“ದುಡ್ಡು ಕೊಡ್ತೀವಿ ಅಂತಾ ಕರೆಯಿಸಿ ಹಣ ಕೊಡ್ಲಿಲ್ಲ ” ಮೋದಿ ಕಾರ್ಯಕ್ರಮಕ್ಕೆ ಬಂದಿದ್ದವರಿಂದ ಆರೋಪ

ಮಂಡ್ಯ : ಬೆಂಗಳೂರು-ಮೈಸೂರು ನಗರಗಳ ನಡುವೆ ನಿರ್ಮಿಸಿರುವ ಹೊಸ ದಶಪಥ ಹೆದ್ದಾರಿಯನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೆನ್ನೆ ಮಂಡ್ಯಕ್ಕ ಆಗಮಿಸಿದ್ದರು ಈ ವೇಳೆ ಕಾರ್ಯಕ್ರಮದಲ್ಲಿ ಜನರನ್ನು ಸೇರಿಸುವುದಕ್ಕಾಗಿ ಮಂಡ್ಯದ ಬಿಜೆಪಿಯ ಮುಖಂಡರು ಒಬ್ಬ ವ್ಯಕ್ತಿಗೆ  ತಲಾ 300 ರೂಪಾಯಿ ನೀಡುವುದಾಗಿ ಹೇಳಿದ್ದರು. ಆದರೆ ಹಣ ನೀಡಿಲ್ಲ ಎಂಬ ಆರೋಪಗಳು ಜನರಿಂದ ಕೇಳಿಬರುತ್ತಿವೆ.

ನಮ್ಮ ಗ್ರಾಮಪಂಚಾಯಿತಿ ವತಿಯಿಂದ 3 ಬಸ್ಸುಗಳಲ್ಲಿ ನಾವು ಬಂದಿದ್ದೇವೆ. 2 ಬಸ್ಸಿನಲ್ಲಿರುವ ಜನರಿಗೆ ಮಾತ್ರ ತಲಾ 300 ರೂಪಾಯಿಗಳನ್ನು ನೀಡಿದ್ದಾರೆ. ಒಂದು ಬಸ್ಸಿನ ಜನಕ್ಕೆ ಮಾತ್ರ ಹಣ ನೀಡಿಲ್ಲ ನಮಗೆ ಯಾಕೆ ಹೀಗೆ ಮಾಡಿದ್ದಾರೆ. ವೋಟ್‌ ಕೇಳಲು  ಮನೆ ಮುಂದೆ ಬಂದಾಗ ಸುಮ್ಮನಿರಲ್ಲ ಎಂದು  ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಈ ಹಿಂದೆಯೂ ಕೂಡ ಬಿಜೆಪಿ ಜನಸಂಕಲ್ಪ ಯಾತ್ರೆ ವೇಳೆ ಬೃಹತ್ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದರು ಆಗಲೂ ಕೂಡ ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧೆಡೆಯಿಂದ ಜನರನ್ನ ಕರೆಸಲಾಗಿತ್ತು. ಸಮಾವೇಶಕ್ಕೆ ಬಂದ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಜನಕ್ಕೆ ಊಟ ಕೊಟ್ಟರೇ ಭಾಷಣ ಕೇಳಲ್ಲ, ಖಾಲಿ ಕುರ್ಚಿ ಕಾಣುತ್ತವೆಂಬ ಕಾರಣಕ್ಕೆ ಊಟ ಕೊಡೋದನ್ನ ನಿಲ್ಲಿಸಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದ್ದವು.

ಇದನ್ನೂ ಓದಿ  : ಮೋದಿ ರೋಡ್‌ ʼಶೋʼಕಿಗೆ ಮರಗಳಿಗೆ ಬಿತ್ತು ಕೊಡಲಿ!

15 ಬೃಹತ್ ಸ್ಟೀಲ್ ಬಕೆಟ್‌ಗಳು, 250 ಕೆಜಿ ತರಕಾರಿ ಬಾತ್, ಏಳು ಬಕೆಟ್ ಮೊಸರನ್ನ, 50,000 ಸಿಹಿತಿಂಡಿಗಳನ್ನು ಗುಂಡಿಯಲ್ಲಿ ಎಸೆದು ಮಣ್ಣಿನಿಂದ ಮುಚ್ಚಿ, ಮಂಡ್ಯದ ಬಾಲಕರ ಕಾಲೇಜು ಬಳಿಯ ತೆರೆದ ಮೈದಾನದಲ್ಲಿ ಬಿಜೆಪಿಯ ಸಂಘಟಕರು ಅಗೆಯುವ ಯಂತ್ರ ಬಳಸಿ ಗುಂಡಿ ತೋಡಿ ತಿನ್ನುವ ಅನ್ನವನ್ನು ಮಣ್ಣಲ್ಲಿ ಮುಚ್ಚಿಹಾಕಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ  ಸಾಕಷ್ಟು ವೈರಲ್‌ ಆಗಿ ಜನರು  ಬಿಜೆಪಿಯ ಈ  ನಡೆ ವಿರುದ್ಧ ಕಿಡಿಕಾರಿದ್ದರು.

ಚುನಾವಣೆ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಜನರಿಂದ ಮತಗಳನ್ನು ಗಿಟ್ಟಿಸುವ ಸಲುವಾಗಿ ಬಿಜೆಪಿಯ ರಾಷ್ಟ್ರೀಯ ನಾಯಕರುಗಳು ಸರತಿಯಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜನರು  ಸ್ವತಃ ಕಾರ್ಯಕ್ರಮಗಳಿಗೆ ಬರಬೇಕೇ ವಿನಃ ಹಣ ನೀಡಿ ಕಾರ್ಯಕ್ರಮಗಳಲ್ಲಿ  ಕೂರಿಸುವ ಯತ್ನ, ಭಾಷಣ ಮುಗಿಯುವವರೆಗೂ ಊಟ ನೀಡದಿರುವುದು ಇಂತಹ ಪ್ರಸಂಗಗಳಿಂದ ಜನರು  ಬಿಜೆಪಿಯ ವಿರುದ್ಧ ಅಸಮಾಧಾನಗೊಂಡಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *