಂತೆ
ಪದಗಳ…
ಜೋಡಿ ಕಣ್ಣಲ್ಲಿ
ಜೋಡು ನುಡಿಗಳಲ್ಲಿ
ಸಿಗುವ
ಏಕಾರ್ಥದಂತೆ
ಧ್ವನಿಸುವ
ಮುನ್ನುಡಿಗೆ
ಕಾಯಬೇಕಿದೆ
ಕಾಲವ…
ಇದು ಬೆನ್ನುಡಿ
ಬರೆದಷ್ಟೂ ಸುಲಭವಲ್ಲ…
ಸುಡು ತಾಪಂ
ತಣಿಸಲೋಸುಗವೇ….
ಪೂರ್ಣ ಚಂದ್ರನಲ್ಲದಿದ್ದರೂ
ಅರ್ಧ ಚಂದ್ರನನ್ನಾದರೂ
ನೋಡುತ್ತಾ
ಖುಷಿಯರಸುವ
ಕೆಲ ಗಳಿಗೆಗಳ…
ಮರೆಯ ಬೇಕಿದೆ…
ಎಲ್ಲಾ ನೋವು
ಏಕಾಂತದಲ್ಲಿ ….
ಬಂಧಿಯಾಗುವಲ್ಲಿ…
ಇದನ್ನೂ ಓದಿ: ಗಾಯ ಕಥಾ ಸರಣಿ | ಸಂಚಿಕೆ 24| ಜೈಲಿನಿಂದ ಬಿಡುಗಡೆಯಾದ ಧಣಿ…
ಚಿತ್ರಗಳು : ಎಚ್.ಆರ್. ನವೀನ್ ಕುಮಾರ್
ಇದನ್ನೂ ನೋಡಿ: ಕೇಂದ್ರ, ರಾಜ್ಯ ಸರಕಾರಗಳ ವಿರುದ್ಧ ರೈತ ಕೂಲಿಕಾರರ ಪ್ರತಿಭಟನೆ Janashakthi Media