12 ದಿನಕ್ಕೆ ಕಾಲಿಟ್ಟ ಗುಬ್ಬಿ ತಾಲ್ಲೂಕು ಬಗರ್‌ಹುಕಂ ಸಾಗುವಳಿದಾರರ ಪ್ರತಿಭಟನಾ ಧರಣಿ

ತುಮಕೂರು: ಇಲ್ಲಿನ ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿ ಗಂಗಯ್ಯನಪಾಳ್ಯ ಸುತ್ತಮುತ್ತಲಿನ ಗ್ರಾಮಗಳ ಬಗರ್‌ಹುಕಂ ಸಾಗುವಳಿ ರೈತರು ಅರಣ್ಯ ಇಲಾಖೆ ದೌರ್ಜನ್ಯ ವಿರೋಧಿಸಿ ಅನಿರ್ದಿಷ್ಟ ಧರಣಿ ನಡೆಸಿದ್ದು,ಈಗ ಅದು ಹನ್ನೆರಡನೇ ದಿನಕ್ಕೆ ಕಾಲಿಟ್ಟಿದೆ. ಧರಣಿ

ಈ ಹಿಂದೆ ಫಾರಂ ನಂ 50,53 ಹಾಗೂ 57 ರಲ್ಲಿ ತಮ್ಮ ಸಾಗುವಳಿ ಸಕ್ರಮ ಕೋರಿ ಸಲ್ಲಿಸಿರುವ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇರುವಾಗಲೇ ಕಾನೂನು ಬಾಹಿರವಾಗಿ ಒಕ್ಕಲೆಬ್ಬಿಸುವ ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ಮಾರ್ಚ್ -ಏಪ್ರಿಲ್ 2023 ರಂದು ನಡೆದ ಸಾಗುವಳಿ ರೈತರ ಪ್ರತಿಭಟನೆ ನಡೆಸಿದ್ದರು.ಈ ಪ್ರತಿಭಟನೆ ದಮನ ಮಾಡಲು ಅರಣ್ಯ ಇಲಾಖೆ ಗೊಂಡಾಗಳು ದೊಣ್ಣೆ ಬಳಸಿ ರೈತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು ಎಂದು ಕರ್ನಾಟಕ ಪ್ರಾಂತರೈತ ಸಂಘ( KPRS) ತಿಳಿಸಿದೆ.

ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ಪ್ರಾಂತ್ಯ ರೈತ ಸಂಘ (KPRS) ಗುಬ್ಬಿ ತಾಲ್ಲೂಕು ಅಧ್ಯಕ್ಷ ,ದೊಡ್ಡ ನಂಜಯ್ಯ ರವರ ತಲೆಗೆ ತೀವ್ರ ಪೆಟ್ಟಾಗಿ ಮೂವತ್ತೈದು ಹೊಲಿಗೆ ಹಾಕಲಾಗಿತ್ತು. ಇವರು ಸೇರಿ ಹತ್ತಾರು ಕೆಪಿಆರ್‌ಎಸ್‌ ಕಾರ್ಯಕರ್ತರು ಹಾಗೂ ಸಾಗುವಳಿದಾರರು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಧರಣಿ

ಬಗರ್‌ಹುಕಂ ಸಾಗುವಳಿ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇರುವಾಗ ,ಗಂಗಯ್ಯನಪಾಳ್ಯ ಬಗರ್‌ಹುಕಂ ಭೂಮಿಯಿಂದ ದೂರ ಉಳಿಯಬೇಕು ಎಂದು ಅಂದಿನ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು. ಬಗರ್ ಹುಕಂ ಭೂಮಿಯನ್ನು ರೈತರ ಸ್ವಾಧೀನ ಪರಿಶೀಲಿಸದೇ ಅರಣ್ಯ ಇಲಾಖೆಗೆ ವರ್ಗಾಯಿಸಿರುವುದನ್ನು ವಾಪಸ್ಸು ಪಡೆಯಲು ರೈತರು ತಮ್ಮ ಪ್ರಯತ್ನ ಮುಂದುವರೆಸುತ್ತಿರುವಾಗಲೇ ಮತ್ತೇ ಕಳೆದ ತಿಂಗಳು (19 -10-23)ರಂದು ಅರಣ್ಯ ಇಲಾಖೆ ಸುಮಾರು ನಾಲ್ಕು ನೂರು ಪೋಲೀಸರ ನಾಕಾಬಂಧಿ ರಕ್ಷಣೆಯೊಂದಿಗೆ ಗಿಡ ನೆಡಲು ಪ್ರಯತ್ನವನ್ನು ನಡೆಸಿತ್ತು.

ಇದನ್ನೂ ಓದಿ: ಜೋಳಿಗೆಯೇ ಆಂಬ್ಯುಲೆನ್ಸ್, ಆಟೋಗೆ 2000 ರೂಪಾಯಿ ಬಾಡಿಗೆ

ಈ ಕಾರಣಕ್ಕಾಗಿ ಬಗರ್‌ಹುಕಂ ಸಾಗುವಳಿದಾರರ ಕಾನೂನು ಬದ್ಧ ಹಕ್ಕುಗಳಿಗೆ ಧಕ್ಕೆ ಉಂಟು ಮಾಡುತ್ತಿರುವ ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ಗಂಗಯ್ಯನಪಾಳ್ಯ ಸುತ್ತಮುತ್ತಲಿನ ರೈತರು ಪ್ರತಿಭಟನೆ ನಡೆಸುತ್ತಿದ್ದು. ಈಗ ಹನ್ನೆರಡು ದಿನಕ್ಕೆ ಕಾಲಿಟ್ಟಿದೆ.

ಅಷ್ಟೇಲ್ಲದೆ ಬಗರ್ ಹುಕಂ ರೈತರ ಹಕ್ಕುಗಳ ರಕ್ಷಣೆಗಾಗಿ ನಡೆಯುತ್ತಿರುವ ಈ ಹೋರಾಟವನ್ನು ರಾಜ್ಯಾದ್ಯಂತ ಬಗರ್ ಹುಕಂ ಸಾಗುವಳಿದಾರರು ಬೆಂಬಲಿಸಲು ಕರ್ನಾಟಕ ಪ್ರಾಂತ್ಯ ರೈತ ಸಂಘ (KPRS) ರಾಜ್ಯದ ಜನತಗೆ ಮನವಿ ಮಾಡಿದೆ.

ವಿಡಿಯೋ ನೋಡಿ: ಬಿಸಿಯೂಟ ನೌಕರರ ಬದುಕು ಹಳಸದಿರಲಿ Janashakthi Media

Donate Janashakthi Media

Leave a Reply

Your email address will not be published. Required fields are marked *