ಕನಕಪುರ | CJ ರಾಯ್ ಸಾವಿನ ಕೇಸ್‌ಗೆ ಉನ್ನತ ಮಟ್ಟದ ತನಿಖೆ – ಡಿಕೆ ಶಿವಕುಮಾರ್

ಕನಕಪುರ: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ‘ರಿಯಲ್ ಎಸ್ಟೇಟ್  ಉದ್ಯಮಿ ಸಿ.ಜೆ. ರಾಯ್ ಅವರ ಸಾವಿನ ಪ್ರಕರಣದ ಕುರಿತು, ನಮ್ಮ ಸರ್ಕಾರವು ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶ ಬಹಿರಂಗಪಡಿಸಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಇದನ್ನೂ ಓದಿ: ಶ್ರೀರಂಗಪಟ್ಟಣ | ಖಾಸಗಿ ಹಿಡುವಳಿ ಜಮೀನಿನಲ್ಲಿ ರಸ್ತೆ : ಏಕಾಂಗಿಯಾಗಿ ಪ್ರತಿಭಟನೆ

ಪಟ್ಟಣದಲ್ಲಿ ಈ ಕುರಿತು ಶುಕ್ರವಾರ ರಾತ್ರಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಅಧಿಕಾರಿಗಳು ಪ್ರಶ್ನೆಗಳನ್ನು ಕೇಳುವಾಗ, ರಾಯ್ ಅವರು ಐದು ನಿಮಿಷ ಸಮಯ ನೀಡಿ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಬಂದಿದೆ’ ಎಂದರು.

ಆತ್ಮಹತ್ಯೆ ಬಗ್ಗೆ ದೆಹಲಿಯಿಂದಲೂ ವರದಿ ಕೇಳಿದ್ದು, ರಾಯ್ ಅವರ ವಿಚಾರಣೆಗಾಗಿ ಕೇರಳದಿಂದ ಒಂದು ತಂಡ ಬಂದಿತ್ತು ಎಂಬ ಮಾಹಿತಿ ಇದೆ. ಈ ಬಗ್ಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆ ಮಾಡಲಿದೆ. ರಾಯ್ ಅವರು ಒಳ್ಳೆಯ ಉದ್ಯಮಿಯಾದ್ದರು. ಈ ರೀತಿ ಆಗಬಾರದಿತ್ತು’ ಎಂದು ತಿಳಿಸಿದರು.

ಇದನ್ನೂ ನೋಡಿ : ಗೋಡ್ಸೆಯ 8 ಪುಟದ ಹೇಳಿಕೆ 200 ಪುಟ ಮೀರಿದ್ದು ಹೇಗೆ? ನವ ಹಿಂದುತ್ವದ ಅಂಗಡಿ ಬಂದ್ ಮಾಡುವುದು ಹೇಗೆ?

Donate Janashakthi Media

Leave a Reply

Your email address will not be published. Required fields are marked *