ಬೆಂಗಳೂರು : ಕೇಂದ್ರ ಸರ್ಕಾರದ ನೂತನ ಜಿಎಸ್‌ಟಿ ದರ ಸೋಮವಾರ (ಜುಲೈ 18) ದಿಂದ ಅನ್ವಯವಾಗಲಿದೆ. ಹಾಲಿನ ಉತ್ಪನ್ನಗಳ ಮೇಲೂ ಕೇಂದ್ರ ಸರ್ಕಾರ ಶೇಕಡ 5 ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಿದೆ.
ಸೋಮವಾರದಿಂದ ದಿನನಿತ್ಯದ ವಸ್ತುಗಳನ್ನು ಖರೀದಿಸಲು ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ. ಮೊಸರು, ಲಸ್ಸಿ, ಮಜ್ಜಿಗೆ, ಪನೀರ್, ಗೋಧಿ, ಅಕ್ಕಿ ಮುಂತಾದವುಗಳನ್ನು ಮೊದಲೇ ಪ್ಯಾಕ್ ಮಾಡಲಾದ ಮತ್ತು ಲೇಬಲ್ ಮಾಡಿದ ಉತ್ಪನ್ನಗಳಿಗೆ ಶೇಕಡ 5 ರಷ್ಟು ಜಿಎಸ್‌ಟಿ ವಿಧಿಸಲಾಗಿದ್ದು, ಹೊಸ ದರ ಜಾರಿಗೆ ಬರಲಿದೆ.
ಆಹಾರ ವಸ್ತುಗಳನ್ನು ಹೊರತು ಪಡಿಸಿ ಇತರೆ ವಸ್ತುಗಳು ಕೂಡ ದುಬಾರಿಯಾಗಲಿದ್ದು, ಎಲ್‌ಇಡಿ ದೀಪಗಳು, ಶಾಯಿ, ಚಾಕು, ಬ್ಲೇಡ್, ಪೆನ್ಸಿಲ್ ಶಾರ್ಪನರ್, ಸ್ಪೂನ್, ಪೋರ್ಕ್ಸ್, ಏಣಿ, ಸ್ಕಿಮ್ಮರ್, ಕೇಕ್ ಸರ್ವರ್, ಲೋಹ ಮುದ್ರಿತ ಸರ್ಕ್ಯೂಟ್ ಬೋರ್ಡ್‌ಗಳ ಮೇಲೆ ಶೇಕಡ 18ರಷ್ಟು ತೆರಿಗೆ ವಿಧಿಸಲಾಗುತ್ತಿದ್ದು, ಮತ್ತಷ್ಟು ದುಬಾರಿಯಾಗಲಿದೆ.
ವಿದ್ಯುತ್ ಚಾಲಿತ ಪಂಪ್‌ಗಳು, ಸೈಕಲ್ ಪಂಪ್, ಡೈರಿ ಯಂತ್ರೋಪಕರಣ, ಶ್ರೇಣೀಕರಿಸಿದ ಬೀಜಗಳು, ಧಾನ್ಯದ ಕಾಳುಗಳಿಗೆ ಬಳಸುವ ಯಂತ್ರಗಳು, ಗಿರಣಿ ಉದ್ಯಮದಲ್ಲಿ ಬಳಸುವ ಯಂತ್ರಗಳು, ವೆಟ್ ಗ್ರೈಂಡರ್ ಮೇಲೂ ಶೇಕಡ 18 ರಷ್ಟು ತೆರಿಗೆ ವಿಧಿಸಲಾಗುತ್ತಿದ್ದು, ಇವುಗಳ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳವಾಗಲಿದೆ.
ಯಾವುದೆಲ್ಲಾ ದುಬಾರಿ?
ಪ್ಯಾಕ್ ಮಾಡಿದ ಆಹಾರ ವಸ್ತು. ( ಮೀನು, ಮಾಂಸ, ಒಣಗಿಸಿದ ತರಕಾರಿ, ಜೇನುತುಪ್ಪ, ಬೆಲ್ಲ, ತುಪ್ಪ, ಅಕ್ಕಿ, ಗೋಧಿ ಸೇರಿ ಇತರೆ ಧಾನ್ಯಗಳು) ದುಬಾರಿಯಾಗಲಿವೆ. ಇನ್ನೂ ಎಲ್‌ಇಡಿ ಬಲ್ಬ್, ಲ್ಯಾಂಪ್‌ಗಳ ಮೇಲೂ 18 ಪರ್ಸೆಂಟ್‌ನಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಅಲ್ಲದೇ, ಅಸ್ಪತ್ರೆಯಲ್ಲಿ 5 ಸಾವಿರ ರೂಪಾಯಿ ಮೇಲ್ಪಟ್ಟ ಸ್ಪೆಷಲ್ ವಾರ್ಡ್‌ಗೂ 5 ಪರ್ಸೆಂಟ್ ತೆರಿಗೆ ಬೀಳಲಿದೆ. ಇನ್ನೂ ಚೆಕ್ ಬುಕ್ ಜಾರ್ಜ್ ಕೂಡಾ 18 ಪರ್ಸೆಂಟ್ ಹೆಚ್ಚಾಗಲಿದೆ. ಇನ್ನು 1 ಸಾವಿರ ರೂಪಾಯಿ ಒಳಗಿನ ಹೋಟೆಲ್ ರೂಮ್‌ಗಳಿಗೂ 12 ಪರ್ಸೆಂಟ್ ಜಿಎಸ್‌ಟಿ ಇರಲಿದೆ. ಕ್ಯಾಸಿನೋ, ಆನ್‌ಲೈನ್ ಗೇಮ್ ಆಡೋರಿಗೂ ಟ್ಯಾಕ್ಸ್ ಬರೆ ಬಿದ್ದಿದ್ದು, ಬರೋಬ್ಬರಿ 28 ಪರ್ಸೆಂಟ್ ಜಿಎಸ್‌ಟಿ ಹಾಕಲಾಗಿದೆ. ಇನ್ನುಳಿದಂತೆ, ಸೋಲಾರ್ ವಾಟರ್ ಹೀಟರ್, ಇಂಕ್, ಚರ್ಮದ ಉತ್ಪನ್ನ, ಟೈಲರಿಂಗ್, ಜವಳಿ ಸೇವೆ, ಬಾಡಿಗೆ ರೂಮ್ ನೀಡುವ ಧಾರ್ಮಿಕ ಕೇಂದ್ರಗಳು, ಬಾಡಿಗೆ ವಿಧಿಸುವ ವಾಣಿಜ್ಯ ಕೇಂದ್ರಗಳಿಗೂ ಟ್ಯಾಕ್ಸ್ ಹೊರೆಬಿದ್ದಿದೆ.
ಪೇಟೆ ಮತ್ತು ಎಪಿಎಂಸಿ ಮಾರ್ಕೆಟ್ ಸದ್ಯದ ದರ ಹಾಗೂ ನಾಳೆ ಜಿಎಸ್ಟಿ ಸೇರಿಸಿದ್ರೆ ದರದ ಮಾಹಿತಿ
ಅಕ್ಕಿ- 1 ಕೆಜಿಗೆ- 50 ರೂಪಾಯಿ, 10 ಕೆಜಿಗೆ- 500 ರೂಪಾಯಿ, ಜಿಎಸ್ಟಿ ಸೇರಿಸಿದ್ರೆ- 10 ಕೆಜಿಗೆ- 525, ರೂಪಾಯಿ 5%
ಹೆಸರು ಬೆಳೆ- 1 ಕೆಜಿಗೆ- 110 ರೂಪಾಯಿ, 10 ಕೆಜಿಗೆ- 1100 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 1155
ತೊಗರಿಬೆಳೆ- ಕೆಜಿಗೆ- 100 ರೂಪಾಯಿ, 10 ಕೆಜಿಗೆ- 1000 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 1050 ರುಪಾಯಿ
ಉದ್ದಿನಬೆಳೆ ಕೆಜಿಗೆ- 120 ರೂಪಾಯಿ, 10 ಕೆಜಿಗೆ- 1200 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 1260
ಹೆಸರು ಕಾಳು ಕೆಜಿಗೆ- 100 ರೂಪಾಯಿ, 10 ಕೆಜಿಗೆ- 1000. ಜಿಎಸ್ಟಿ ಸೇರಿಸಿದ್ರೆ- 1050 ರೂಪಾಯಿ
ಕಡಲೆ ಬೇಳೆ ಕೆಜಿಗೆ- 75 ರೂಪಾಯಿ, 10 ಕೆಜಿಗೆ- 750 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 787
ಕಡಲೆಕಾಳು ಕೆಜಿಗೆ- 65 ರೂಪಾಯಿ, 10 ಕೆಜಿಗೆ- 650 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 682 ರೂಪಾಯಿ
ಹುರಿಕಡಲೆ ಕೆಜಿಗೆ- 80 ರೂಪಾಯಿ, 10 ಕೆಜಿಗೆ- 800 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ-840
ಉದ್ದಿನ ಕಾಳು- 110 ರೂಪಾಯಿ, 10 ಕೆಜಿಗೆ- 1100 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 1155 ರೂಪಾಯಿ
ಹಲಸಂದೆ ಕಾಲು ಕೆಜಿಗೆ- 90 ರೂಪಾಯಿ, 10 ಕೆಜಿಗೆ- 900 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 945 ರೂಪಾಯಿ
ಕಾಬೂಲ್ ಕಡಲೆ ಕೆಜಿಗೆ- 120 ರೂಪಾಯಿ, 10 ಕೆಜಿಗೆ- 1200. ಜಿಎಸ್ಟಿ ಸೇರಿಸಿದ್ರೆ- 1260
ಬಟಾಣಿ ಕೆಜಿಗೆ- 85 ರೂಪಾಯಿ, 10 ಕೆಜಿಗೆ- 850 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 892
ಬೆಲ್ಲ ಕೆಜಿಗೆ- 60 ರೂಪಾಯಿ, 10 ಕೆಜಿಗೆ- 600 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ- 630 ರೂಪಾಯಿ
ಗೋದಿ ಹಿಟ್ಟು ಕೆಜಿಗೆ- 45 ರೂಪಾಯಿ, ಹತ್ತು ಕೆಜಿಗೆ-450 ರೂಪಾಯಿ. ಜಿಎಸ್ಟಿ ಸೇರಿಸಿದ್ರೆ-472 ರೂಪಾಯಿ