ಹಾಲು ಉತ್ಪಾದಕ ರೈತರಿಗೆ ಖರೀದಿ ದರ ರೂ.50 ನೀಡುವಂತೆ ಕೆಪಿಆರ್‌ಎಸ್‌ ಪ್ರತಿಭಟನೆ

ಚಿಕ್ಕಬಳ್ಳಾಪುರ: ಹಾಲು ಉತ್ಪಾದಕ ರೈತರಿಗೆ ನೀಡಲಾಗುತ್ತಿರುವ ಖರೀದಿ ದರವನ್ನು ಹೆಚ್ಚಳ ಮಾಡಬೇಕೆಂದು ಹಾಗೂ ದರವನ್ನು ಪ್ರತಿ ಲೀಟರ್ ಗೆ ಕನಿಷ್ಠ ಐವತ್ತು ರೂ ನೀಡಬೇಕೆಂದು ಹಾಗೂ ರೇಷ್ಮೆ, ತೋಟಗಾರಿಕೆ ಇಲಾಖೆಗಳನ್ನು ಕೃಷಿ ಇಲಾಖೆ ಜೊತೆ ವಿಲೀನ ಮಾಡುವ ನಿರ್ಧಾರ ರದ್ದುಪಡಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಯಿತು.

ಜಿಲ್ಲಾಧಿಕಾರಿ ಕಛೇರಿ ಎದುರು  ನಡೆದ ಪ್ರತಿಭಟನೆಯಲ್ಲಿ ನೂರಾರು ರೈತರ ಭಾಗಿಯಾಗಿದ್ದರು. ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘ, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ, ಜಿಲ್ಲಾ ಅಧ್ಯಕ್ಷ  ಪಿ.ಮಂಜುನಾಥ್ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಹೆಚ್ ಪಿ ಲಕ್ಷ್ಮಿನಾರಾಯಣ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತಾನಾಡಿದರು.

ಪ್ರತಿಭಟನೆ ಸ್ಥಳಕ್ಕೆ ಸರ್ಕಾರದ ಉನ್ನತ ಅಧಿಕಾರಿಗಳು ಆಗಮಿಸಿ, ಕರ್ನಾಟಕ ಪ್ರಾಂತ ರೈತ ಸಂಘದ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸ್ವೀಕರಿಸಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಗ್ರಂಥಾಲಯದಿಂದ ಮೆರವಣಿಗೆ ಮೂಲಕ ನೂರಾರು ಸಂಖ್ಯೆಯಲ್ಲಿ ಬಂದು ಜಿಲ್ಲಾಧಿಕಾರಿ ಕಛೇರಿ ಎದುರು ಸಮಾವೇಶಗೊಂಡ ಪ್ರತಿಭಟನಾ ಸಭೆಯಲ್ಲಿ ಬಿಎನ್ ಮುನಿಕೃಷ್ಣಪ್ಪ, ರವಿಚಂದ್ರರೆಡ್ಡಿ, ಶ್ರೀರಾಮಪ್ಪ, ಎಂಎಸ್ ಆನಂದ, ಹೇಮಚಂದ್ರ, ಆದಿನಾರಾಯಣಸ್ವಾಮಿ, ಪಾತಿಮಾ ಬಿ, ಭಾರತಿ, ಮಂಜುನಾಥಚಾರಿ, ಷಾ ನವಾಜ್ ಖಾನ್, ವೈ ಎನ್ ನಾಗರಾಜ, ವೆಂಕಟರಾಜು, ರಾಜಪ್ಪ, ಆದಿನಾರಾಯಣರೆಡ್ಡಿ, ಪಿಸಿ ಮಂಜುನಾಥ, ಶ್ರೀರಾಮ ನಾಯ್ಕ, ಎಸ್ ವೆಂಕಟರಾಮರೆಡ್ಡಿ, ಆರ್ ರಾಮಪ್ಪ, ಕೆವಿಪ್ರಭಾಕರ್ ರೆಡ್ಡಿ, ರಾಮಚಂದ್ರ, ರಾಮರೆಡ್ಡಿ, ಮುನಿಸ್ವಾಮಿ, ಲಕ್ಷ್ಮಿನಾರಾಯಣರೆಡ್ಡಿ, ರಾಹುಲ್, ವೆಂಕಟರೆಡ್ಡಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *