ಬೆಳಗಾವಿ: ನಕಲಿ ವೈದ್ಯರು ಹಾಗೂ ಕ್ಲಿನಿಕ್‌ಗಳ ವಿರುದ್ಧ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿರುವ ಬೆಳಗಾವಿ ಜಿಲ್ಲಾ ಆರೋಗ್ಯ ಇಲಾಖೆ ನಕಲಿ ಕ್ಲಿನಿಕ್ ವೈದ್ಯರಿಗೆ ಬೀಗ ಜಡಿದಿದ್ದಾರೆ.
ನಗರದ ಬಡಕಲ್ ಗಲ್ಲಿಯಲ್ಲಿರುವ ನಕಲಿ ವೈದ್ಯನ ಕ್ಲಿನಿಕ್‌ಗೆ ಬೀಗ ಜಡಿಯಲಾಗಿದೆ.
ಕ್ಲಿನಿಕ್‌ನ ಪಕ್ಕದಲ್ಲೇ ಇದೇ ವ್ಯಕ್ತಿಗೆ ಸೇರಿದ ಇನ್ನೊಂದು ದೊಡ್ಡ ಆಸ್ಪತ್ರೆ ಕೂಡ ಇದೆ. ಅದೂ ಅನಧಿಕೃತ ಆಗಿರುವ ಸಂಶಯವಿದ್ದು, ನೋಟಿಸ್ ನೀಡಿ ಪರಿಶೀಲಿಸಲಾಗುವುದು. ಕ್ಲಿನಿಕ್‌ಗೆ ನಿಯಮಾನುಸಾರ ಅನುಮತಿ ಪಡೆದಿಲ್ಲ. ರೋಗಿಗಳ ಚಿಕಿತ್ಸೆಗೆ ಸೂಕ್ತ ಸೌಕರ್ಯಗಳಿಲ್ಲ, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮಾಣಪತ್ರಗಳೂ ಇಲ್ಲ.
ಇದನ್ನೂ ಓದಿ: 28ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿಗೆ ಬಿಜೆಪಿ ಮುತ್ತಿಗೆ- ಬಿ.ವೈ.ವಿಜಯೇಂದ್ರ
ಸಿಬ್ಬಂದಿ ಕೂಡ ವೈದ್ಯಕೀಯಕ್ಕೆ ಸಂಬಂಧಿಸಿದ ಯಾವುದೇ ಶಿಕ್ಷಣ ಪಡೆದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ತಿಳಿಸಿದರು.
ಶಿವಾ ಹೆಸರಿನ ನಕಲಿ ಕ್ಲಿನಿಕ್‌ನಲ್ಲಿ ಇಸಿಜಿ ಸೇರಿದಂತೆ ಆಯುರ್ವೇದ ಮೆಡಿಸಿನ್ ಪೂರೈಸಲಾಗುತ್ತಿತ್ತು. ಆರೋಗ್ಯ ಇಲಾಖೆ ಅಧಿಕಾರಿಗಳು ಸಂಪೂರ್ಣವಾಗಿ ಕ್ಲಿನಿಕ್ನ್ನು ಜಾಲಾಡಿ ಮಾತ್ರೆ, ಔಷಧ, ಯಂತ್ರೋಪಕರಣಗಳ ಪಟ್ಟಿ ಮಾಡಿಕೊಂಡು ನಕಲಿ ವೈದ್ಯನಿಗೆ ನೊಟೀಸ್ ನೀಡಿ ಆಸ್ಪತ್ರೆಯನ್ನು ಸೀಜ್ ಮಾಡಿದ್ದಾರೆ.
ಇದನ್ನೂ ನೋಡಿ: ಸೌಹಾರ್ದತೆಯ ತಾಣ, ಮೊಹಮ್ಮದ್ ಗವಾನ್ ಮದರಸಾ Janashakthi Media