ಹಾಸನ: ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಏಕೆಂದರೆ ಶತಮಾನಗಳಿಂದ ಶೋಷಣೆಗೆ ಒಳ ಪಟ್ಟು ಮಹಿಳಾ ಸಮುದಾಯ ಇಂದಿಗೂ ಅದೆ ಸಮಸ್ಯೆ ಎದುರಿಸುತ್ತಿದೆ, ಸಾವಿತ್ರಿಬಾಪುಲೆ ರವರು ಮಹಿಳಾ ಶಿಕ್ಷಣಕ್ಕೆ ಒತ್ತು ಕೊಟ್ಟಷ್ಟು ಯಾರು ಕೊಟಿಟರುವುದಿಲ್ಲ, ನೂರಾರು ವರ್ಷಗಳ ಹಿಂದೆಯೆ ಅವರು ಈ ವೈದಿಕಶಾಹಿ ಪರಂಪರೆ ಮಹಿಳೆಯನ್ನು ಅಸೃಷ್ಯಳಾಗಿ ನೋಡುವಪದ್ದತಿಗಳ ವಿರುದ್ಧ ಹೋರಾಟ ಮಾಡಿ ಬಂದ ಕಾರಂ ಇಂದು ಮಹಿಳೆಯರಿಗೆ ಸಮಾನವಾದ ಶಿಕ್ಷಣ ಸಿಗುತ್ತಿದೆ ಎಂದು ಪ್ರಾಸ್ಥಾವಿಕವಾಗಿ ಮಾತನಾಡಿದ ಎಸ್.ಎಫ್.ಐ ನ ಜಿಲ್ಲಾ ಕಾರ್ಯದರ್ಶಿ ರಮೇಶ್ ಹಾಸನ್, ಹೇಳಿದ್ದಾರೆ.
ಹೊಳೆನರಸಿಪುರು ತಾಲ್ಲೂಕಿನ ಪೋಸ್ಟ್ ಮೆಟ್ರಿಕ್ ಹಾಸೆಲ್ ನಲ್ಲಿ ಸಾವಿತ್ರಿ ಬಾಯಿಪುಲೆ ರವರ ಜನ್ಮ ದಿನದ ಅಂಗವಾಗಿ ಎಸ್.ಎಫ್.ಐ ಸಂಘಟನೆಯ ವತಿಯಿಂದ ವಿಚಾರ ಸಂಕೀರ್ಣವನ್ನು ಹಮ್ಮಿಕೊಳ್ಳಲಾಗಿತ್ತು.
ಸಾವಿತ್ರಿ ಬಾಯಿಪುಲೆ ರವರು ಮಾಡಿರುವುದು ಶಿಕ್ಷಣ ಕ್ರಾಂತಿ ‘‘ಸಾವಿತ್ರಿ ಬಾಯಿ ತುಂಬ ಉದಾರಿಯಾಗಿದ್ದರು. ಅವರ ಹೃದಯ ಕರುಣಾಭರಿತವಾಗಿತ್ತು. ಬಡವರು, ಅಸಹಾಯಕರ ಕುರಿತು ಬಹಳ ಅನುಭೂತಿ ಹೊಂದಿದ್ದರು. ಅಂಥ ಯಾರನ್ನಾಗಲೀ ನೋಡಿದರೆ ಅಲ್ಲೇ ತಿನ್ನಲು ಕೊಡುತ್ತಿದ್ದರು ಅಥವಾ ಅಡಿಗೆಯಾ ಗಿದ್ದರೆ ಊಟ ಕೊಡುತ್ತಿದ್ದರು. ಹರಿದ ಸೀರೆಯುಟ್ಟ ಹೆಣ್ಣುಮಕ್ಕಳನ್ನು ನೋಡಿದರೆ ತಮ್ಮದೇ ಒಂದು ಸೀರೆ ಮನೆಯಿಂದ ತಂದು ಕೊಟ್ಟು ಬಿಡುತ್ತಿದ್ದರು ಎಂದರು.
ಇದನ್ನೂ ಓದಿ: ಟೆಲಿಪ್ರಾಂಪ್ಟರ್ ಸಹಾಯವಿಲ್ಲದೇ ಪ್ರಧಾನಿ ಮೋದಿ ಭಾಷಣ ಮಾಡಲಾರರು: ಕಾಂಗ್ರೆಸ್
ಇದರಿಂದ ಮನೆ ಖರ್ಚು ಹೆಚ್ಚುತ್ತ ಹೋಯಿತು. ತಾತ್ಯಾ ಒಮ್ಮೊಮ್ಮೆ ಹೇಳುತ್ತಿದ್ದರು, ‘‘ಇಷ್ಟು ಖರ್ಚು ಮಾಡಿದರೆ ಹೇಗೆ?’’ ಎಂದು. ಅದಕ್ಕೆ ಸಾವಿತ್ರಿಬಾಯಿ ನಸುನಗುತ್ತ, ‘‘ನಾವು ಸತ್ತು ಹೋಗುವಾಗ ಏನನ್ನಾದರೂ ಜೊತೆಗೆ ಒಯ್ಯುತ್ತೇವೆಯೇ?’’ ಎಂದು ಕೇಳುತ್ತಿದ್ದರು. ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರಿಗೆ ತುಂಬ ಸಂತೋಷ, ತಾವೇ ಅಡಿಗೆ ಮಾಡಿ ಬಡಿಸುತ್ತಾರೆ.
ಅವರು ಸದಾ ಮಹಿಳೆಯರ ಶಿಕ್ಷಣ ಮತ್ತು ಉನ್ನತಿಯ ಬಗ್ಗೆಯೇ ಯೋಚಿಸುತ್ತಾರೆ. ಸೌಂದರ್ಯ, ಸಿರಿಸಂಪತ್ತು ಕುರಿತಾದ ನಿಗ್ರಹವನ್ನು ಎಳೆಯ ವಯಸ್ಸಿನಲ್ಲೇ ದಕ್ಕಿಸಿಕೊಂಡ ಕಾರಣ ಹಾಗೂ ತಾನು ಮಾಡುವ ಕೆಲಸದಲ್ಲಿ ಅಚಲ ಶ್ರದ್ಧೆ ಬೆಳೆಸಿಕೊಂಡ ಕಾರಣ ಸಾವಿತ್ರಿ ತನ್ನ ಕಾಲದ ಉಳಿದ ಮಹಿಳೆಯರಿಗಿಂತ ತೀರಾ ಭಿನ್ನವಾಗಿ ಯೋಚಿಸಲು; ಕಾರ್ಯಪ್ರವೃತ್ತರಾಗಲು ಸಾಧ್ಯವಾಯಿತು. ಇಂತಹ ಮನೋಭಾವವೇ ಎಲ್ಲ ಮಕ್ಕಳನ್ನೂ ತನ್ನವೇ ಎಂದುಕೊಂಡು ಅವರಿಗೆ ಅಕ್ಷರದ ಅನ್ನ ಉಣಬಡಿಸಲು, ಎಲ್ಲರಿಗೂ ತಾಯಿಯಾಗಲು ಸಾಧ್ಯ ಎಂದು ಮಾತನಾಡಿದರು.
ಸಮಾಜ ಕಲ್ಯಾಣ ಅಧಿಕಾರಿಗಳಾದ ಮಂಜುನಾಥ್ ರವರು ಮಾತನಾಡಿ ಫುಲೆ ದಂಪತಿಗಳ ಕೊಡುಗೆಯನ್ನು ನಾವು ಸ್ಮರಿಸಬೇಕು ಮಹಿಳೆಯರಿಗೆ ಶಿಕ್ಷಣ ಸಿಗಬೇಕು ಅವರಿಗು ಘನೆತೆಯ ಬದುಕಿದೆ ಎಂಬುದನ್ನು ಒತ್ತಿ ಹೇಳಿದರು ಅಂದಿನ ಕಾಲದಲ್ಲಿ ಅವರು ಅಷ್ಟು ಕೆಲಸ ಮಾಡದೆ ಹೋಗಿದ್ದರೆ ಇಂದು ನಾವು ನೆಮ್ಮದಿಯಾಗಿ ಇಲ್ಲಿ ಕೂರಲು ಕೂಡ ಸಾದ್ಯವ ಆಗುತ್ತಿರಲಿಲ್ಲ ಹಾಗಾಗಿ ಅವರು ನಮಗೆ ಆದರ್ಶ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಇದನ್ನೂ ನೋಡಿ: ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ, ಸಿಪಿಐ(ಎಂ) ನಾಯಕ ಜಿ.ಸಿ.ಬಯ್ಯಾರೆಡ್ಡಿ ನಿಧನ Janashakthi Media