ರಾಷ್ಟ್ರಪತಿ ಚುನಾವಣೆ: ಸಂಸದರ ಮತ ಮೌಲ್ಯ 708ರಿಂದ 700ಕ್ಕೆ ಇಳಿಕೆ

ನವದೆಹಲಿ: ರಾಷ್ಟ್ರಪತಿ ಸ್ಥಾನಕ್ಕೆ ಮುಂಬರುವ ಜುಲೈ ತಿಂಗಳಿನಲ್ಲಿ ಚುನಾವಣೆ ನಡೆಯಲಿದ್ದು, ಈ ಬಾರಿ ಚುನಾವಣೆಯಲ್ಲಿ ಪ್ರತೀ ಸಂಸದನ ಮತ ಮೌಲ್ಯ 708ರಿಂದ 700ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ. ಅದಕ್ಕೆ ಕಾರಣ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಇಲ್ಲದೇ ಇರುವುದು ಎನ್ನಲಾಗಿದೆ.

ಲಡಾಖ್‌ ಮತ್ತು ಜಮ್ಮು–ಕಾಶ್ಮೀರ ಎಂದು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜನೆಗೂ ಮೊದಲು ಮೊದಲು ಅಲ್ಲಿ 83 ವಿಧಾನಸಭಾ ಕ್ಷೇತ್ರಗಳು ಇದ್ದವು. ಸದ್ಯ ಅಲ್ಲಿ ವಿಧಾನಸಭೆ ವಿಸರ್ಜಿಸಲಾಗಿದೆ. ಹೀಗಾಗಿ ಸಂಸದರ ಮತದ ಮೌಲ್ಯ ತಗ್ಗಲಿದೆ. ಹೀಗಿದ್ದರೂ ಕೂಡ ಅಲ್ಲಿನ ಲೋಕಸಭಾ ಸದಸ್ಯರು ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ.

ಇದನ್ನು ಓದಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ ಪ್ರದಾನ

ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ, ಪುದುಚೇರಿ, ಜಮ್ಮು–ಕಾಶ್ಮೀರ ಹಾಗೂ ಎಲ್ಲ ರಾಜ್ಯಗಳಲ್ಲಿನ ಶಾಸಕರ ಸಂಖ್ಯೆಯ ಆಧಾರದಲ್ಲಿ ಸಂಸದರ ಮತದ ಮೌಲ್ಯ ನಿರ್ಧಾರವಾಗುತ್ತದೆ.

ಈ ಹಿಂದೆ 1974ರಲ್ಲಿ 182 ಸದಸ್ಯ ಬಲ ಇದ್ದ ಗುಜರಾತ್‌ ವಿಧಾನಸಭೆ ವಿಸರ್ಜಿಸಲಾಗಿತ್ತು. ಹೀಗಾಗಿ ಅಗ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ರಾಷ್ಟ್ರಪತಿ ಚುನಾವಣೆಗೆ ಮತಮೌಲ್ಯ ಮಾರ್ಪಡಿಸಲಾಗಿತ್ತು.

ಇದನ್ನು ಓದಿ: ಪಿಡಿಒಯಿಂದ ರಾಷ್ಟ್ರಪತಿವರೆಗೂ ಆರೆಸ್ಸೆಸ್‌ ನವರೇ ಇದ್ದಾರೆ: ಹೆಚ್‌ಡಿಕೆಗೆ ಪ್ರತಿಕ್ರಿಯಿಸಿದ ಸಚಿವ ಸುನಿಲ್ ಕುಮಾರ್

1997ರಿಂದಲೂ ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್‌ ಸದಸ್ಯರೊಬ್ಬರ ಮತದ ಮೌಲ್ಯ 708 ಎಂದು ನಿಗದಿಪಡಿಸಲಾಗಿದೆ. 1952ರಲ್ಲಿ ನಡೆದ ಮೊದಲ ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸದರೊಬ್ಬರ ಮತಮೌಲ್ಯ 494 ಹಾಗೂ 1957ರಲ್ಲಿ 496ಕ್ಕೆ ಏರಿಕೆ ಮಾಡಲಾಗಿತ್ತು. 1962ರಲ್ಲಿ 493ಕ್ಕೆ ಏರಿಕೆಯಾಗಿತ್ತು. 1967 ಮತ್ತು 1969ರಲ್ಲಿ ಮತಮೌಲ್ಯ 576 ಎಂದು ನಿಗದಿಯಾಗಿದ್ದವು. 1974ರ ರಾಷ್ಟ್ರಪತಿ ಚುನಾವಣೆ ವೇಳೆ ಸಂಸತ್‌ ಸದಸ್ಯರೊಬ್ಬರ ಮತ ಮೌಲ್ಯ 723ಕ್ಕೆ ಪರಿಷ್ಕರಿಸಲಾಗಿತ್ತು.

ರಾಷ್ಟ್ರಪತಿ ಆಯ್ಕೆ ವಿಧಾನ

ಸಂಸತ್ತಿನ ಉಭಯ ಸದನಗಳ ಚುನಾಯಿತ ಸದಸ್ಯರು ಮತ್ತು ರಾಜ್ಯಗಳ ವಿಧಾನಸಭೆಗಳು ಮತ್ತು ದೆಹಲಿ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳ ಚುನಾಯಿತ ಸದಸ್ಯರು ಮತವನ್ನು ಚಲಾಯಿಸಲಿದ್ದಾರೆ.

ಹಾಗಾಗಿ, ಚುನಾವಣಾ ಪ್ರಕ್ರಿಯೆಯಲ್ಲಿ ಸದ್ಯ 543 ಲೋಕಸಭಾ ಸಂಸದರು, 233 ರಾಜ್ಯಸಭಾ ಸಂಸದರು ಮತ್ತು 4,120 ಶಾಸಕರನ್ನು ರಾಜ್ಯ ವಿಧಾನಸಭೆಗಳು ಹೊಂದಿವೆ. ಒಟ್ಟು ಚುನಾವಣೆಯ ಮತ ಮೌಲ್ಯ 10,98,903 ಆಗಿದೆ.

ಇದನ್ನು ಓದಿ: ಸಂಸತ್ ಬಜೆಟ್ ಅಧಿವೇಶನ ಆರಂಭ : ರಾಷ್ಟ್ರಪತಿ ಭಾಷಣ ಬಹಿಷ್ಕರಿಸಿದ ವಿಪಕ್ಷಗಳು

ಪ್ರತಿ ಸಂಸದ ಹಾಗೂ ಶಾಸಕರಿಗೆ ಮತಮೌಲ್ಯವಿರಲಿದೆ. ರಾಜ್ಯ ವಿಧಾನಮಂಡಲದ ಒಬ್ಬ ಶಾಸಕ, ಅವನು/ಅವಳು ಪ್ರತಿನಿಧಿಸುವ ರಾಜ್ಯದ ಜನಸಂಖ್ಯೆಯನ್ನು (1971 ರ ಜನಗಣತಿಯ ಆಧಾರದ ಮೇಲೆ) ಒಳಗೊಂಡಿರುವ ಸೂತ್ರದಿಂದ ಈ ಮೌಲ್ಯವನ್ನು ನಿರ್ಧರಿಸಲಾಗುತ್ತದೆ. ಆದ್ದರಿಂದ, ಮತ ಮೌಲ್ಯವು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ.

ರಾಷ್ಟ್ರಪತಿ ಚುನಾವಣೆಗೆ ನಾಮನಿರ್ದೇಶನಗಳು ಸಲ್ಲಿಕೆಯಾದ ನಂತರ ಶಾಸಕರುಗಳು ಅವರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತ್ತು ಸಂಸದರು ಸಂಸತ್ತಿನಲ್ಲಿ ತಮ್ಮ ಮತ ಚಲಾಯಿಸಲು ಮತದಾನ ಪ್ರಕ್ರಿಯೆ ನಡೆಯಲಿದೆ. ಸಂಸದರಿಗೆ ಹಸಿರು ಮತ್ತು ಶಾಸಕರಿಗೆ ಗುಲಾಬಿ ಬಣ್ಣದ ಮತಪತ್ರ ನೀಡಲಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *