ಜಿಎಸ್‌ಟಿಯಲ್ಲಿ ಬದಲಾವಣೆ: ಶೇ 5 ರ ದರ ತೆಗೆಯಲು ಚಿಂತನೆ

ನವದೆಹಲಿ: ಈಗಿರುವ ಜಿಎಸ್‌ಟಿ ಸ್ವರೂಪ ನಾಲ್ಕು ತೆರಿಗೆ ವಿಭಾಗಗಳಲ್ಲಿದ್ದು, ಶೇ 5, 12, 18, 28 ರ ವಿಭಾಗಗಳಿವೆ. ಮುಂದಿನ ತಿಂಗಳು ಜಿಎಸ್ ಟಿ ಪರಿಷತ್ ಸಭೆ ನಡೆಯಲಿದ್ದು, ಶೇ 5 ರ ತೆರಿಗೆ ದರವನ್ನು (ಸ್ಲ್ಯಾಬ್) ತೆಗೆದುಹಾಕುವ ಪ್ರಸ್ತಾವನೆಯನ್ನು ಪರಿಗಣಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹೆಚ್ಚು ಮಂದಿ ಬಳಸುವ ಸರಕುಗಳ ತೆರಿಗೆ ವಿಭಾಗವನ್ನು ಶೇ 3ಕ್ಕೆ ವರ್ಗಾವಣೆ ಮಾಡಿ, ಉಳಿದ ಸರಕುಗಳ ತೆರಿಗೆ ದರವನ್ನು ಶೇ 8 ರ ವಿಭಾಗಕ್ಕೆ ಸೇರಿಸುವ ಪ್ರಸ್ತಾವನೆ ಇದೆ.

ಹಲವು ರಾಜ್ಯಗಳ ಆದಾಯ ಏರುತ್ತಿದ್ದು ಜಿಎಸ್‌ಟಿ ವಿಷಯವಾಗಿ ಕೇಂದ್ರದಿಂದ ಪರಿಹಾರದ ಅವಲಂಬನೆ ಕಡಿಮೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಜಿಎಸ್ ಟಿ ಪರಿಷತ್ ತೆರಿಗೆ ದರದಲ್ಲಿ ಮಹತ್ವದ ಬದಲಾವಣೆಗಳಿಗೆ ಮುಂದಾಗಿದೆ.

ಬ್ರಾಂಡೆಡ್ ಅಲ್ಲದ, ಪ್ಯಾಕ್ ಮಾಡದ ಆಹಾರ ಪದಾರ್ಥಗಳಿಗೆ ಯಾವುದೇ ತೆರಿಗೆ ವಿಧಿಸದೇ ಜಿಎಸ್‌ಟಿ ಯಿಂದ ಹೊರಗೆ ಇಡಲಾಗಿದೆ. ಮೂಲಗಳ ಪ್ರಕಾರ ಆದಾಯ ವೃದ್ಧಿಗಾಗಿ ಆಹಾರೇತರ ಸರಕುಗಳನ್ನು ಶೇ 3ಕ್ಕೆ ಇಳಿಕೆ ಮಾಡುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಯೋಜಿಸಿದೆ.

ಶೇ 5 ರಷ್ಟಿದ್ದ ತೆರಿಗೆ ದರವನ್ನು ಶೇ 7 ಕ್ಕೆ ಅಥವಾ 8, 9ಕ್ಕೆ ಏರಿಕೆ ಮಾಡುವ ಪ್ರಸ್ತಾವನೆಯೂ ಇದೆ. ಶೇ 5 ರ ತೆರಿಗೆಯನ್ನು ಶೇ 1 ರಷ್ಟು ಏರಿಕೆ ಮಾಡಿದರೂ ವಾರ್ಷಿಕವಾಗಿ ಇದರಿಂದ 50,000 ಕೋಟಿ ರೂಪಾಯಿ ಆದಾಯ ಹೆಚ್ಚಾಗಲಿದೆ.

Donate Janashakthi Media

Leave a Reply

Your email address will not be published. Required fields are marked *