ಕಲಬುರಗಿ: ನ್ಯಾಯಾಧೀಶರ ಮುಂದೆ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ವಿಚಾರವಾಗಿ ಸಂತ್ರಸ್ತೆಯೋರ್ವರು ನೀಡಿದ ರಹಸಸ್ಯ ವಿಚಾರ “ಗನ್ ಪಾಯಿಂಟ್” ಹೇಳಿಕೆ ವಿಚಾರ ನ್ಯಾಯಾಲಯದಿಂದ ಹೊರಬಿದ್ದು ಮಾಧ್ಯಮಗಳ ಮುಂದೆ ಹೇಗೆ ಬಂದಿತು ಎಂದು ಪ್ರಜ್ವಲ್ ರೇವಣ್ಣ ಚಿಕ್ಕಪ್ಪನೂ ಆಗಿರುವ ಎನ್ಡಿಎ ಒಕ್ಕೂಟದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಹೆಚ್ಡಿಕೆ, ಸರ್ಕಾರವೇ ಈ ರೀತಿ ಸಂತ್ರಸ್ತೆಯರ ಗೌಪ್ಯ ವಿಚಾರಗಳನ್ನು ಬಹಿರಂಗಗೊಳಿಸಿದರೆ ತನಿಖೆ ಯಾವ ಮಟ್ಟದಲ್ಲಿ ಹೇಗೆ ನಡೆಯಬಹುದು?ಅದು ಎಲ್ಲಿಗೆ ಹೋಗಬಹುದು? ಖಾಸಗಿ ಗೌಪ್ಯ ವಿಚಾರಗಳನ್ನು ಬಹಿರಂಗಗೊಳಿಸಿದರೆ, ಸತ್ಯಾಂಶ ಹೊರಗೆ ಬರುತ್ತದೆಯೇ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಎಸ್ಐಟಿ ತನಿಖೆಯ ನೆಪದಲ್ಲಿ ಸರ್ಕಾರಕ್ಕೆ ಪ್ರಚಾರ ಬೇಕೇ ವಿನ: ಸಂತ್ರಸ್ತೆಯರಿಗೆ ನ್ಯಾಯ ಕೊಡಿಸುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದರು.
ಇದನ್ನೂ ನೋಡಿ: ಪೆನ್ಡ್ರೈವ್ ಪ್ರಕರಣ :ವಿಡಿಯೋ ಬಹಿರಂಗಗೊಳಿಸಿದವರನ್ನು ಕೂಡಲೇ ಬಂಧಿಸಿ, ಸಂತ್ರಸ್ತರನ್ನು ರಕ್ಷಿಸಿ – ಸಿಐಟಿಯು ಆಗ್ರಹ