ಹಂಪನಾ ಪೊಲೀಸ್ ವಿಚಾರಣೆ : ಕನ್ನಡ ನಾಡು, ನುಡಿಗೆ ಮಾಡಿದ ಅಪಮಾನ. ಪ್ರಗತಿಪರ ಸಂಘಟನೆಗಳ ಪ್ರತಿಭಟನೆ.

ಮಳವಳ್ಳಿ ಜ 23 : ಹಂ.ಪಾ. ನಾಗರಾಜಯ್ಯ ರವರು ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿ ರೈತರ ಐತಿಹಾಸಿಕ ಹೋರಾಟವನ್ನ ಉಲ್ಲೇಖಸಿ ಮಾತನಾಡಿದ್ದನ್ನೆ ನೆಪ ಮಾಡಿಕೊಂಡ ಅವರನ್ನು ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಣೆ ಮಾಡಿರುವ ಪೊಲೀಸ್ ಇಲಾಖೆಯ ಕ್ರಮ ಮತೀಯವಾದಿಗಳ ಕೈಗೊಂಬೆಯಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ , ಜನವಾದಿ ಮಹಿಳಾ ಸಂಘಟನೆ, ಸಿ ಐ ಟಿಯು, ಸಂಘಟನೆಗಳು ಮಳವಳ್ಳಿ ಪ್ರತಿಭಟನೆ  ನಡೆಸಿವೆ.

ಮಳವಳ್ಳಿಯ KSRTC ಬಸ್ ನಿಲ್ದಾಣದ ಮುಂದೆ ನಡೆದ ಪ್ರತಿಭಟನೆಯನ್ನ ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಎನ್ ಎಲ್ ಭರತ್ ರಾಜ್ ಮಾತನಾಡುತ್ತ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಸಂವಿಧಾನದ ಮೇಲೆ ದಾಳಿ ನಡೆಯುತ್ತಿವೆ ಆಯ್ಕೆಯ ಹಕ್ಕು. ಆಹಾರದ ಹಕ್ಕು. ಸಂವಿಧಾನದ ಹಕ್ಕುಗಳ ಮೇಲೆ ದಾಳಿ ನಡೆಯುತ್ತಿವೆ ಸತ್ಯ ಬರೆಯುವವರ ಮೇಲೆ ಹಲ್ಲೆ ನಡೆಯುತ್ತಿವೆ ಬ್ರಿಟಿಷ್‌ ರ ಏಜೆಂಟ್ ರಾಗಿದ್ದ ಆರ್ ಎಸ್ ಎಸ್ ಗೆ ಸ್ವಾತಂತ್ರ್ಯಕ್ಕಾಗಿ ದೇಶ ಪ್ರೇಮಿಗಳ ತ್ಯಾಗ ಬಲಿದಾನದ ಮಹತ್ವಗೊತ್ತಿಲ್ಲ ಅಂದು ವಿದೇಶಿ ಸಾಮ್ರಾಜ್ಯಶಾಹಿಗಳ ಬಲಬುಡುಕರಾಗಿದ್ದರು ಇಂದು ದೇಶಿಯ ಬಂಡವಾಳಶಾಹಿಗಳ ಅದೀನಕ್ಕೆ ತಕ್ಕಂತೆ ಆಡಳಿತ ನಡೆಸುತ್ತಿದ್ದಾರೆಂದರು. ಕಾರ್ಯಾಂಗ, ನ್ಯಾಯಾಂಗಗಳು ತನ್ನತನವನ್ನು ಆಳುವ ಪ್ರಭುಗಳಿಗೆ ಒತ್ತೆಯಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ

ಸಾಹಿತಿಗಳಾದ ಮ.ಸಿ ನಾರಯಣ ಮಾತನಾಡಿ ಹಂಪನಾ ರವರು ಸಾಹಿತ್ಯ ಸಮ್ಮೇಳನದಲ್ಲಿ ಸರಿಯಾಗಿ ಮಾತನಾಡಿದ್ದಾರೆ ರೈತರ ಹೋರಾಟವನ್ನ ಬೆಂಬಲಿಸುವುದು ಭಾರತೀಯ ನಾಗರಿಕನ ಜವಾಬ್ದಾರಿ. ಮೋದಿ ಅಮಿತ್ ಶಾ ಸರ್ವಾಧಿಕಾರಿಯಾಗಿದ್ದಾರೆ ಇವರ ಆಡಳಿತದಲ್ಲಿ ಜನ ಸಾಮಾನ್ಯರಿಗೆ ನ್ಯಾಯ ದೊರಕುತ್ತಿಲ್ಲ ಎಂದರು.

ಇದನ್ನು ಓದಿ : ಪೊಲೀಸ್ ಠಾಣೆಗೆ ಕರೆಯಿಸಿ ಹಂಪನಾ ವಿಚಾರಣೆಗೆ ವ್ಯಾಪಕ ಖಂಡನೆ

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅದ್ಯಕ್ಷರಾದ ದೇವಿ ಮಾತನಾಡಿ ಬಂಡವಾಳಶಾಹಿಗಳ ಅನುಕೂಲಕ್ಕೆ ತಕ್ಕಂತೆ ಕಾನೂನನ್ನು ಜಾರಿಮಾಡಿ, ಕಾರ್ಯಾಂಗ, ಮಾದ್ಯಮ ಅಂಗಗಳು ಸೇರಿದಂತೆ ಎಲ್ಲಾ ಅಂಗಗಳನ್ನ ದುರುಪಯೋಗ ಮಾಡಿಕೊಂಡು ಮೋದಿ ಯಡಿಯೂರಪ್ಪ ಮನೆಯ ಜೀತದಾಳಾಗಿ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಾಡೋಜ ಹಂಪನಾ ರವರಿಗೆ ಅಪಮಾನವನ್ನು ಸಾಹಿತ್ಯ ಪರಿಷತ್ತು .ಸಾಹಿತಿಗಳು ಕವಿಗಳು ಕನ್ನಡದ ಮನಸ್ಸುಗಳು ಮುಕ್ತವಾಗಿ ಖಂಡಿಸಬೇಕು. ಅವರುಗಳು ನೀಡುವ ಪ್ರಶಸ್ತಿಗಳು ಸನ್ಮಾನಗಳಿಗೆ ಅನುದಾನಗಳಿಗಾಗಿ ಆಸೆ ಪಡೆದೆ ಅಧಿಕಾರದ ಹಂಗಿನಲ್ಲಿ ಬಾಳದೆ ಸ್ವಾಭಿಮಾನ ಸ್ವಾಯತ್ತತೆಯನ್ನ ಕಾಪಾಡಬೇಕೆಂದರು.

ಈ ವಿಡೀಯೋ ನೋಡಿ : ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿ, ನಿರ್ದೇಶಕ ಬಿ. ಸುರೇಶ್ ಮಾತುಗಳು

ಸಿ ಐ ಟಿ ಯು.ರಾಜ್ಯ ಮುಖಂಡರಾದ ಜಿ.ರಾಮಕೃಷ್ಣ. ಜನವಾದಿ ಮಹಿಳಾ ಸಂಘಟನೆಯ ಸುನೀತಾ ಮಂಜುಳ ಜಯಶೀಲಾ ಸಿಐಟಿಯು ತಿಮ್ಮೇಗೌಡ ಕೃಷ್ಣ ಪ್ರಾಂತ ರೈತ ಸಂಘದ ಸ್ವಾಮಿ. ಚಿಕ್ಕಮೊಗಣ್ಣ ಸಿದ್ದೇಗೌಡ.ಸೋಮಣ್ಣ. ಶಾಂತರಾಜ್ .ಕರಿಯಪ್ಪ. ದೊಡ್ಡಮರಿಗೌಡ. ಜಯರಾಜ್ .ಪ್ರಸಾದ್ ಸಿದ್ದರಾಜ್ ಮುಂತಾದವರು ಭಾಗವಹಿಸಿದರು.

 

 

Donate Janashakthi Media

Leave a Reply

Your email address will not be published. Required fields are marked *