ನವದೆಹಲಿ: ದೇಶದ ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಐತಿಹಾಸಿಕ ತೀರ್ಪನ್ನು ನೀಡಿದ್ದೂ, ರಾಜಕೀಯ ಪಕ್ಷಗಳಿಗೆ ಹರಿದು ಬರುತ್ತಿದ್ದ ಎಲೆಕ್ಟೋರಲ್ ಬಾಂಡ್ ಅನ್ನು ರದ್ದುಗೊಳಿಸಿತ್ತು. ಆದರೆ, ರಾಜಕೀಯ ಪಾರ್ಟಿಗಳು ಅದಕ್ಕೆ ಇನ್ನೊಂದು ದಾರಿಯನ್ನು ಹುಡುಕಿಕೊಂಡಿದೆ. ದೇಣಿಗೆ
ಅಳಿಯ ಅಲ್ಲ ಮಗಳ ಗಂಡ ಎನ್ನುವ ಹಾಗೇ, ಎಲೆಕ್ಟೋರಲ್ ಬಾಂಡ್ ಬದಲಿಗೆ ʻಚುನಾವಣಾ ಟ್ರಸ್ಟ್ʼಗಳ ಮೂಲಕ ವಿವಿಧ ಪಾರ್ಟಿಗಳಿಗೆ ಕೋಟ್ಯಾಂತರ ರೂಪಾಯಿ ಹಣ ಬರುತ್ತಿರುವುದು ಮಾತ್ರ ನಿಲ್ಲಲಿಲ್ಲ. ಬಾಂಡ್ ನಿಷೇಧದ ನಂತರದ ಮೊದಲ ಹಣಕಾಸು ವರ್ಷದಲ್ಲಿ ಯಾವ ಪಾರ್ಟಿಗೆ ಎಷ್ಟು ಹಣ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.
ಮೊದಲ ಹಣಕಾಸು ವರ್ಷದಲ್ಲಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಭಾರೀ ಪ್ರಮಾಣದಲ್ಲಿ ದೇಣಿಗೆ ಹರಿದು ಬಂದಿದೆ. ಇದಾದ ನಂತರದ ಸ್ಥಾನ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ಸಿಗೆ. ಒಟ್ಟು ದೇಣಿಗೆಯ ಶೇ. 82ರಷ್ಟು ಮೊತ್ತ ಬಿಜೆಪಿ ಬೊಕ್ಕಸಕ್ಕೆ ಬಿದ್ದಿದೆ. ಒಂಬತ್ತು ಚುನಾವಣಾ ಟ್ರಸ್ಟ್’ಗಳಿಂದ ಕೋಟ್ಯಾಂತರ ರೂಪಾಯಿ ದೇಣಿಗೆ ಬಂದಿದೆ.
ಇದನ್ನೂ ಓದಿ: ಬೆಂಗಳೂರು | ಮನರೇಗಾ ಹೆಸರು ಬದಲಿಸಿದ ಬಿಜೇಪಿಗರು ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಬೇಡಿ – ಡಿ.ಕೆ. ಶಿವಕುಮಾರ್
ಒಂಬತ್ತು ಟ್ರಸ್ಟ್’ಗಳ ಮೂಲಕ ಕಳೆದ ಒಂದು ವರ್ಷದ ಹಣಕಾಸು ವರ್ಷದಲ್ಲಿ ಪಾರ್ಟಿಗಳಿಗೆ ಹರಿದು ಬಂದಿರುವ ಒಟ್ಟು ದೇಣಿಗೆ ಮೊತ್ತ – 3,811 ಕೋಟಿ ರೂಪಾಯಿ. ಈ ಪೈಕಿ, ಸಿಂಹಪಾಲು ಬಿಜೆಪಿಗೆ ಶೇ. 82, ಕಾಂಗ್ರೆಸ್ ಪಾರ್ಟಿಗೆ ಶೇ. 8, ಇತರ ಪಾರ್ಟಿಗಳಿಗೆ ಶೇ.10ರಷ್ಟು ದೇಣಿಗೆ ಬಂದಿದೆ.
ಹಲವು ವರ್ಷಗಳಿಂದ ಸಂಪ್ರದಾಯದ ರೀತಿಯಲ್ಲಿ ಬರುತ್ತಿದ್ದ ಚುನಾವಣಾ ಬಾಂಡ್ ಪದ್ದತಿ ‘ಅಸಂವಿಧಾನಿಕ’ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪನ್ನು ನೀಡಿತ್ತು. ಇದಾದ ನಂತರದ ಮೊದಲ ಹಣಕಾಸು ವರ್ಷದಲ್ಲಿ ( 2024 – 25) ಹರಿದು ಬಂದ ಹಣ, ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಸುಮಾರು ಇನ್ನೂರು ಪಟ್ಟು ಹೆಚ್ಚು.
ಆರ್ಥಿಕ ವರ್ಷ 2023 – 2024ರಲ್ಲಿ ವಿವಿಧ ಟ್ರಸ್ಟ್’ಗಳು ನೀಡಿದ ಮೊತ್ತ 1,218 ಕೋಟಿ ರೂಪಾಯಿ ಆಗಿತ್ತು. ಆ ಮೊತ್ತ ಈಗ 3,811 ಕೋಟಿ ರೂಪಾಯಿ ಆಗಿದೆ. ಡಿಸೆಂಬರ್ 20, 2024ಕ್ಕೆ ಚುನಾವಣಾ ಆಯೋಗದ ಬಳಿ ಹತ್ತೊಂಬತ್ತು ಚುನಾವಣಾ ಟ್ರಸ್ಟ್ ನೊಂದಾಣಿಸಿಕೊಂಡಿದ್ದರೂ, ಹದಿಮೂರರ ಕೊಡುಗೆಯ ವರದಿ ಲಭ್ಯವಾಗಿತ್ತು.
ಚುನಾವಣಾ ಟ್ರಸ್ಟ್ ಮೂಲಕ ಕಂಪನಿಗಳು ಅಥವಾ ಖಾಸಗಿ ವ್ಯಕ್ತಿಗಳು ಟ್ರಸ್ಟ್’ಗಳಿಗೆ ದೇಣಿಗೆ ನೀಡಲು ಅನುವನ್ನು ಮಾಡಿಕೊಡುತ್ತದೆ. ಇದಾದ ನಂತರ, ಟ್ರಸ್ಟ್’ಗಳು ಅಕೌಂಟಿಗೆ ಬಂದ ಹಣವನ್ನು ತಮ್ಮ ಇಚ್ಚೆಗೆ ತಕ್ಕಂತೆ, ಯಾವುದೇ ರಾಜಕೀಯ ಪಕ್ಷಗಳಿಗೆ ವರ್ಗಾಯಿಸುವ ಅವಕಾಶವಿರುತ್ತದೆ.
ಇದನ್ನೂ ನೋಡಿ: ₹ 36 ಸಾವಿರ ವೇತನಕ್ಕೆ ಆಗ್ರಹ: ಗ್ರಾ.ಪಂ. ನೌಕರರ ಪ್ರತಿಭಟನೆ Janashakthi Media
