ಹೇಮಂತ್ ಸೊರೆನ್‌ರನ್ನು ಬಂಧಿಸಲಿರುವ ಕೇಂದ್ರ ಸರ್ಕಾರ? ಅವರ ಪತ್ನಿ ಜಾರ್ಖಂಡ್‌ನ ಮುಂದಿನ ಸಿಎಂ?

ರಾಂಚಿ: ಜಾರ್ಖಂಡ್‌ನ ಗಂಡೆ ವಿಧಾನಸಭಾ ಕ್ಷೇತ್ರದ ಆಡಳಿತರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಶಾಸಕ ಸರಫ್ರಾಜ್ ಅಹ್ಮದ್ ಅವರು ಯಾವುದೇ ಕಾರಣ ನೀಡದೆ ತಮ್ಮ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಪ್ರಮುಖ ರಾಜಕೀಯ ಬೆಳವಣಿಗೆ ರಾಜ್ಯದ ರಾಜಕೀಯ ವಲಯಗಳಲ್ಲಿ ಭಾರಿ ಊಹಾಪೋಹಗಳಿಗೆ ಕಾರಣವಾಗಿದೆ. ಅಹ್ಮದ್ ಅವರು ಡಿಸೆಂಬರ್ 31 ರಂದು ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದರು ಹಾಗೂ ಅದನ್ನು ಅದೇ ದಿನ ಅಂಗೀಕರಿಸಲಾಗಿತ್ತು. ಆದರೆ ಮರುದಿನ ಅಧಿಸೂಚನೆಯನ್ನು ಹೊರಡಿಸಲಾಯಿತು. ಸೊರೆನ್

 ಸೊರೆನ್ 2023ರ ಡಿಸೆಂಬರ್ 31 ರಿಂದ ಗಂಡೆ ವಿಧಾನಸಭಾ ಕ್ಷೇತ್ರದ ಸ್ಥಾನವು ಖಾಲಿಯಾಗಿದೆ ಎಂದು ಹೇಳುವ ಮೂಲಕ ಅಸೆಂಬ್ಲಿ ಸೆಕ್ರೆಟರಿಯೇಟ್ ಸೋಮವಾರ ಅವರ ರಾಜೀನಾಮೆಯನ್ನು ಸೂಚಿಸಿದೆ. ಸರ್ಫರಾಜ್ ಅವರು 1980 ಮತ್ತು 2009 ರಲ್ಲಿ ಕಾಂಗ್ರೆಸ್ ಶಾಸಕರಾಗಿ ಮತ್ತು 2019 ರಲ್ಲಿ ಜೆಎಂಎಂ ಶಾಸಕರಾಗಿ ಗಂಡೆ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅವರ ಈ ಹಠಾತ್ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಲು ಕೂಡಾ ಅವರು ಲಭ್ಯವಾಗಿಲ್ಲ.

ಇದನ್ನೂ ಓದಿ: ಹಳೆಯ ಬಸ್‌ಗಳನ್ನು ಗುಜರಿಗೆ ಹಾಕಿ – ಕೆಎಸ್‌ಆರ್‌ಟಿಸಿಗೆ ಕರ್ನಾಟಕ ಹೈಕೋರ್ಟ್ ಆದೇಶ

ಅಹ್ಮದ್ ಅವರಿಂದ ಯಾವುದೆ ಕಾರಣಗಳನ್ನು ಕೇಳದೆ, ರಾಜೀನಾಮೆಯನ್ನು ಅಂಗೀಕರಿಸಿದ್ದಾಗಿ ಜಾರ್ಖಂಡ್ ಅಸೆಂಬ್ಲಿ ಸ್ಪೀಕರ್ ರವೀಂದ್ರ ನಾಥ್ ಮಹ್ತೋ ಅವರು ಹೇಳಿದ್ದಾಗಿ TNIE ವರದಿ ಮಾಡಿದೆ. “ಅಹ್ಮದ್ ಅವರು ಯಾವುದೇ ಕಾರಣಗಳನ್ನು ಉಲ್ಲೇಖಿಸದೆ ರಾಜೀನಾಮೆ ಸಲ್ಲಿಸಿದ್ದಾರೆ. ಅಹ್ಮದ್ ಅವರು ಹಿರಿಯ ರಾಜಕಾರಣಿಯಾಗಿರುವುದರಿಂದ ಕಾರಣಗಳನ್ನು ವಿಚಾರಿಸಲು ನಾನು ಸೂಕ್ತವಲ್ಲ, ಆದ್ದರಿಂದ ನಾನು ಅದನ್ನು ಅಂಗೀಕರಿಸಿದ್ದೇನೆ” ಎಂದು ಸ್ಪೀಕರ್ ಹೇಳಿದ್ದಾರೆ.

ವಿಧಾನಸಭೆಯ ಹಿರಿಯ ರಾಜಕಾರಣಿಯ ಹಠಾತ್ ರಾಜೀನಾಮೆ ಊಹಾಪೋಹಗಳಿಗೆ ಕಾರಣವಾಗಿದೆ. ಈ ಮಧ್ಯೆ, ಭೂ ಹಗರಣ ಪ್ರಕರಣದಲ್ಲಿ ವಿಚಾರಣೆಗೆ ಸಮಯ, ದಿನಾಂಕ ಮತ್ತು ಸ್ಥಳವನ್ನು ನಿರ್ಧರಿಸುವಂತೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಕೊನೆಯ ಅವಕಾಶ ನೀಡಿದೆ.

ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ಸೋರೆನ್ ಅವರು ರಾಜೀನಾಮೆ ನೀಡಬೇಕಾದರೆ ಅಥವಾ ಭೂ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಬೇಕಾದರೆ ತಮ್ಮ ಆಯ್ಕೆಗಳನ್ನು ಮುಕ್ತವಾಗಿರಿಸಿಕೊಳ್ಳಲು ಈ ಬೆಳವಣಿಗೆ ನಡೆದಿದೆ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ಉಳ್ಳಾಲ | ಕಲ್ಲಡ್ಕ ಭಟ್ ವಿರುದ್ಧ ಪ್ರತಿಭಟಿಸಿದವರ ಮೇಲೆ ಸ್ವಯಂ ಪ್ರೇರಿತ ಎಫ್‌ಐಆರ್‌ ದಾಖಲಿಸಿದ ಕಾಂಗ್ರೆಸ್ ಸರ್ಕಾರ!

ಭೂ ಹಗರಣ ಪ್ರಕರಣದಲ್ಲಿ ವಿಚಾರಣೆಗಾಗಿ ಇಡಿ ಅವರಿಗೆ ನೀಡಿದ್ದ ಏಳು ಸಮನ್ಸ್‌ಗಳನ್ನು ಸೋರೆನ್ ಕೈಬಿಟ್ಟಿರುವುದು ಗಮನಾರ್ಹವಾಗಿದೆ. ಇಡಿ ಸಮನ್ಸ್‌ಗೆ ಮಣಿಯುವುದಂತೆ ಮುಖ್ಯಮಂತ್ರಿ ಸೊರೆನ್ ಅವರು ಸುದೀರ್ಘ ರಾಜಕೀಯ ಹೋರಾಟಕ್ಕೆ ಸಿದ್ಧರಾಗಬೇಕಿದ್ದು, ಅದಕ್ಕಾಗಿ ತಮ್ಮ ಪ್ಲಾನ್ ಬಿ ಅನ್ನು ಜಾರಿಗೆ ತರಬಹುದು ಎಂದು ರಾಜಕೀಯ ತಜ್ಞರು ನಂಬಿದ್ದಾರೆ.

ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಹೇಮಂತ್ ಸೋರೆನ್ ಅವರ ಪತ್ನಿ ಕಲ್ಪನಾ ಸೊರೆನ್ ಅವರಿಗಾಗಿ ಅಹ್ಮದ್ ಅವರ ಸೀಟು ಕಾಯ್ದಿರಿಸಲಾಗಿದೆ ಎಂಬ ಊಹಾಪೋಹಗಳು ದಟ್ಟವಾಗಿವೆ. “ಒಡಿಶಾ ಮೂಲದ ಕಲ್ಪನಾ ಸೊರೆನ್ ಅವರು ಜಾರ್ಖಂಡ್‌ನ ಮೀಸಲು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಅಥವಾ ಎಸ್‌ಟಿ ಸವಲತ್ತು ಪಡೆಯಲು ಅರ್ಹರಲ್ಲ ಎಂದು ಹೇಳಲಾಗುತ್ತಿರುವುದರಿಂದ ಸಾಮಾನ್ಯ ಸ್ಥಾನವಾದ ಗಂಡೆ ಅವರಿಗೆ ಸುರಕ್ಷಿತ ಕ್ಷೇತ್ರವಾಗಿರಬಹುದು” ಎಂದು ರಾಜಕೀಯ ತಜ್ಞರು ಹೇಳಿದ್ದಾರೆ.

ಆದರೆ, ಈ ಬಗ್ಗೆ ಜೆಎಂಎಂ ನಾಯಕರು ಯಾವುದೆ ಮಾಹಿತಿಯನ್ನುಬಿಟ್ಟು ಕೊಟ್ಟಿಲ್ಲ. ರಾಜೀನಾಮೆ ವಿಚಾರದಲ್ಲಿ ಸರ್ಫರಾಜ್ ಅಹ್ಮದ್ ಮಾತ್ರ ಹೇಳಲು ಸಾಧ್ಯ ಎಂದು ಜೆಎಂಎಂ ಕೋರ್ ಕಮಿಟಿ ಸದಸ್ಯ ವಿನೋದ್ ಪಾಂಡೆ ಹೇಳಿದ್ದಾರೆ. ಜಾರ್ಖಂಡ್ ಕಾಂಗ್ರೆಸ್ ಮುಖ್ಯಸ್ಥ ರಾಜೇಶ್ ಠಾಕೂರ್, ಇದು ಯಾವುದೇ ರೀತಿಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸರ್ಕಾರದ ಕಾರ್ಯತಂತ್ರದ ಒಂದು ಭಾಗವಾಗಿದೆ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ನಾಯಕನ ಭೂ ಕಬಳಿಕೆ ವಿರುದ್ಧ ಪ್ರಕರಣ ದಾಖಲಿಸಿದ್ದ ವೃದ್ಧ ದಲಿತ ರೈತರಿಬ್ಬರಿಗೆ ಇಡಿ ಸಮನ್ಸ್!

ಈ ಮಧ್ಯೆ, ಬಿಜೆಪಿ ನಾಯಕ, ಗೊಡ್ಡಾ ಸಂಸದ ನಿಶಿಕಾಂತ್ ದುಬೆ ಅವರು ಹೇಮಂತ್ ಸೊರೆನ್ ರಾಜೀನಾಮೆ ನೀಡುತ್ತಾರೆ ಮತ್ತು ಕಲ್ಪನಾ ಸೊರೆನ್ ಜಾರ್ಖಂಡ್‌ನ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ.

“ಜಾರ್ಖಂಡ್‌ನ ಗಂಡೆ ಶಾಸಕ ಸರ್ಫರಾಜ್ ಅಹ್ಮದ್ ಅವರು ವಿಧಾನಸಭೆಗೆ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆ ಅಂಗೀಕರಿಸಲಾಗಿದೆ. ಹೇಮಂತ್ ಸೊರೆನ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಅವರ ಪತ್ನಿ ಕಲ್ಪನಾ ಸೊರೆನ್ ಅವರು ಜಾರ್ಖಂಡ್‌ನ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಸೋರೆನ್ ಕುಟುಂಬಕ್ಕೆ ಹೊಸ ವರ್ಷ ನೋವಿನಿಂದ ಕೂಡಿದೆ” ಎಂದು ನಿಶಿಕಾಂತ್ ದುಬೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಡಿಯೊ ನೋಡಿ: ಶೋಷಿತರ ಧ್ವನಿಗೆ ಪ್ರತಿಧ್ವನಿಯಾಗಿ ಮೊಳಗಿದ ಸಪ್ದರ್ ಹಾಶ್ಮಿ Janashakthi Media

Donate Janashakthi Media

Leave a Reply

Your email address will not be published. Required fields are marked *