ಕೊಚ್ಚಿ: ಅಕ್ಟೋಬರ್ 29 ರ ಭಾನುವಾರದಂದು ಕೇರಳದ ಕಲಮಸ್ಸೆರಿಯಲ್ಲಿ ನಡೆದ ಸ್ಫೋಟದ ವರದಿಯನ್ನು ಧರ್ಮದ ಆಧಾರದ ಮೇಲೆ ಮಾಡಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಬಿತ್ತಿದ ಮಲಯಾಳಂ ಸುದ್ದಿ ವಾಹಿನಿ ರಿಪೋರ್ಟರ್ ಮತ್ತು ಅದರ ಪತ್ರಕರ್ತೆ ಸುಜಯ ಪಾರ್ವತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಕೇರಳ ಸ್ಪೋಟ
ಈ ಬಗ್ಗೆ ತೃಕ್ಕಾಕರ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು), 153 ಎ (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), ಮತ್ತು 34 (ಸಾಮಾನ್ಯ ಉದ್ದೇಶದಿಂದ ಹಲವಾರು ವ್ಯಕ್ತಿಗಳಿಂದ ಕ್ರಿಮಿನಲ್ ಕೃತ್ಯ) ಮತ್ತು ಮತ್ತು ಕೇರಳ ಪೊಲೀಸ್ ಕಾಯಿದೆಯ ಸೆಕ್ಷನ್ 120(ಒ) (ಯಾವುದೇ ಸಂವಹನದ ಮೂಲಕ ತೊಂದರೆ ಉಂಟುಮಾಡುವುದು) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಕೇರಳ ಸ್ಪೋಟ
ಇದನ್ನೂ ಓದಿ: ಜನಪರ ಕಾಳಜಿಯಿಂದ ಬಿಜೆಪಿ ನಾಯಕರು ಬರ ಅಧ್ಯಯನ ಪ್ರವಾಸ ಮಾಡುತ್ತಿಲ್ಲ; ಸಚಿವ ದಿನೇಶ್ ಗುಂಡೂರಾವ್ ಸರಣಿ ಟ್ವೀಟ್
ಆರೋಪಿಗಳು ಕೇರಳದಲ್ಲಿ ಕೋಮು ಸೌಹಾರ್ದತೆಯನ್ನು ಹಾಳು ಮಾಡಲು ಮತ್ತು ಸ್ಫೋಟಗಳ ಬಗ್ಗೆ ವರದಿ ಮಾಡುವಾಗ ಗಲಭೆ ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ದೂರುದಾರ ಯಾಸಿರ್ ಅರಾಫತ್ ಹೇಳಿದ್ದಾರೆ. ಸುದ್ದಿ ಮಾಧ್ಯಮ ರಿಪೋರ್ಟರ್ ಚಾನೆಲ್ ಮತ್ತು ಪತ್ರಕರ್ತೆ ಸುಜಯ ಅವರು ಸ್ಪೋಟದ ಘಟನೆಯನ್ನು ಪ್ಯಾಲೆಸ್ತೀನ್ ಹತ್ಯಾಕಾಂಡಕ್ಕೆ ಜೋಡಿಸುವ ಮೂಲಕ ಸಮಾಜದಲ್ಲಿ ಕೋಮು ವಿಭಜನೆಯನ್ನು ಸೃಷ್ಟಿಸುವ ಉದ್ದೇಶದಿಂದ ಮುಸ್ಲಿಂ ಸಮುದಾಯವನ್ನು ಎಳೆದು ತಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕಳೆದ ಭಾನುವಾರ ಕಲಮಸ್ಸೆರಿಯಲ್ಲಿ ನಡೆದ ಯೆಹೋವನ ಸಾಕ್ಷಿಗಳ ಸಮಾವೇಶದಲ್ಲಿ ಅನೇಕ ಸ್ಫೋಟಗಳು ಸಂಭವಿಸಿದ್ದವು. ಈ ಸ್ಪೋಟದಲ್ಲಿ 12 ವರ್ಷದ ಬಾಲಕಿ ಸೇರಿದಂತೆ ಮೂವರು ಸಾವನ್ನಪ್ಪಿ, 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಈ ಘಟನೆಯ ನಂತರ ಕೇಂದ್ರ ಸಚಿವರ ಸಹಿತ ಹಲವಾರು ಬಲಪಂಥೀಯರು ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಸುಳ್ಳು ಹೇಳಿಕೆಯನ್ನು ನೀಡಿದ್ದರು. ಈ ವೇಳೆ ಎಚ್ಚೆತ್ತ ಕೇರಳ ಪೊಲೀಸರು, ಕೋಮು ಸೌಹಾರ್ದತೆಗೆ ಭಂಗ ತರುವಂತಹ ಯಾವುದೇ ಪ್ರಚೋದನಕಾರಿ ಪೋಸ್ಟ್‌ಗಳು ಅಥವಾ ವರದಿಗಳ ವಿರುದ್ಧ ಎಚ್ಚರಿಕೆ ನೀಡಿದ್ದರು. ಕೇರಳ ಸ್ಪೋಟ
ಇದನ್ನೂ ಓದಿ: ಮನ್ ಕಿ ಬಾತ್ ಅಧ್ಯಯನದ ಬಗ್ಗೆ ಯಾವುದೆ ಮಾಹಿತಿ ಇಲ್ಲ ಎಂದ ಐಐಎಂ | ಸುಳ್ಳು ಹೇಳಿದರೆ ಪ್ರಧಾನಿ ಮೋದಿ? ಕೇರಳ ಸ್ಪೋಟ
“ಯೆಹೋವನ ಸಾಕ್ಷಿಗಳು” ಎಂಬುವುದು ಕ್ರಿಶ್ಚಿಯನ್ ಸಮುದಾಯದ ಒಂದು ಪಂಥವಾಗಿದೆ. ಅವರ ಪ್ರಾರ್ಥನಾ ಸಭೆಯಲ್ಲಿ ಈ ಸ್ಪೋಟ ನಡೆದಿತ್ತು. ಆದರೆ ಬಲಪಂಥೀಯರು ಯಹೂದಿಗಳ ಪ್ರಾರ್ಥನಾ ಸಭೆಯಲ್ಲಿ ಈ ಘಟನೆ ನಡೆದಿದೆ ಎಂಬ ತಪ್ಪು ಮಾಹಿತಿಯನ್ನು ವ್ಯಾಪಕವಾಗಿ ಹಂಚಿಕೊಂಡಿದ್ದರು. ಅಲ್ಲದೆ, ಸ್ಪೋಟ ನಡೆಸಿದವರು ಪ್ಯಾಲೆಸ್ತೀನ್ ಬೆಂಬಲಿಗರು ಎಂಬಂತೆ ಸುಳ್ಳು ಹರಡಿದ್ದರು. ಈ ನಕಲಿ ಸಂದೇಶಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಉಪ ಜನರಲ್ ಶೇಖ್ ದರ್ವೇಶ್ ಸಾಹಿಬ್ ಹೇಳಿದ್ದರು. ಕೇರಳ ಸ್ಪೋಟ
ಸ್ಪೋಟದ ನಂತರ, ಸ್ಪೋಟವನ್ನು ತಾನೆ ನಡೆಸಿದ್ದಾಗಿ ಒಪ್ಪಿಕೊಂಡು “ಯೆಹೋವನ ಸಾಕ್ಷಿಗಳು” ಪಂಗಡದ ಮಾಜಿ ಸದಸ್ಯ ಡೊಮಿನಿಕ್ ಮಾರ್ಟಿನ್ ಎಂಬ ವ್ಯಕ್ತಿ ಭಾನುವಾರವೆ ಪೊಲೀಸರಿಗೆ ಶರಣಾದ್ದಾರೆ. ಅವರು ಯೆಹೋವನ ಸಾಕ್ಷಿಗಳ ಬೋಧನೆಗಳಿಂದ ಭ್ರಮನಿರಸನಗೊಂಡಿದ್ದು, ಅಲ್ಲದೆ ಅವರು ದೇಶವಿರೋಧಿಗಳು ಎಂಬ ಕಾರಣಕ್ಕೆ ಬಾಂಬ್ ಸ್ಟೋಟ ನಡೆಸಿದ್ದಾಗಿ ಆರೋಪಿ ಮಾರ್ಟಿನ್ ಒಪ್ಪಿಕೊಂಡಿದ್ದಾರೆ.
ವಿಡಿಯೊ ನೋಡಿ: ನವೆಂಬರ್ 1 ರಂದು ಯಾವೆಲ್ಲ ರಾಜ್ಯಗಳು ರಾಜ್ಯೋತ್ಸವವನ್ನು ಆಚರಿಸುತ್ತವೆ? ಇಲ್ಲಿದೆ ಸಂಕ್ಷಿಪ್ತ ವಿವರಣೆ