ಉತ್ತರಾಖಂಡ ಫೆ.08 : ಉತ್ತರಾಖಂಡದಲ್ಲಿ ಭಾನುವಾರ ಸಂಭವಿಸಿದ ಹಿಮನದಿ ದುರಂತದ ನಂತರ ಕೇಂದ್ರದ ವಿಪತ್ತು ನಿರ್ವಹಣಾ ಪಡೆಗಳಾದ ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್, ಭೊಸೇನಾ ಮತ್ತು ವಾಯು ಸೇನಾ ಸಿಬ್ಬಂದಿಗಳು ರಕ್ಷಣಾ ಕಾರ್ಯಾದಲ್ಲಿ ತೊಡಗಿವೆ.
ಹೈಡ್ರೊ ಎಲೆಕ್ಟ್ರಿಕ್ ಪವರ್ ಪ್ಲಾನೆಟ್‌ನಲ್ಲಿ ಕೆಲಸ ಮಾಡುತ್ತಿದ 148 ಕಾರ್ಮಿಕರು ಸೇರಿ ರಿಷಿಗಂಗದಲ್ಲಿ 22 ಜನರು ಕಾಣೆಯಾಗಿದ್ದಾರೆ. ಇನ್ನೂ 30 ಮಂದಿ ಸುರಂಗದಲ್ಲಿ ಸಿಲುಕಿಕೊಂಡಿದ್ದಾರೆ. ಈ ಘಟನೆ ನಡೆದ ಬಳಿಕ ಜೋಷಿಮಠ ಪ್ರದೇಶದ ಸುತ್ತಮುತ್ತಲಿನ 13 ಹಳ್ಳಿಗಳಿಗೆ ಸಂಪರ್ಕ ಕಡಿತವಾಗಿದೆ. ಇದರಿಂದ ಅಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ, ಪ್ರವಾಹದಿಂದಾಗಿ ರಕ್ಷಣಾ ಕಾರ್ಯಕ್ಕೂ ತೊಂದರೆಯಾಗಿದೆ ಎಂದು ರಕ್ಷಣಾ ಸಿಬ್ಬಂದಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ : ಉತ್ತರಾಖಂಡ ಹಿಮಪ್ರವಾಹ : 150 ಕ್ಕೂ ಹೆಚ್ಚು ಮಂದಿ ನಾಪತ್ತೆ
ಹಿಮನದಿ ಸ್ಟೋಟದ ಬಳಿಕ ಸ್ನೋ ಆಡ್ ಅವಲಾಂಚೆ ಸ್ಟಡಿ ಸ್ಥಾಪನೆ (ಎಸ್.ಎ.ಎಸ್.ಹಿ) ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ (ಡಿ.ಆರ್.ಡಿ.ಒ) ವಿಜ್ಞಾನಿಗಳು ಉತ್ತರಾಖಂಡ ಜೋಷಿಮಠ ಪ್ರದೇಶದಲ್ಲಿ ಘಟನೆಯ ಬಗ್ಗೆ ಅಧ್ಯಯನ ನಡೆಸಲು ಮುಂದಾಗಿದ್ದಾರೆ ಎಂದು ಕೇಂದ್ರ ಗೃಹ ಕಚೇರಿ ಹೇಳಿದೆ.
ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವಾ ಚೊಮೊಲಿ ಜಿಲ್ಲೆಗೆ ಭೇಟಿ ನೀಡಿ ಘಟನೆಯಲ್ಲಿ ಮೃತಪಟ್ಟವರಿಗೆ 4 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಅಲ್ಲದೇ ಪ್ರಧಾನಿಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ 2 ಲಕ್ಷ ರೂ, ಗಾಯಗೊಂಡವರಿಗೆ 50 ಸಾವಿರ ರೂ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಈ ಹಿಂದೆ 2013ರಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ 6000 ಮಂದಿ ಸಾವನ್ನಪ್ಪಿದ್ದರು, ಇದಾದ ಬಳಿಕ ಜನರಲ್ಲಿ ಭಯದ ವಾತಾವರಣ ಉಂಟಾಯಿತ್ತು ಇದರಿಂದ ಅಲ್ಲಿನ ಅಭಿವೃದ್ಧಿಗೆ ಸರ್ಕಾರ ಈ ಹಿಂದೆಯೇ ಯೋಚಿಸುತ್ತಿತ್ತು ಎಂದು ಹೇಳಿದ್ದಾರೆ.