ಮದ್ಯ ಸೇವಿಸಿ ಶಾಲೆಯಲ್ಲಿ ಮಲಗಿದ್ದ ಮುಖ್ಯ ಶಿಕ್ಷಕ; ಅಮಾನತು

ರಾಯಚೂರು: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮದ್ಯ ಸೇವಿಸಿ ಶಾಲೆಯ ಅಡುಗೆ ಕೋಣೆ ಮುಂದೆ ಮಲಗಿದ್ದ ಘಟನೆ  ಜಿಲ್ಲೆ ಮಸ್ಕಿ ತಾಲೂಕಿನ ಗೋನಾಳ ಗ್ರಾಮದಲ್ಲಿ ಜುಲೈ 24ರಂದು ನಡೆದಿದೆ. ಸೇವಿಸಿ 

ಮುಖ್ಯ ಶಿಕ್ಷಕ ಮದ್ಯಪಾನ ಮಾಡಿ ಮಲಗಿದ ಘಟನೆ ನಡೆದಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಇಲಾಖೆ ಅವರನ್ನು ಅಮಾನತು ಮಾಡಿದೆ.

ಇದನ್ನೂ ಓದಿ: ಸಂಸತ್ತಗೆ ಕಮಲ್‌ ಹಾಸನ್‌ ಪ್ರವೇಶ; ತಮಿಳಿನಲ್ಲಿ ಪ್ರಮಾಣ ವಚನ

ನಿಂಗಪ್ಪ ಅಮಾನತುಗೊಂಡ ಮುಖ್ಯ ಶಿಕ್ಷಕ. ಮದ್ಯಪಾನ ಮಾಡಿ ಶಾಲೆಗೆ ಬಂದಿದ್ದ ನಿಂಗಪ್ಪ ಅಡುಗೆ ಕೋಣೆ ಮುಂಭಾಗ ಮಲಗಿದ್ದಾರೆ. ಬಿಸಿಯೂಟ ಸಿಬ್ಬಂದಿಗೆ ಅಡುಗೆ ಕೋಣೆ ಬಾಗಿಲು ತೆರೆಯಲು ಅವಕಾಶ ನೀಡದೆ ಅಸಭ್ಯವಾಗಿ ವರ್ತಿಸಿದ್ದಾರೆ.

ಈ ಮಾಹಿತಿ ತಿಳಿದ ಪೋಷಕರು, ಗ್ರಾಮಸ್ಥರು ಶಾಲೆಗೆ ಬಂದು ಶಿಕ್ಷಕನನ್ನು ಎಬ್ಬಿಸಿ ಕಳುಹಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಮುಖ್ಯ ಶಿಕ್ಷಕ ನಿಂಗಪ್ಪನನ್ನು ಅಮಾನತು ಮಾಡಲಾಗಿದೆ.

ಇದನ್ನೂ ನೋಡಿ: ಶಾಲೆ, ಕಾಲೇಜು ಮತ್ತು ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ – ಎಸ್‌ಎಫ್‌ಐ ಪ್ರತಿಭಟನೆ Janashakthi

Donate Janashakthi Media

Leave a Reply

Your email address will not be published. Required fields are marked *