ಗಜೇಂದ್ರಗಡ  |ಹಾಸ್ಟೆಲ್‌ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಎಸ್‌ ಎಫ್‌ ಐ ಪ್ರತಿಭಟನೆ

ಗಜೇಂದ್ರಗಡ  :  ತಾಲೂಕಿನ ಮುಶಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಡಿ ದೇವರಾಜ ಅರಸು ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಸುಮಾರು 75 ಜನ ವಿದ್ಯಾರ್ಥಿಗಳ ಸಂಖ್ಯಾಬಲವಿದ್ದು ವಸತಿ ನಿಲಯದಲ್ಲಿ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ವಿದ್ಯಾರ್ಥಿ ಸಂಘಟನೆಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಶ್ರೀ ಎಮ್ ಎಮ್ ತುಂಬರಮಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್ ಎಫ್ ಐ ಜಿಲ್ಲಾಧ್ಯಕ್ಷ ಚಂದ್ರು ರಾಠೋಡ   ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ಶೈಕ್ಷಣಿಕವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಸತಿ ನಿಲಯಗಳನ್ನು ಪ್ರಾರಂಭಿಸಲಾಗಿದೆ ಆದರೆ ಇಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ, ಕಾಟ್ ಬೇಡ್, ಕೊಠಡಿ ಸೋರಿಕೆ, ಪೆನ್ನು ಪುಸ್ತಕ, ಶೂ ಸಾಕ್ಸ್, ಶೌಚಾಲಯ ಇಲ್ಲದೆ ಇರುವುದು ಖೇದಕರ. ಇವೇಲವೂ ಕೂಡ ವಿದ್ಯಾರ್ಥಿಗಳ ಮೂಲಭೂತ ಸೌಕರ್ಯಗಳು ಇದನ್ನು ಅಧಿಕಾರಿಗಳು ಕಲ್ಪಿಸದೆ ಕೇವಲ ಹಣ ಲೂಟಿ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ವಸತಿ ನಿಲಯ ಸೋರಿಕೆಯಾಗಿ ಸುಮಾರು ವರ್ಷಗಳಾದರೂ ವಸತಿ ನಿಲಯದ ಕಡೆ   ಬರದೆ ನಿರ್ಲಕ್ಷ ತೋರಿದ ಅಧಿಕಾರಿಗಳ ವಿರುಧ್ದ ಆರೋಪಿಸಿದರು.

ಇದನ್ನೂ ಓದಿ: ಯಾದಗಿರಿ | ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ವಿದ್ಯಾರ್ಥಿಗಳ ಶಾಲೆ ಪ್ರಾರಂಭವಾಗಿ ಸುಮಾರು ಮೂರು ತಿಂಗಳು ಕಾಲ ಗತಿಸಿದ ವಿದ್ಯಾರ್ಥಿಗಳಿಗೆ ಪೇನ್ನು ಪುಸ್ತಕ ಕೋಟ್ಟಿಲ್ಲ ಸರಿಯಾದ ದಿನ ಬಳಕೆಗೆ ನೀರು ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಆದಷ್ಟು ಬೇಗ ಜಿಲ್ಲೆಯಲ್ಲಿ ಇತರಹದ ಸಾಕಷ್ಟು ವಸತಿ ನಿಲಯಗಳು ದುರಸ್ತಿ ಹಂತದಲ್ಲಿದೆ ಅವುಗಳನ್ನು ಪರಿಶೀಲಿಸಿ ದುರಸ್ತಿಗೊಳಿಸಬೇಕು, ವಿದ್ಯಾರ್ಥಿಗಳ ಸಂಖ್ಯೆಗಳ ಅನುಗುಣವಾಗಿ ಹಾಗೂ ಹಾಸ್ಟೆಲ್ ಬಯಸಿ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ವಸತಿ ನಿಲಯ ಕಲ್ಪಿಸಬೇಕು. ಎಲ್ಲಾ ಸಮಸ್ಯೆಗಳನ್ನೂ ಮಾನ್ಯ ಅಧಿಕಾರಿಗಳು ಒಂದು ವಾರದಲ್ಲಿ ಸರಿಪಡಿಸಲು ಮುಂದಾಗಬೇಕೆಂದು ಆಗ್ರಹಿಸಿದರು.

ಗಜೇಂದ್ರಗಡ  |ಹಾಸ್ಟೆಲ್‌ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಎಸ್‌ ಎಫ್‌ ಐ ಪ್ರತಿಭಟನೆ

ತಾಲೂಕ ಅಧ್ಯಕ್ಷರಾದ ಅನಿಲ್ ಆರ್ ಮಾತನಾಡಿ ತಾಲೂಕಿನಲ್ಲಿ ಇಂತಹ ಸಾಕಷ್ಟು ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳ ಕೋರತೆಯಿಂದ ಹಾಸ್ಟೆಲ್ ಗಳು ನರಳುತ್ತಿವೆ ಆದಷ್ಟು ಬೇಗ ಎಲ್ಲಾ ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಬಿಸಿಎಂ ಇಲಾಖೆಯ ಜಿಲ್ಲಾಧಿಕಾರಿ ಎಮ್ ಎಮ್ ತುಂಬರಮಟ್ಟಿ ಸಮಸ್ಯೆ ಗಮನಕ್ಕೆ ಬಂದಿಲ್ಲ ಮುಂದಿನ ದಿನಗಳಲ್ಲಿ ಸರಿಪಡಿಸುತ್ತೆವೆ ಎಂದು ಹಾರಿಕೆ ಉತ್ತರ ಕೊಟ್ಟು ಅಲ್ಲಿಂದ ಹೊರಟರು.

ಅದಕ್ಕೆ ಪ್ರತಿಕ್ರಿಯೆಯಾಗಿ ಸಂಘಟನೆ ಮುಖಂಡರು ಇತರಹ ಅನವಶ್ಯಕ ಸಬೂಬು ಉತ್ತರಗಳನ್ನು ಕೊಡಬೇಡಿ , ವಿದ್ಯಾರ್ಥಿಗಳ ಜೀವಕೆ ಹೆಚ್ಚು ಕಡಿಮೆ ಆದರೆ ನೇರವಾಗಿ ನೀವೇ ಹೋಣೆಗಾರರೂ ಆಗುತಿರಾ ಅಂತ ಹೇಳಿ ಮುಂದಿನ ಒಂದು ವಾರದಲ್ಲಿ ಸರಿಪಡಿಸಲು ಮುಂದಾಗದೆ ಇದ್ದರೆ ತೀವ್ರ ಸ್ವರೂಪದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಹಲವು ಹಕ್ಕೋತಾಯಗಳೊಂದಿಗೆ  ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ದಿನಬಳಕೆಗೆ ನೀರನ್ನು ಕಲ್ಪಿಸಿಕೊಡಬೇಕು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕಾಟ, ಬೆಡ್, ಹಾಸಿಗೆ ಹೊದಿಕೆಗಳನ್ನು ನೀಡಬೇಕು, ಕೊಠಡಿ ಸೋರಿಕೆಗಳನ್ನು ತಡೆಯಬೇಕು, ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯದ ಹೊಸ ಕಟ್ಟಡವನ್ನು ಪ್ರಾರಂಭ ಮಾಡಬೇಕು, ವಿದ್ಯಾರ್ಥಿಗಳಿಗೆ ಶೂ ಸಾಕ್ಸ್ ಪಠ್ಯಪುಸ್ತಕ ಹಾಗೂ ಆಟದ ಸಾಮಗ್ರಿಗಳನ್ನು ನೀಡಬೇಕು, ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ವಸತಿ ನಿಲಯವನ್ನು ಕಲ್ಪಿಸಿ ಕೊಡಬೇಕು, ಜಿಲ್ಲೆಯಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ಹೊಸ ಹಾಸ್ಟೆಲ್ ಗಳನ್ನು ಪ್ರಾರಂಭಿಸಬೇಕು, ವಸತಿ ನಿಲಯಗಳಲ್ಲಿ ಖಾಲಿ ಇರುವ ಮೇಲ್ವಿಚಾರಕರು ವಾರ್ಡನ್ ಗಳು ಹಾಗೂ ಇತರೆ ಸಿಬ್ಬಂದಿಗಳನ್ನು ಭರ್ತಿ ಮಾಡಿಕೊಳ್ಳಬೇಕು, ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯ ಮುಸಿಗೇರಿ ಇಂಜಿನಿಯರ್ ಪರಿಶೀಲನೆ ಮಾಡಿ ಕಟ್ಟಡದ ಫಿಟ್ಟೆಸ್ ರಿಪೋರ್ಟನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಸ್ ಎಫ್ ಐ ಮುಖಂಡರಾದ ಅಭೀಲಾಷ ಆರ್, ತಾಲೂಕು ಅಧಿಕಾರಿಗಳಾದ ಎಮ್ ಎಮ್ ಹಣಸಿ, ನಿಲಯಪಾಲಕರಾದ ಮಹಾಂತೇಶ ಗೋಡಿ, ವಿದ್ಯಾರ್ಥಿಗಳಾದ ಆದರ್ಶ, ಸಂದಿಪ,ಹುಚ್ಚಿರಪ್ಪ ಕುಂಬಾರ, ಪ್ರಜ್ವಲ್, ಸಂತೋಷ್, ವೀರೇಶ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇದನ್ನೂ ನೋಡಿ: ಧರ್ಮಸ್ಥಳ | ಪಂಚಾಯಿತಿಯಲ್ಲಿ ದಾಖಲೆಗಳನ್ನು ಸುಟ್ಟು ಹಾಕಿರಬಹುದು. ಆದರೆ ನ್ಯಾಯಾಲಯದಲ್ಲಿ ದಾಖಲೆಗಳು ಇವೆ – ಜಯನ್

Donate Janashakthi Media

Leave a Reply

Your email address will not be published. Required fields are marked *