ರಾಷ್ಟ್ರೀಯ ಹೆದ್ದಾರಿ ಕಾಮಗಾರಿವೇಳೆ ಗುಡ್ಡ ಕುಸಿತ; ಓರ್ವ ಕಾರ್ಮಿಕ ಸಾವು

ಕಾಸರಗೋಡು: ಮೇ 12 ಸೋಮವಾರ ಮಧ್ಯಾಹ್ನ ಚೆರ್ವತ್ತೂರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ತದು ಓರ್ವ ಕಾರ್ಮಿಕ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ  ನಡೆದಿದೆ.

ಓರ್ವ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಚೆರ್ವತ್ತೂರು ಮಟ್ಟಲಾಯಿ ಎಂಬಲ್ಲಿ ರಸ್ತೆ ಅಭಿವೃದ್ಧಿಗಾಗಿ ಕೆಲಸ ನಿರ್ವ ಹಿಸುತ್ತಿದ್ದಾಗ ಗುಡ್ಡ ಜರಿದು ಈ ಘಟನೆ ನಡೆದಿದೆ. ಮೃತಪಟ್ಟವರನ್ನು ಪಶ್ಚಿಮ ಬಂಗಾಳ ದ ಮುಮ್ತಾಜ್ ಮೀರ್ (18) ಎಂದು ಗುರುತಿಸಲಾಗಿದೆ.

ಜೊತೆಗಿದ್ದ ಮುನಾಲ್ ಲಸ್ಕರ್ (55) ಮತ್ತು ಮೆಹಾನ್ ತೇಜರ್ (18) ಗಾಯಗೊಂಡಿದ್ದು, ಚೆ ರ್ವ ತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹವನ್ನು ಕಣ್ಣೂರು ಸರಕಾರಿ ಆಸ್ಪತ್ರೆ ಶವಾಗಾರ ದಲ್ಲಿರಿಸಲಾಗಿದೆ.

ಇದನ್ನೂ ಓದಿ: ಮಾತುಗಾರಿಕೆ ಸಂಸತ್ತಿನಲ್ಲಿ ವಿಷಯವಾರು ಚರ್ಚೆಗೆ ಬದಲಿಯಾಗುವುದು ಸಾಧ್ಯವಿಲ್ಲ- ಎಂ.ಎ.ಬೇಬಿ

ಅಗ್ನಿಶಾಮಕ ದಳದ ಸಿಬ್ಬಂದಿಗಳು, ಪೊಲೀಸರು ಹರಸಾಹಸ ಪಟ್ಟು ಗಂಟೆಗಳ ಬಳಿಕ ಮೂವರನ್ನು ಹೊರತೆಗೆಯಲಾಯಿತಾದರೂ ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿ ದ್ದನು.

ಘಟನೆ ನಡೆಯುವ ಸಂದರ್ಭದಲ್ಲಿ ಹಲವಾರು ಕಾರ್ಮಿಕರು ಸ್ಥಳದಲ್ಲಿ ಇದ್ದರು. ಆದರೆ ಸ್ವಲ್ಪದರಲ್ಲೇ ಇವರು ಅಪಾಯದಿಂದ ಪಾರಾಗಿದ್ದಾರೆ. ಮೃತದೇಹವನ್ನು ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆ ಶವಾಗಾರದಲ್ಲ ರಿಸಲಾಗಿದೆ

ಘಟನೆ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎ. ಕೆ ಶಶೀಂ ದ್ರನ್ ಪೊಲೀಸರಿಗೆ ಆದೇಶ ನೀಡಿದ್ದು, ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.ಜಿಲ್ಲಾಧಿಕಾರಿ ಕೆ. ಇಂಪಾಶೇಖರ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನಾ ನಿರ್ದೇಶಕ ಉಮೇಶ್ ಘರ್ ಸ್ಥಳಕ್ಕೆ ಭೇಟಿ ನೀಡಿ ಅವಲೋಕನಾ ನಡೆಸಿದ್ದಾರೆ.

ಇದನ್ನೂ ನೋಡಿ: ವಕ್ಪ್ ತಿದ್ದುಪಡಿ ಮಸೂದೆ – 2025 | ಒಂದು ಅವಲೋಕನ Janashakthi Media

Donate Janashakthi Media

Leave a Reply

Your email address will not be published. Required fields are marked *