ಕೊಪ್ಪಳ| ಮಳೆಯಿಂದ ಮನೆ ಗೋಡೆ ಕುಸಿತ; ವ್ಯಕ್ತಿ ಸಾವು

ಕೊಪ್ಪಳ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುತ್ತಿದ್ದು, ಏಪ್ರಿಲ್‌ 16 ಬುಶವಾರ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿ ಕೆಲಕಾಲ ವಾಹನ ಸವಾರರು ಪರದಾಟ ನಡೆಸಿದ್ದ ಘಟನೆ ನಡೆದಿತ್ತು.

ಇದೀಗ ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಘೋರ ಘಟನೆ ಒಂದು ನಡೆದಿದ್ದು ಮಳೆಯಿಂದಾಗಿ ಮನೆ ಗೋಡೆ ಕುಸಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೋಷ್ಟಗಿ ತಾಲೂಕಿನ ನಂದಿಹಾಳ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಬೆಂಗಳೂರು| ಒಂದು ವರ್ಷದಲ್ಲಿ 623 ನಕಲಿ ವೈದ್ಯರು ಪತ್ತೆ

ನಂದಿಹಾಳದಲ್ಲಿ ಮಳೆಗೆ ಮನೆ ಗೋಡೆ ಕುಸಿದು ವ್ಯಕ್ತಿ ಸಾವನ್ನಪ್ಪಿದ್ದಾರೆ. ನಂದಿಹಾಳ ಗ್ರಾಮದ ಶರಣಪ್ಪ ಭಾವಿಕಟ್ಟಿ (38) ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಕುಷ್ಟಗಿ ತಹಸೀಲ್ದಾರ್ ಮತ್ತು ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ನೋಡಿ: ಅಂಬೇಡ್ಕರ್‌ ಹಬ್ಬ ನೇರಪ್ರಸಾರ ಸ್ಪೂರ್ತಿಧಾಮ

Donate Janashakthi Media

Leave a Reply

Your email address will not be published. Required fields are marked *