21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹುಕ್ಕಾ ಬಾರ್‌ ಮತ್ತು ಸಿಗರೇಟ್ ಮಾರಾಟ ನಿಷೇಧದ ಮಸೂದೆ ಅಂಗೀಕಾರ

ಬೆಂಗಳೂರು: ರಾಜ್ಯಾದ್ಯಂತ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹುಕ್ಕಾ ಬಾರ್‌ಗಳು, ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸುವ ಮಸೂದೆಯನ್ನು ಕರ್ನಾಟಕ ವಿಧಾನಸಭೆ ಬುಧವಾರ ಸರ್ವಾನುಮತದಿಂದ ಅಂಗೀಕರಿಸಿದೆ. ಈ ಹಿಂದೆ 18 ವರ್ಷಗಳ ಕೆಳಗಿನ ವಯಸ್ಸಿನವರಿಗೆ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿತ್ತು. ಹೊಸ ಮಸೂದೆಯು ಈ ವಯಸ್ಸನ್ನು 21 ಏರಿಸಿದೆ.

“ರಾಜ್ಯ ಸರ್ಕಾರವು ಈಗಾಗಲೇ ಹುಕ್ಕಾ ಬಾರ್‌ಗಳನ್ನು ನಿಷೇಧಿಸಲು ಅಧಿಸೂಚನೆಯನ್ನು ಹೊರಡಿಸಿದೆ. ಆದರೆ ಅದರ ವಿರುದ್ಧ ಕೆಲವರು ನ್ಯಾಯಾಲಯದ ಮಟ್ಟಿಲನ್ನು ಏರಿದ್ದರು… ಆದರೆ ನ್ಯಾಯಾಲಯವು ಯಾವುದೇ ತಡೆಯಾಜ್ಞೆ ನೀಡಲಿಲ್ಲ,” ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಇದನ್ನೂ ಓದಿ: ಲೋಕಸಭೆಗೆ ಇಂಡಿಯಾ ಮೈತ್ರಿ | ದೆಹಲಿ ಮಾತುಕತೆ ಫಲಪ್ರದ; ಎಎಪಿಗೆ 4, ಕಾಂಗ್ರೆಸ್‌ಗೆ 3

ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳು (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ನಿಯಂತ್ರಣ, ಉತ್ಪಾದನೆ, ಸರಬರಾಜು ಮತ್ತು ವಿತರಣೆ) ಕಾಯಿದೆ-2003 (2003 ರ ಕೇಂದ್ರ ಕಾಯಿದೆ 34) ಕರ್ನಾಟಕಕ್ಕೆ ಅದರ ಅನ್ವಯದಲ್ಲಿ ತಿದ್ದುಪಡಿ ಮಾಡಿ ಅಂಗೀಕರಿಸಲಾಗಿದೆ. ಇದು ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆಯನ್ನು ನಿಷೇಧಿಸುತ್ತದೆ ಮತ್ತು ತಿನಿಸುಗಳು ಅಥವಾ ರೆಸ್ಟೋರೆಂಟ್‌ಗಳಲ್ಲಿ ಹುಕ್ಕಾ ಬಾರ್‌ಗಳನ್ನು ತೆರೆಯಲು ಅಥವಾ ನಡೆಸುವುದನ್ನು ನಿಷೇಧಿಸುತ್ತದೆ.

ಹೊಸ ಕಾನೂನಿನ ಅಡಿಯಲ್ಲಿ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿಗೆ ಮತ್ತು ಯಾವುದೇ ಶಿಕ್ಷಣ ಸಂಸ್ಥೆಯ 100 ಮೀಟರ್ ವ್ಯಾಪ್ತಿಯಲ್ಲಿರುವ ಯಾವುದೇ ವ್ಯಕ್ತಿಗೆ ಚಿಲ್ಲರೆಯಾಗಿ ಅಥವಾ ಫ್ಯಾಕೆಟ್‌ಗಳಲ್ಲಿ ಸಿಗರೇಟ್ ಅಥವಾ ಇತರ ಯಾವುದೇ ತಂಬಾಕು ಉತ್ಪನ್ನಗಳನ್ನು ನೀಡಲು ಅಥವಾ ಮಾರಾಟ ಮಾಡಲು ಅನುಮತಿಸುವುದಿಲ್ಲ.

ಈ ಅಪರಾಧವು ಜಾಮೀನು ಪಡೆಯಬಹುದಾದ ಅಪರಾಧವಾಗಿದ್ದರೂ, ಒಂದು ವರ್ಷಕ್ಕಿಂತ ಕಡಿಮೆಯಿಲ್ಲದ ಆದರೆ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯೊಂದಿಗೆ ರೂ 50,000 ಕ್ಕಿಂತ ಕಡಿಮೆಯಿಲ್ಲದ ರೂ 1 ಲಕ್ಷದವರೆಗೆ ವಿಸ್ತರಿಸಬಹುದಾದ ದಂಡದೊಂದಿಗೆ ಶಿಕ್ಷೆಗೆ ಅರ್ಹವಾಗಿದೆ. ನಿಗದಿತ 100 ಮೀಟರ್ ಒಳಗೆ ಸಿಗರೇಟ್ ಮಾರಾಟ ಮಾಡಿದರೆ ದಂಡವನ್ನು 200 ರೂ.ನಿಂದ 1,000 ರೂ.ಗೆ ಹೆಚ್ಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ರಷ್ಯಾ – ಉಕ್ರೇನ್ ಯುದ್ಧ ಭೂಮಿಯಲ್ಲಿ ಗುಜರಾತ್, ಕರ್ನಾಟಕ & ಯುಪಿಯ ಯುವಕರು; ಸರ್ಕಾರದ ಮಧ್ಯಪ್ರವೇಶಕ್ಕೆ ಓವೈಸಿ ಪತ್ರ

ಆದರೆ 30 ಕೊಠಡಿಗಳನ್ನು ಹೊಂದಿರುವ ಹೋಟೆಲ್ ಅಥವಾ 30 ವ್ಯಕ್ತಿಗಳು ಅಥವಾ ಅದಕ್ಕಿಂತ ಹೆಚ್ಚಿನ ಆಸನ ಸಾಮರ್ಥ್ಯವನ್ನು ಹೊಂದಿರುವ ರೆಸ್ಟೋರೆಂಟ್ ಮತ್ತು ವಿಮಾನ ನಿಲ್ದಾಣಗಳಲ್ಲಿ ಧೂಮಪಾನಕ್ಕಾಗಿ ಪ್ರತ್ಯೇಕ ಸ್ಥಳಗಳನ್ನು ಒದಗಿಸಬಹುದಾಗಿದೆ.

ಹುಕ್ಕಾ ಬಾರ್‌ಗಳನ್ನು ನಿಷೇಧಿಸುವುದು ಯುವಕರು ಅಪಾಯಕಾರಿ ವ್ಯಸನಕ್ಕೆ ಬಲಿಯಾಗದಂತೆ ರಕ್ಷಿಸುತ್ತದೆ ಎಂದು ಹೇಳಿದ ಬಿಜೆಪಿಯ ಹಿರಿಯ ಶಾಸಕ ಎಸ್. ಸುರೇಶ್ ಕುಮಾರ್ ಅವರು ಆರೋಗ್ಯ ಸಚಿವ ಗುಂಡೂರಾವ್ ಅವರಿಗೆ “ವಿಶೇಷ ಧನ್ಯವಾದ” ಸಲ್ಲಿಸಿದ್ದಾರೆ. ಅದಾಗ್ಯೂ, ವಿಮಾನ ನಿಲ್ದಾಣಗಳಂತಹ ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವವರಿಗೆ ಪ್ರತ್ಯೇಕ ಆವರಣಗಳನ್ನು ಅನುಮತಿಸುವ ನಿರ್ಧಾರವನ್ನು ಅವರು ಟೀಕಿಸಿದ್ದಾರೆ.

ವಿಧೇಯಕವನ್ನು ಸ್ವಾಗತಿಸಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಶಾಲಾ-ಕಾಲೇಜುಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಮಾರಾಟಕ್ಕೆ ಕಾಯ್ದೆಯು 10,000 ರೂ.ಗಳ ದಂಡವನ್ನು ವಿಧಿಸಬೇಕು ಎಂದು ಸಲಹೆ ನೀಡಿದ್ದಾರೆ.

ವಿಡಿಯೊ ನೋಡಿ: ರಾಮನಿಗೆ ಭವ್ಯ ಮಂದಿರ, ಶ್ರಮಿಕರಿಗೆ ಟೆಂಟ್ – ನಾಗೇಶ ಹೆಗಡೆ ವಿಶ್ಲೇಷಣೆ Janashakthi Media

Donate Janashakthi Media

Leave a Reply

Your email address will not be published. Required fields are marked *