ಅಸ್ಸಾಂ : ಆಂಬ್ಯುಲೆನ್ಸ್‌ನಲ್ಲಿ 14 ಕೋಟಿ . ರೂ ಮೌಲ್ಯದ ಡ್ರಗ್ಸನ್ನು ಸಾಗಿಸುತ್ತಿದ್ದ ಆರೋಪಿಯನ್ನು ಗುವಾಹಟಿ ಪೊಲೀಸರು ವಶಕ್ಕೆ ಪಡೆದ ಘಟನೆ ಆಸ್ಸಾಂ ನಲ್ಲಿ ನಡೆದಿದೆ.
ಗುಪ್ತ ಮಾಹಿತಿಯನ್ನು ಆಧಾರಿಸಿ ಗುವಾಹಟಿ ನಗರ ಪೊಲೀಸ್ ಜಂಟಿ ಆಯುಕ್ತ ಪಾರ್ಥ ಸಾರಥಿ ಮಹಾಂತ ಮತ್ತು ಎಡಿಸಿಪಿ ಕಲ್ಯಾಣ್ ಪಾಠಕ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ, 50,000 ನಿಷೇಧಿತ ಮಾತ್ರೆ, 200 ಗ್ರಾಂ ಹೆರಾಯಿನ್ ಗಳನ್ನು ವಶಕ್ಕೆ ಪಡೆದು, ಅಂಬ್ಯುಲೆನ್ಸ್ ಚಾಲಕ ಮಿರಾಜೌಲ್ ಎಂಬಾತನನ್ನು ಬಂಧಿಸಿದೆ.
ಇದನ್ನೂ ಓದಿ : ತಮ್ಮನ ಶವ ಮಡಿಲಲ್ಲಿಟ್ಟುಕೊಂಡು ಆಂಬ್ಯುಲೆನ್ಸ್‌ಗಾಗಿ ಕಾದು ಕುಳಿತ ಬಾಲಕ
ಎಂಎನ್-03ಸಿ-0037 ನೋಂದಣಿ ಸಂಖ್ಯೆಯ ಆಂಬ್ಯುಲೆನ್ಸ್ ಮಣಿಪುರದಿಂದ ಬರುತ್ತಿತ್ತು. ನಾವು 50,000 ನಿಷೇಧಿತ ಮಾತ್ರೆ, 200 ಗ್ರಾಂ ಹೆರಾಯಿನ್ ಗಳನ್ನು ವಶಕ್ಕೆ ಪಡೆದು, ಅಂಬ್ಯುಲೆನ್ಸ್ ಚಾಲಕ ಮಿರಾಜೌಲ್ ಎಂಬಾತನನ್ನು ಬಂಧಿಸಿದ್ದೇವೆ. ಇದರ ಒಟ್ಟು ಮೌಲ್ಯ 14.10 ಕೋಟಿ ರೂ. ಆಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಪಾರ್ಥ ಸಾರಥಿ ಮಹಾಂತ ಹೇಳಿದ್ದಾರೆ.
ಇಷ್ಟೊಂದು ಪ್ರಮಾಣದ ಡ್ರಗ್ಸ್‌ನ್ನು ಸಾಗಿಸುತ್ತಿರುವುದರ ಹಿಂದೆ ಯಾರೋದೋ ಕೈವಾಡ ಇದೆ. ಚಾಲಕನಿಗೆ ಹಣ ನೀಡಿ ದುರ್ಬಳಿಕೆ ಮಾಡಿಕೊಂಡಿರಬಹುದು. ಇದರ ಹಿಂದೆ ರಾಜಕಾರಣಿಗಳ ಪ್ರಭಾವ ಇದ್ದಂತೆ ಕಾಣುತ್ತಿದೆ. ಸಮಗ್ರ ತನಿಖೆಯಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.