ಬರ ಪರಿಹಾರದ ಬದಲು, ಹೃದಯವಂತಿಕೆಯ ಬರ ಎದ್ದುಕಾಣುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಪ್ರೊ. ಬಿಕೆ ಚಂದ್ರಶೇಖರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದ ರೈತರು ಮಳೆಯಿಲ್ಲದೆ ತೀವ್ರ ಸಂಕಷ್ಟದಲ್ಲಿದ್ದ ಸಂದರ್ಭ: ಕರ್ನಾಟಕದ ಮೂರನೇ ಹಂತದ ಚುನಾವಣೆಯ ಕಾಂಗ್ರೆಸ್ ನಿಂದ ಮಹಿಳೆಯರ ಮಾಂಗಲ್ಯಕ್ಕೆ ಬರಲಿರುವ ಕುತ್ತು (ಶೂನ್ಯ ಪಚಾರದಲ್ಲಿ ಪಧಾನಿ ಮೋದಿ ಮಾಡಿದ ಮಾಹಿತಿಯಿಂದ ಜನರ ದಿಕ್ಕು ತಪ್ಪಿಸಲು) ‘ಮುಸ್ಲಿಂ ಜನಾಂಗದ ಜನಸಂಖ್ಯೆ ಹೆಚ್ಚುತ್ತಿದೆ’ (ಜನಸಂಖ್ಯೆಯ ಜಿಹಾದ್!) ಭಾಷಣಗಳ ಮೂಲಕ ಚುನಾವಣೆ ಗೆದ್ದು ಅಧಿಕಾರ ಹಿಡಿಯುವ ಪ್ರಯತ್ನ ಕೀಳು ಮಟ್ಟದ ಮಾತುಗಳ ಮಾಲಿನ್ಯವಲ್ಲವೇ? ಬರದ ಏಟು ತಪ್ಪಿಸಿಕೊಳ್ಳಲಾಗದೆ ಬಿಸಿಲಿನಲ್ಲಿ ಕುದಿಯುತ್ತಿದ್ದ ರೈತರಿಗೆ, ನಿರುದ್ಯೋಗದಿಂದ ಪರಿತಪಿಸುತ್ತಿರುವ ಯುವಜನಾಂಗಕ್ಕೆ ಮೋದಿಯವರು ಕೊಟ್ಟ ಸಂದೇಶವಾದರೂ ಏನು? ಸಂಪೂರ್ಣ ಮೌನ! , ಹೃದಯವಂತಿಕೆ
ಕನ್ನಡದ ರಾಷ್ಟ್ರಕವಿ ಕುವೆಂಪು ಅವರು 1974 ರಲ್ಲಿ ಎಚ್ಚರಿಸಿದ್ದರು: “ಒಮ್ಮೆ ಗೆದ್ದು ಅಧಿಕಾರ ಸೂತ್ರವನ್ನು ಹಿಡಿದರಾಯ್ತು, ನಾಡಿನ ಸರ್ವ ಪ್ರಚಾರ ಮಾರ್ಗಗಳನ್ನೂ ಅಧಿಕಾರದ ಭಯದಿಂದಲೂ, ದುಡ್ಡಿನ ಬಲದಿಂದಲೂ ವಶಪಡಿಸಿಕೊಂಡು ತಮ್ಮ ಸರ್ವಾಧಿಕಾರಕ್ಕೆ ವ್ಯಾಘಾತ ಒದಗದಂತೆ ನೋಡಿಕೊಳ್ಳಬಹುದು”.
ಇದನ್ನುಓದಿ : ಹೆಚ್.ಡಿ.ದೇವೇಗೌಡ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಹೆಸರು ಬಳಸದಂತೆ ತಡೆಯಾಜ್ಞೆ
ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಅಧಿಕೃತವಾಗಿ ಸಿದ್ಧಪಡಿಸಿದ ದಾಖಲೆಯಲ್ಲಿ ಉಲ್ಲೇಖಿಸಿರುವಂತೆ, ಹಲವಾರು ನಿವೇದನೆಗಳು, ಮುಖ್ಯಮಂತ್ರಿ ಮತ್ತಿತರ ಸಚಿವರುಗಳು, ಪ್ರಧಾನಿಯನ್ನೂ ಒಳಗೊಂಡಂತೆ, ಭೇಟಿ ಮಾಡಿ ರಾಜ್ಯದ ತುರ್ತುಪರಿಸ್ಥಿತಿಗೆ ಕೇಂದ್ರದ ತುರ್ತುಅನುದಾನಕ್ಕಾಗಿ ಮನವಿ ಮಾಡಿದ್ದರು. ಕೇಂದ್ರದಿಂದ ಯಾರೊಬ್ಬರೂ ಸ್ಪಂದಿಸಲಿಲ್ಲ. ಅವರ ಮೌನವೇ ಉತ್ತರವಾಗಿತ್ತು. ಕಟ್ಟಕಡೆಗೆ ಅನಿವಾರ್ಯವಾಗಿ ರಾಜ್ಯಸರ್ಕಾರ ಸುಪ್ರೀಂ ಕೋರ್ಟಿನ ಬಾಗಿಲು ತಟ್ಟಬೇಕಾಯಿತು. ನ್ಯಾಯಾಲಯದ ಆದೇಶದಿಂದ ಕೇಂದ್ರ ಸರ್ಕಾರ ಎಚ್ಚೆತ್ತು, ರಾಜ್ಯ ಕೇಳಿದ್ದ ರೂ 18,170 ಕೋಟಿಗೆ ಬದಲಾಗಿ ರೂ 3,454 ಕೋಟಿ ಅನುದಾನ ದಯಪಾಲಿಸಿತ್ತು. ಇದಕ್ಕೆ ತಿಂಗಳುಗಳ ಮುಂಚೆಯೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರು 2024-25 ಬಜೆಟ್ ನಲ್ಲಿ ರಾಜ್ಯಸರ್ಕಾರದ ಹಣದಿಂದಲೇ ಬರಪರಿಹಾರಕ್ಕೆ ಒದಗಿಸಿದ ಹಣವನ್ನು ಅಂಕಿ ಅಂಶಗಳ ಸಮೇತ ವಿವರಣೆ ಕೊಟ್ಟಿದ್ದಾರೆ. ಹೃದಯವಂತಿಕೆ
ಕೇಂದ್ರದ ಇಂದಿನ ನಡವಳಿಕೆಯನ್ನು 2009 ರಲ್ಲಿ ಅಂದಿನ ಕಾಂಗ್ರೆಸ್ ಪಕ್ಷದ ಪ್ರಧಾನಿ ಮನಮೋಹನ ಸಿಂಗ್ ಅವರು ಸ್ಪಂದಿಸಿದ ರೀತಿಗೆ ಹೋಲಿಸಿ ನೋಡಿ, ರಾಯಚೂರು ಜಿಲ್ಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಾದ ನೆರೆ ಹಾವಳಿ ಅಪಾರ ನಷ್ಟವನ್ನು ಸ್ವತಃ ಪ್ರಧಾನಿಯವರೇ ವೀಕ್ಷಿಸಬೇಕೆಂದು ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮನವಿಯನ್ನು ಪುರಸ್ಕರಿಸಿ, ಭೇಟಿ ಕೊಟ್ಟು, ಸಂವಾದದ ನಂತರ ತಕ್ಷಣವೇ ರೂ 1000 ಕೋಟಿ ಮಂಜೂರು ಮಾಡಿದ್ದರು! ಎಂದು ನೆನಪಿಸಿದ್ದಾರೆ. ಹೃದಯವಂತಿಕೆ
ಇದನ್ನು ನೋಡಿ : ಪೆನ್‌ಡ್ರೈವ್ ಪ್ರಕರಣ : ರೇವಣ್ಣ, ಪ್ರಜ್ವಲ್ ರೇವಣ್ಣ ಶೀಘ್ರ ಬಂಧನಕ್ಕೆ ಆಗ್ರಹ Janashakthi Media