ಹಟ್ಟಿ ಚಿನ್ನದಗಣಿ ಕಂಪನಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್ 19ಮತಗಳಿಂದ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಎಂ.ಶಾಫಿಸಾಬ್ 64 ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಹಟ್ಟಿ
ಕಣದಲ್ಲಿ ಎಐಟಿಯುಸಿ, ಸಿಐಟಿಯು, ಟಿಯುಸಿಐ, ಆಕಳು ಸಂಘಟನೆ ಹಾಗೂ ಬಿಎಂಎಸ್‌ನ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು.ತಕ್ಕಡಿ ಚಿಹ್ನೆಯ ಎಐಟಿಯುಸಿ, ಸಿಐಟಿಯು ಚಿಹ್ನೆಯ ಬಂಡಿಗಾಲಿ, ಆಕಳು ಪಕ್ಷದ ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಕೆ.ಮಹಾಂತೇಶ್ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದಲ್ಲಿರುವ 25 ಪದಾಧಿಕಾರಿಗಳ ಸ್ಥಾನಗಳಿಗೆ ಒಟ್ಟು 120 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 3,394 ಕಾರ್ಮಿಕರಲ್ಲಿ 3222 ಕಾರ್ಮಿಕರು ಮತ ಚಲಾಯಿಸಿದ್ದರು.
ಇದನ್ನೂ ಓದಿ : ವೇತನ ಅಸಮಾನತೆ ಹೆಚ್ಚಳ ಮತ್ತು ಛಿದ್ರವಾಗುತ್ತಿರುವ ಕಾರ್ಮಿಕ ವರ್ಗ ಐಎಲ್‌ಒ ವರದಿ ಬಹಿರಂಗ
ಒಟ್ಟು ಅಭ್ಯರ್ಥಿಗಳು ಪಡೆದ ಮತಗಳು
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ ಕೆ. ಮಹಾಂತೇಶ (ಸಿಐಟಿಯು) : 944, ಚಂದ್ರಶೇಖರ (ಎಐಟಿಯುಸಿ) : 925, ಮಾನಸಯ್ಯ (ಟಿಯುಸಿಐ) :523, ರಾಘವೇಂದ್ರ ಕುಷ್ಟಗಿ : 826, ಶಂಕರ್ : 32 ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚುನಾವಣೆಯಲ್ಲಿ ಆಕಳು ಚಿಹ್ನೆಯಡಿ ಸ್ಪರ್ಧಿಸಿದ್ದ ವಾಲಿಬಾಬು 950 ಮತ, ಸಿಐಟಿಯುನ ಎಸ್.ಎಂ.ಶಾಫಿಸಾಬ್ 1,014 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿಗಳಾಗಿದ್ದ ಎಐಟಿಯುಸಿಯ ವಿಜಯ ಭಾಸ್ಕರ್ 616 , ಟಿಯುಸಿಐನ ಅಮೀರ್ ಅಲಿ 644 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ.
