ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ನಗರದಾದ್ಯಂತ ಜನನಿಬಿಡ ಸ್ಥಳಗಳಲ್ಲಿ ಪೊಲೀಸರು ತೀವ್ರ ಪರಿಶೀಲನೆ ಕೈಗೊಂಡಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡಬ್ಮ್ಯೂಪಿಎಲ್ ಪಂದ್ಯಗಳು ನಡೆಯುತ್ತಿರುವುದರಿಂದ ಮತ್ತಷ್ಟು ಭದ್ರತೆ ಹೆಚ್ಚಿಸಲಾಗಿದೆ. ಸ್ಫೋಟ
ಕೆಫೆಯಲ್ಲಿ ನಡೆದಂತಹ ಬಾಂಬ್ ಸ್ಫೋಟ ವಿಚಾರವಾಗಿ ಎಚ್ಚೆತ್ತುಕೊಂಡಿರುವ ಬೆಂಗಳೂರು ಪೊಲೀಸರು ಮತ್ತು ಗೃಹಇಲಾಖೆ ಬೆಂಗಳೂರಲ್ಲಿ ಭದ್ರತೆ ಹೆಚ್ಚಿಸುತ್ತಿದ್ದು, ಸಾರ್ವಜನಿಕರು ಹೆಚ್ಚಾಗಿ ಓಡಾಡುವ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ಘಟನೆಯ ಬೆನ್ನಲ್ಲೇ ಬೆಂಗಳೂರಿನ ಸುತ್ತಮುತ್ತ ಹೈ ಅಲರ್ಟ್ ಆಗಿದ್ದು, ಮೆಜೆಸ್ಟಿಕ್, ಬಸ್ಸುಗಳಲ್ಲಿ, ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಚಿನ್ನಸ್ವಾಮಿ ಕ್ರೀಡಾಂಗಣ ಸೇರಿದಂತೆ ಮತ್ತಿತ್ತರ ಕಡೆ ಕಟ್ಟೆಚ್ಚರ ವಹಿಸಲಾಗಿದೆ.
ಇದನ್ನೂ ಓದಿ : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ : 5 ಮಂದಿಗೆ ಗಾಯ
ಇನ್ನು ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ವಿಚಾರವಾಗಿ ತನಿಖೆ ಮುಂದುವರೆದಿದ್ದು, ಸ್ಫೋಟಕ್ಕೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಯ ಫೋಟೋ ಲಭ್ಯವಾಗಿದೆ.ಈ ಶಂಕಿತ ತನ್ನ ಮುಖಕ್ಕೆ ಮಾಸ್ಕ್, ಕೂಲಿಂಗ್ ಗ್ಲಾಸ್, ವೈಟ್ ಕ್ಯಾಫ್ ಧರಿಸಿದ್ದು, ಕಪ್ಪುಬಣ್ಣದ ಬ್ಯಾಗ್ ಹಾಕ್ಕೊಂಡು ಕೆಫೆಗೆ ಎಂಟ್ರಿ ಪಡೆದಿರೋ ಫುಟೇಜ್ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
ಈ ಶಂಕಿತ ಕೆಫೆಯಲ್ಲಿ ರವೆ ಇಡ್ಲಿ ಆರ್ಡರ್ ಮಾಡಿ ತಿಂದು ಹ್ಯಾಂಡ್ ವಾಷ್ ಮಾಡೋಕೆ ಹೋದಾಗ ತಾನು ತಂದಿದ್ದ ಆ ಕಪ್ಪು ಬ್ಯಾಗನ್ನ ಅಲ್ಲೇ ಬಿಟ್ಟು ನಂತರ ಕೈತೊಳೆದು ಬೈಕ್ ನಲ್ಲಿ ತೆರಳಿದ್ದಾನೆ. ಆತ ಕೆಫೆಯಿಂದ ಹೋದ ಸುಮಾರು ಒಂದು ಗಂಟೆಯ ನಂತರ ಬಾಂಬ್ ಸ್ಫೋಟವಾಗಿದೆ.
ಕಾನೂನು ಬಾಹಿರ ಚಟುವಟಿಕೆ ಕಾಯ್ದೆಯಡಿ ತನಿಖೆ ನಡೆಸುತ್ತಿರೋ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಶಂಕಿತ ವ್ಯಕ್ತಿಗಾಗಿ ಹುಡುಕಾಟಕ್ಕೆ ಎಂಟು ತಂಡಗಳನ್ನು ರಚಿಸಿರುವ ಗುಪ್ತಚರ ಇಲಾಖೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಶಂಕಿತರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದೆ. ಸ್ಫೋಟ