ಹರ‍್ಯಾಣ ಪೋಲೀಸ್ ದಮನಕ್ಕೆ ಬಲಿಯಾದ ರೈತ ಸುಶೀಲ್ ಕಾಜಲ್

ಎಐಕೆಎಸ್ ತೀವ್ರ ಶೋಕ, ಎಸ್‌ಡಿಎಂ ವಜಾಕ್ಕೆ, ನ್ಯಾಯಾಂಗ ತನಿಖೆಗೆ ಒತ್ತಾಯ

ಆಗಸ್ಟ್ 28ರಂದು ಹರ್ಯಾಣದ ಕರ್ನಾಲ್‌ನಲ್ಲಿ ಸೀನಿಯರ್ ಡಿವಿಜನಲ್ ಮ್ಯಾಜಿಸ್ಟ್ರೇಟ್(ಎಸ್‌ಡಿಎಂ) ಆಯುಷ್ ಸಿನ್ಹರವರ ‘ಲಾಠಿಗಳಿಂದ ಹಿಂದೆ-ಮುಂದೆ ನೋಡದೆ ತಲೆ ಒಡೆಯಿರಿ’ ಎಂಬ ಆದೇಶಕ್ಕೆ 55 ವರ್ಷದ ರೈತ ಸುಶೀಲ್ ಕಾಜಲ್ ಬಲಿಯಾಗಿದ್ದಾರೆ. ತಲೆಗೆ ತೀವ್ರ ಲಾಠಿಯೇಟುಗಳಿಂದ ಗಾಯಗೊಂಡಿದ್ದ ಅವರು ರಾತ್ರಿ ವೇಳೆಗೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಅವರ ಸಾವಿಗೆ ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ತೀವ್ರ ಶೋಕವನ್ನು ವ್ಯಕ್ತಪಡಿಸುತ್ತ ಎಸ್‌ಡಿಎಂ ಆಯುಷ್ ಸಿನ್ಹರನ್ನು ವಜಾ ಮಾಡಬೇಕು, ಅವರ ರಾಜಕೀಯ ಯಜಮಾನರನ್ನು ಬಯಲಿಗೆಳೆಯಲು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ. ಕೂಡಲೇ ದೇಶಾದ್ಯಂತ ಈ ದಮನವನ್ನು ಪ್ರತಿಭಟಿಸಲು ಕೂಡ ಎಐಕೆಎಸ್ ಕರೆ ನೀಡಿದೆ.

ಇದನ್ನು ಓದಿ: ‘ರೈತರನ್ನು ಚನ್ನಾಗಿ ಹೊಡೆಯಿರಿ’ ಪೊಲೀಸರಿಗೆ ಆದೇಶಿಸಿದ್ದ ಅಧಿಕಾರಿಯ ವಿಡಿಯೊ ವೈರಲ್

ಒಂಭತ್ತು ತಿಂಗಳ ಹಿಂದೆ ಈ ಹೋರಾಟ ಆರಂಭವಾದಾಗಿನಿಂದಲ್ಲೂ ಸುಶೀಲ್ ಕುಮಾರ್ ಎಲ್ಲ ಹೋರಾಟಗಳಲ್ಲಿ ಭಾಗವಹಿಸಿದ್ದು ಈಗ ಬಿಜೆಪಿ-ಜೆಜೆಪಿ ಸರಕಾರದ ರಕ್ತಪಿಪಾಸೆಗೆ ಬಲಿಯಾಗಿದ್ದಾರೆ ಎಂದಿರುವ ಎಐಕೆಎಸ್ ಈ ಸರಕಾರ ಸುಮಾರು 40ಸಾವಿರ ರೈತರ ಮೇಲೆ ಸುಳ್ಳು ಕೇಸುಗಳನ್ನು ಹಾಕಿದೆ, ರಾಜದ್ರೋಹದ ಕರಾಳ ಕೇಸನ್ನೂ ಹಾಕಿದೆ ಎಂದು ನೆನಪಿಸಿದೆ.

ಇದನ್ನು ಓದಿ: ರೈತರ ಮೇಲೆ ಲಾಠಿ ಪ್ರಹಾರ: ಕುಪಿತ ರೈತ ಸಂಘಟನೆಗಳಿಂದ ಹೆದ್ದಾರಿ ತಡೆ

ಆಯುಷ್ ಸಿನ್ಹ ಮೇಲೆ ಐಪಿಸಿ ಸೆಕ್ಷನ್ 302(ಕೊಲೆ) ಅಡಿಯಲ್ಲಿ ಕೇಸ್ ಹಾಕಬೇಕು, ದುಷ್ಟ ಜನರಲ್ ಡಾಯರನನ್ನು ಮತ್ತು ಜಾಲಿಯಾನ್‌ವಾಲಾಬಾಗ್ ಹತ್ಯಾಕಾಂಡವನ್ನು ನೆನಪಿಸುವ ಇಂತಹ ನಾಚಿಕೆಗೆಟ್ಟ ಆದೇಶವನ್ನು ನೀಡಿರುವವರು ಯಾರು ಎಂಬುದನ್ನು ಬಯಲಿಗೆ ತರಲು ನ್ಯಾಯಾಂಗ ತನಿಖೆ ಅಗತ್ಯ. ಎಸ್‌ಡಿಎಂ ಪೋಲೀಸರಿಗೆ ಆದೇಶ ನೀಡುತ್ತಿರುವ ಆಘಾತಕಾರಿ ವೀಡಿಯೋ ಜನಜನಿತವಾಗಿರುವ ಸಂದರ್ಭದಲ್ಲಿ ಸುಪ್ರಿಂ ಕೋರ್ಟ್ ತಾನಾಗಿಯೇ ಈ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳಬೇಕು ಎಂದು ಎಐಕೆಎಸ್ ಕೋರಿದೆ.

ಪೋಲೀಸ್‍ ದಮನಕ್ಕೆ ತುತ್ತಾದ ರೈತ ಮತ್ತು

ಭಟಿಂಡಾದ ಕಲಾವಿದ ಗುರುಪ್ರೀತ್‍ ಕುಂಚದಲ್ಲಿ “ನಾವು ಭಾರತದ ಜನತೆ”

Donate Janashakthi Media

Leave a Reply

Your email address will not be published. Required fields are marked *