ವಾರಣಾಸಿ : ವಾರಣಾಸಿಯ ಸಿವಿಲ್ ನ್ಯಾಯಾಲಯವೊಂದು ಅಲ್ಲಿರುವ ಗ್ಯಾನವಾಪಿ ಮಸೀದಿಯಿದ್ದಲ್ಲಿ ಒಂದು ದೇವಸ್ಥಾನ ಅಸ್ತಿತ್ವದಲ್ಲಿ ಇತ್ತೇ ಎಂದು ಖಚಿತ ಪಡಿಸಿಕೊಳ್ಳಲು ಒಂದು ಸರ್ವೇ ನಡೆಸಬೇಕು ಎಂದು ಭಾರತದ ಪುರಾತತ್ವ ಸರ್ವೇ (Archaeological Survey of India )ಗೆ ಆದೇಶ ನೀಡಿರುವುದು ಈ ವಿಷಯದಲ್ಲಿಈಗಿರುವ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೋ ಪ್ರತಿಕ್ರಿಯಿಸಿದೆ.
ಪೂಜಾಸ್ಥಳಗಳು (ವಿಶೇಷ ಉಪಬಂಧಗಳು) ಕಾಯ್ದೆ ಇಂಥ ಎಲ್ಲ ಪೂಜಾಸ್ಥಳಗಳಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದು ವಿಧಿಸುತ್ತದೆ.
ಆದ್ದರಿಂದ ಉನ್ನತ ನ್ಯಾಯಾಂಗ ತಕ್ಷಣವೇ ಮಧ್ಯಪ್ರವೇಶಿಸಿ ಕೆಳಗಣ ಕೋರ್ಟಿನ ಆದೇಶವನ್ನು ತೊಡೆದು ಹಾಕಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೋ ಆಗ್ರಹಿಸಿದೆ.