ಜುಲೈ‌‌ 1 ರಿಂದ‌ ರಾಜ್ಯಾದ್ಯಂತ ಭಾರೀ ಮಳೆ

ಬೆಂಗಳೂರು: ಕಳೆದ ವಾರ ಅರ್ಧ ರಾಜ್ಯಕ್ಕೆ ಆವರಿಸಿದ್ದ ಮುಂಗಾರು ಮಳೆ ಇದೀಗ ಪೂರ್ತಿ ರಾಜ್ಯಕ್ಕೆ ಆವರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಜುಲೈ‌‌ 

ಜುಲೈ‌‌ 1 ರಿಂದ‌ ರಾಜ್ಯಾದ್ಯಂತ ಭಾರೀ ಮಳೆ ಆರ್ಭಟ ಶುರುವಾಗಿದೆ‌. ರಾಜ್ಯದ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ವೈಪರಿತ್ಯಗಳು ಉಂಟಾಗಿವೆ. ಸಮುದ್ರ ಮೇಲ್ಮೈ ಸುಳಿಗಾಳಿ (ಸ್ಟ್ರಫ್) ಉಂಟಾಗಿರುವ ಕಾರಣದಿಂದಾಗಿ ಪಶ್ಚಿಮ ಘಟ್ಟ, ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡು ಭಾಗದ ವಿವಿಧ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಸುರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.

ಇದನ್ನು ಓದಿ : ಮಥುರಾದಲ್ಲಿ ಓವರ್ ಹೆಡ್ ನೀರಿನ ಟ್ಯಾಂಕ್ ಕುಸಿತ; ಇಬ್ಬರು ಮಹಿಳೆಯರ ಸಾವು

ಜುಲೈ 1ರಿಂದ ಜುಲೈ 09 ರವರೆಗೆ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆ ಆದರೆ, ಉಳಿದೆಡೆ ಭಾರೀ ಮತ್ತು ವಿಪರೀತ ಮಳೆ ಆಗಲಿದೆ. ಜುಲೈ 2ರವರೆಗೆ ಸಾಧಾರಣದಿಂದ ಭಾರೀ ಮಳೆ ಆದರೆ, ನಂತರ ಎರಡು ದಿನ ಇಡೀ ಕರ್ನಾಟಕದಲ್ಲಿ ಮಳೆ ಆವರಿಸಲಿದೆ. ಆಗ ಕರಾವಳಿ ಮಲೆನಾಡಿಗೆ 200 ಮಿಲಿ ಮೀಟರ್‌ಗೂ ಹೆಚ್ಚು ಮಳೆ ಆಗಬಹುದು. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿಗೆ 100 ಮಿಲಿ ಮೀಟರ್‌ಗಿಂತಲೂ ಅಧಿಕ ಮಳೆ ಸುರಿಯಬಹುದು. ಜುಲೈ 5ನೇ ತಾರೀಖಿನ ವೇಳೆಗೆ ರಾಜ್ಯಾದ್ಯಂತ ಮುಂಗಾರು ಮತ್ತೆ ಆರ್ಭಟಿಸುವುದು ಖಚಿತವಾಗಲಿದೆ. ಈ ಮಳೆ ಜುಲೈ 9ರವರೆಗೆ ಮುಂದುವರಿಯಲಿದೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ.

ಇದನ್ನು ನೋಡಿ : ಅಕಾಡೆಮಿಗಳ ಮೇಲೆ ರಾಜಕಾರಣದ ಕರಿ ನೆರಳು! Janashakthi Media

Donate Janashakthi Media

Leave a Reply

Your email address will not be published. Required fields are marked *