ಹರಿಯಾಣ| ಶಂಕಿತ ನಕಲಿ ಮದ್ಯ ಸೇವನೆ ಪ್ರಕರಣ: ಮೃತರ ಸಂಖ್ಯೆ 12ಕ್ಕೆ ಏರಿಕೆ

ಹರಿಯಾಣ: ಯಮುನಾನಗರ ಜಿಲ್ಲೆಯ ಶಂಕಿತ ನಕಲಿ ಮದ್ಯ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಐದು ಮಂದಿ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ ಹನ್ನೆರಡಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಮುನಾನಗರ ಜಿಲ್ಲೆಯಲ್ಲಿ ಒಟ್ಟು ಹತ್ತು ಮಂದಿ ಮೃತಪಟ್ಟಿದ್ದು, ಪಕ್ಷದ ಅಂಬಾಲಾದಲ್ಲಿ ಎರಡು ಸಾವುಗಳು ವರದಿಯಾಗಿದೆ ಎಂದು ಅವರು ಹೇಳಿದ್ದಾರೆ.

ಹಳೆಯ ಕಾರ್ಖಾನೆಯೊಂದರಲ್ಲಿ ಸುಮಾರು 200 ನಕಲಿ ಮದ್ಯ ತುಂಬಿದ ಬಾಟಲಿ ಬಾಕ್ಸ್‌ಗಳನ್ನು ಬಂಧಿತ ಆರೋಪಿಗಳಿಗೆ ಸರಬರಾಜು ಮಾಡಲಾಗಿದೆ. ಸ್ಥಳದಲ್ಲಿ 14 ಖಾಲಿ ಡ್ರಮ್‌ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಂಬಾಲಾದ ಪೊಲೀಸರು ತಿಳಿಸಿದ್ದಾರೆ. ಯಮುನಾನಾಗರ ಪೊಲೀಸರು ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಿದ್ದು ಈವರೆಗೆ ಏಳು ಮಂದಿಯನ್ನು ಬಂಧಿಸಿದ್ದಾರೆ.

ಹಾಗೆಯೇ ಅಂಬಾಲಾದಲ್ಲಿ ಅಕ್ರಮವಾಗಿ ಮದ್ಯವನು ತಯಾರಿಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಮುಲ್ಲಾನ ಠಾಣಾಧಿಕಾರಿ ಸುರೇಂದರ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಹರಿಯಾಣ| ನಕಲಿ ಮದ್ಯ ಸೇವನೆ ಶಂಕೆ; 6 ಮಂದಿ ಸಾವು

ಘಟನೆ ಕುರಿತು ಪ್ರತಿಪಕ್ಷಗಳಾದ ಕಾಂಗ್ರೆಸ್‌, ಅಮ್‌ ಆದ್ಮಿ ಪಕ್ಷ (ಎಎಪಿ) ಮತ್ತು ಇಂಡಿಯನ್‌ ನ್ಯಾಷನಲ್‌ ಲೋಕ ದಳ (ಐಎನ್‌ಎಲ್‌ಡಿ) ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ವಿಡಿಯೋ ನೋಡಿ: ದುಡಿಯುವ ಜನರ ಮಹಾಧರಣಿ ನವೆಂಬರ್ 26 ರಿಂದ 28 Janashakthi Media

Donate Janashakthi Media

Leave a Reply

Your email address will not be published. Required fields are marked *