ಬೆಂಗಳೂರು : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ಅಂದರೆ ಮತದಾನದಂದು ( ಮೇ 10) ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ರಜೆ ನೀಡುವಂತೆ ಭಾರತೀಯ ಚುನಾವಣೆ ಆಯೋಗ ಸೂಚಿಸಿದೆ.
ಅಲ್ಲದೇ ಅಂದು ಈ ಎರಡು ವಲಯಗಳ ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡಬೇಕು ಎಂದು ಮುಖ್ಯ ಕಾರ್ಯದರ್ಶಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.ಗೋಕರ್ಣದ ಸಣ್ಣ ಬಿಜ್ಜೂರಿನ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ ಚುನಾವಣೆ ಆಯೋಗ ಹೊರಡಿಸಿರುವ ಪತ್ರದಲ್ಲಿ, ಉದ್ಯೋಗಿಗಳಿಗೆ ರಜೆ ನೀಡುವ ನಿಟ್ಟಿನಲ್ಲಿ ಪ್ರಜಾಪ್ರತಿನಿಧಿ ಕಾಯಿದೆ 1951 ಸೆಕ್ಷನ್ 135ಬಿ ಅನ್ನು ಉಲ್ಲೇಖಿಸಿದೆ.
ಇದರಡಿ ಉದ್ಯೋಗಿಗಳು ಮತದಾನ ದಿನದಂದು ರಜೆಗೆ ಅರ್ಹರಾಗಿರುತ್ತಾರೆ. ಕಾಯಿದೆ ನಿಯಮದ ಪ್ರಕಾರ ಮತದಾನದ ದಿನ ಮೇ 10ರಂದು ಖಾಸಗಿ ಮತ್ತು ಸರ್ಕಾರಿ ನೌಕರರಿಗೆ ವೇತನ ಸಹಿತ ರಜೆ ನೀಡಬೇಕೆಂದು ಆಯೋಗ ತಿಳಿಸಿದೆ.
ಸಾರ್ವತ್ರಿಕ ರಜೆ ಘೋಷಿಸಲು ನಿರ್ದೇಶನ ಕೇಂದ್ರ ಹಾಗೂ ರಾಜ್ಯದ ಎಲ್ಲಾ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸ್ವಾಮ್ಯಕ್ಕೆ ಒಳಪಟ್ಟ ಸಂಸ್ಥೆಗಳಿಗೆ, ಸರ್ಕಾರಿ ಹಾಗೂ ಖಾಸಗಿ, ಅನುದಾನಿತ, ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ, ಔಧ್ಯಮಿಕ ಸಂಸ್ಥೆಗಳ ಹಾಗೂ ಇನ್ನಿತರ ಸಂಸ್ಥೆಗಳಿಗೆ ಮೇ.10ರಂದು ಸಾರ್ವತ್ರಿಕ ರಜೆ ಘೋಷಿಸುವಂತೆ ನಿರ್ದೇಶಿಸಿದೆ.
ಇದನ್ನೂ ಓದಿ : ಕರ್ನಾಟಕ ವಿಧಾನಸಭೆ : ಮೇ 10 ಕ್ಕೆ ಚುನಾವಣೆ, 13 ಕ್ಕೆ ಫಲಿತಾಂಶ – ಚುರುಕುಗೊಂಡ ಪ್ರಕ್ರಿಯೆ
ಕಾಯಿದೆಯಡಿ ತಿಳಿಸಲಾದ ನಿಬಂಧನೆಗಳನ್ನು ಒಂದು ವೇಳೆ ಉಲ್ಲಂಘಿಸಿದರೆ ಮತದಾನದ ದಿನ ಉದ್ಯೋಗಿಗಳಿಗೆ ರಜೆ ನೀಡದೆ ಹೋದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಆಯೋಗ ಹೇಳಿದೆ.
ಈ ಮೂಲಕ ಎಲ್ಲ ಮತದಾರರನ್ನು ಅಂದು ಸಾರ್ವತ್ರಿಕ ಮತದಾನದಲ್ಲಿ ಪಾಳ್ಗೊಳ್ಳುವಂತೆ ಉತ್ತೇಜಿಸಬೇಕು ಎಂದು ಆಯೋಗ ಕೋರಿದೆ.